ವಿಜಯಪುರ: ಒಂದುವರೆ ವರ್ಷದ ಮಗು ಸೇರಿ ಐವರು ಕೋವಿಡ್-19 ರೋಗಿಗಳು ಗುಣಮುಖ

ವಿಜಯಪುರ ಮೇ.01: ಕೋವಿಡ್-19 ದಿಂದ ಗುಣಮುಖರಾದ ಐವರು ರೋಗಿಗಳನ್ನು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಒಂದುವರೆ ವರ್ಷದ ಹೆಣ್ಣುಮಗು ರೋಗಿ ಸಂಖ್ಯೆ 310, ವೃದ್ಧರಾದ 65 ವರ್ಷ ವಯೋಮಾನದ ರೋಗಿ ಸಂಖ್ಯೆ 306, 62 ವಯೋಮಾನದ ವೃದ್ಧ ರೋಗಿ ಸಂಖ್ಯೆ 307, 60 ವಯೋಮಾನದ ರೋಗಿ ಸಂಖ್ಯೆ 362 ಹಾಗೂ 36 ವರ್ಷ ವಯೋಮಾನದ ರೋಗಿ ಸಂಖ್ಯೆ 308 ಇಂದು ಬಿಡುಗಡೆಗೊಂಡಿದ್ದು, ಜಿಲ್ಲೆಯಲ್ಲಿ ಈವರೆಗೆ 11 ಕೋವಿಡ್-19 ಪಾಸಿಟಿವ್ ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ. ಇಂದು […]
ವಿಜಯಪುರ: ಜಿಲ್ಲೆಯಲ್ಲಿ ಈವರೆಗೆ ಕೊರೋನಾ ಸೋಂಕಿನಿಂದ 6 ಜನ ಗುಣಮುಖ ಇಂದು ಗುಣಮುಖರಾದ ಐದು ಜನ ರೋಗಿಗಳಿಗೆ ಚಪ್ಪಾಳೆ ತಟ್ಟಿ, ಮುಂದಿನ ಜೀವನಕ್ಕೆ ಶುಭ ಹಾರೈಸಿ, ಬಿಡುಗಡೆ

ವಿಜಯಪುರ ಎ.27 : ಕೋವಿಡ್-19 ಸೋಂಕಿತ ಐವರು ರೋಗಿಗಳು ಸಹ ಗುಣಮುಖರಾಗಿದ್ದು, ಜಿಲ್ಲಾಸ್ಪತ್ರೆಯಿಂದ ಇಂದು ಬಿಡುಗಡೆ ಗೊಳಿಸಲಾಗಿದೆ ಎಂದು ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ರೋಗಿ ಸಂಖ್ಯೆ 221 ಬಿಡುಗಡೆಗೊಳಿಸಲಾಗಿದ್ದು, ಅದರಂತೆ ಇಂದು ಕೋವಿಡ್-19 ಮಹಾಮಾರಿಯಿಂದ ಗುಣಮುಖರಾದ ಐದು ಜನರಿಗೆ ಚಪ್ಪಾಳೆ ತಟ್ಟುವ ಮೂಲಕ, ಸಸಿ ನೀಡುವ ಮೂಲಕ ಹಾಗೂ ಜಿಲ್ಲಾಡಳಿತದ ವತಿಯಿಂದ ಡ್ರೈಫ್ರೂಟ್ಸ್ ನೀಡಿ ಸಂಭ್ರಮದ ಕ್ಷಣವಾಗಿ ವೈದ್ಯರು, ವೈದ್ಯ ಸಿಬ್ಬಂದಿಗಳು ರೋಗಿಗಳಿಗೆ ಬೀಳ್ಕೋಟ್ಟರು. ಇಂದು ಬಿಡುಗಡೆಗೊಂಡ ಐವರು ರೋಗಿಗಳಲ್ಲಿ ರೋಗಿ ಸಂಖ್ಯೆ 221 […]
ವಿಜಯಪುರ: ಜಿಲ್ಲೆಯಲ್ಲಿ ತಂಬಾಕು ಮಾರಾಟ ಮತ್ತು ಬಳಕೆಗೆ ನಿಷೇದ

ವಿಜಯಪುರ ಎ.27 : ಜಿಲ್ಲೆಯಲ್ಲಿ ಕೊಟ್ಟಾ 2003 ಕಾಯ್ದೆಯಡಿ ದಿನಾಂಕ : 25-04-2020 ರಂದು ಸುರೇಖಾ, ಜಂಟಿ ನಿರ್ದೇಶಕರು ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಮತ್ತು ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿಗಳಾದ ಡಾ.ಮಲ್ಲನಗೌಡ ಬಿರಾದಾರ ಅವರ ನೇತೃತ್ವದಲ್ಲಿ ವಿವಿಧ ಕಿರಾಣಾ ಅಂಗಡಿಗಳ ಮೇಲೆ ದಾಳಿ ನಡೆಸಿ, ಪ್ರಕರಣ ದಾಖಲಿಸಿ ದಂಡ ವಿಧಿಸಲಾಗಿದೆ ಎಂದು ಜಿಲ್ಲಾ ತಂಬಾಕು ನಿಯಂತ್ರಣ ಘಟಕದ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ತಿಳಿಸಿದ್ದಾರೆ. ವಿಜಯಪುರದ ಜಲನಗರ ಪೊಲೀಸ್ ಠಾಣಾ […]
ವಿಜಯಪುರ: ಅಕ್ರಮ ಮಧ್ಯ ಮಾರಾಟ ಎರಡು ಬಾರ್ ಗಳ ಲೈಸನ್ಸ್ ರದ್ದು

ವಿಜಯಪುರ ಎ.25: ಕೊರೋನಾ ವೈರಸ್ ತಡೆಗಟ್ಟುವ ಹಿನ್ನಲೆಯಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಪಾಡಲು ಅಬಕಾರಿ ಇಲಾಖೆ ವತಿಯಿಂದ ರಾಜ್ಯಾದ್ಯಂತ ಕರ್ನಾಟಕ ಅಬಕಾರಿ ಕಾಯ್ದೆ 1965ರ ಕಲಂ 21(1) ಹಾಗೂ 3(2) ರನ್ವಯ ದಿನಾಂಕ 14-03-2020, 21-03-2020 ಮತ್ತು 24-03-2020 ರಿಂದ ಜಾರಿಗೆ ಬರುವಂತೆ ಎಲ್ಲ ಮಧ್ಯದಂಗಡಿಗಳನ್ನು ಮಚ್ಚಲು ಆದೇಶಿಸಲಾಗಿದೆ ಎಂದು ವಿಜಯಪುರದ ಅಬಕಾರಿ ಇಲಾಖೆಯ ಉಪ ಆಯುಕ್ತರು ತಿಳಿಸಿದ್ದಾರೆ. ಈ ಆದೇಶ ಉಲ್ಲಂಘಿಸಿ ಪ್ರೇಸಿಡೆಂಟ್ ಮರ್ಚಂಟ್ಸ್ ರಿಕ್ರಿಯೇಶನ್ ಕ್ಲಬ್ ಸಿಲ್-4 ಮತ್ತು […]
ವಿಜಯಪುರ: ಬಸವಣ್ಣನವರ ಸಪ್ತಸೂತ್ರ ವಚನಗಳು ಜಗತ್ತಿಗೆ ಮಾದರಿ -ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

ವಿಜಯಪುರ ಎ.26: ಜಗಜ್ಯೋತಿ, ವಿಶ್ವಗುರು ಬಸವಣ್ಣನವರ ಸಪ್ತಸೂತ್ರ ವಚನಗಳು ಇಂದಿನ ಸಮಾಜಕ್ಕೆ ಮಾದರಿಯಾಗಿವೆ . ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಜಯಂತಿ ಅಂಗವಾಗಿ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ, ಗೌರವ ಅರ್ಪಿಸಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್ ಅವರು ಮಾತನಾಡಿದರು. ಮಹಿಳೆಯರ ಸಮಾನತೆ ಹಾಗೂ ಹಕ್ಕುಗಳಿಗಾಗಿ ದ್ವನಿ ಎತ್ತಿದವರು, ಲಿಂಗ, ಬೇಧ ಮರೆತು ಮಾನವರ ಏಕತೆಗಾಗಿ ಹೋರಾಟ ಮಾಡಿ ದುಡಿಯುವ ವರ್ಗಕ್ಕಾಗಿ, ಕಾಯಕ ಜೀವಿಗಳಿಗಾಗಿ, ನೊಂದವರ ಏಳಿಗೆಗಾಗಿ ಅವಿರತ ಶ್ರಮಿಸಿದ ಅವರು ಧರ್ಮವನ್ನು ಉಳಿಸಿ ಬೆಳೆಸಬೇಕು ಎಂದು […]
ವಿಜಯಪುರ: ಆರ್ಥಿಕ ಸಂಕಷ್ಟದಲ್ಲಿರುವ ಕಲಾವಿದರು/ಸಾಹಿತಿಗಳಿಂದ ಅರ್ಜಿ ಆಹ್ವಾನ

ವಿಜಯಪುರ ಎ.26 : ಕೊರೋನಾ ವೈರಸ್ ನಿಯಂತ್ರಣದ ಹಿನ್ನೆಲೆಯಲ್ಲಿ ಲಾಕ್‍ಡೌನ್ ನಿಯಮ ಜಾರಿಯಲ್ಲಿರುವುದರಿಂದ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಲಾವಿದರು/ಸಾಹಿತಿಗಳಿಗೆ ಧನ ಸಹಾಯ ಮಾಡಲು ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು ವೃತ್ತಿನಿರತ ಕಲಾವಿದರಾಗಿದ್ದು, ಕನಿಷ್ಠ 10 ವರ್ಷ ಕಲಾ ಸೇವೆ ಮಾಡಿರಬೇಕು. ಕನ್ನಡ ಮತ್ತು ಸಂಸ್ಕøತಿ ಇಲಾಖೆಯಿಂದ ಮಾಸಾಶನ ಪಡೆಯುತ್ತಿರಬಾರದು, ಯಾವುದೇ ಸರ್ಕಾರಿ ನೌಕರಿಯಲ್ಲಿರಬಾರದು. ತಮ್ಮ ಆಧಾರ ಸಂಖ್ಯೆ, ದೂರವಾಣಿ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ (ಬ್ಯಾಂಕ್ ಪುಸ್ತಕದ ಝರಾಕ್ಸ್ ಪ್ರತಿ ಲಗತ್ತಿಸಿ) ವಿವರಗಳನ್ನೊಳಗೊಂಡ ಅರ್ಜಿಯನ್ನು […]
ವಿಜಯಪುರ: ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯಡಿ ಕೂಡಲೇ ನೀರು ಬಿಡಲು ಸೂಚನೆ

ವಿಜಯಪುರ ಎ.26 : ಜಿಲ್ಲೆಯ 17 ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಗಳಲ್ಲಿ 296 ಜನವಸತಿಗಳು, ಐಬಿಸಿ ಯೋಜನೆಯಡಿ ಉಮರಜ, ದಸೂರ ಸೇರಿದಂತೆ ಕೆಲವು ಗ್ರಾಮಗಳಲ್ಲಿ ನೀರಿನ ತೊಂದರೆಯಾಗುತ್ತಿದ್ದು, ಕಾಲುವೆಗಳ ಮೂಲಕ ನೀರು ಅತ್ಯವಶ್ಯಕವಾಗಿದೆ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ತಿಳಿಸಿದ್ದಾರೆ. ಅದರಂತೆ ಈ 17 ಬಹುಹಳ್ಳಿ ಕುಡಿಯುವ ನೀರು ಯೋಜನೆಗಳಲ್ಲಿ 296 ಜನವಸತಿಯ ಯೋಜನೆಯ ಉಮರಜ, ದಸೂರ, ನಂದರಗಿ, ರೇವಂತಗಾವ, ಹತ್ತಳ್ಳಿ, ಹಾವಿನಾಳ್, ನೀವರಗಿ, ಟಾಕಳಿ, ಮರಗೂರ, ಧೂಳಖೇಡ, ಉಮರಾಣಿ ಸೇರಿದಂತೆ ಇನ್ನಿತರ […]
ವಿಜಯಪುರ: ವೈದ್ಯ ಸಿಬ್ಬಂದಿಗಳ ಪರಿಶ್ರಮದ ಫಲವಾಗಿ ಕೋವಿಡ್-19 ರೋಗಿ ಗುಣಮುಖ

ವಿಜಯಪುರ ಎ.26 : ಜಿಲ್ಲೆಯ ಜನತೆಗೆ ಇಂದು ಸಂತಸದ ಕ್ಷಣ. ವೈದ್ಯರು, ವೈದ್ಯ ಸಿಬ್ಬಂದಿಗಳು ಹಾಗೂ ಕೊರೋನಾ ಪಾಸಿಟಿವ್ ರೋಗಿಗಳಲ್ಲಿ ಆತ್ಮಸ್ಥೈರ್ಯ ತುಂಬಿದ ಕ್ಷಣ. ಹಲವು ದಿನಗಳಿಂದ ಆತಂಕ ಸೃಷ್ಟಿಸಿದ್ದ ಈ ರೋಗದ ವಿರುದ್ಧ ಹೋರಾಟದ ಫಲವಾಗಿ ನಗರದ ಕೋವಿಡ್-19 ಸೋಂಕಿತ ರೋಗಿ ಸಂಖ್ಯೆ 221 ಆಸ್ಪತ್ರೆಯಿಂದ ಬಿಡುಗಡೆ ಹೊಂದುವ ಸಂದರ್ಭದಲ್ಲಿ ಎಲ್ಲರ ಮೊಗದಲ್ಲಿ ಸಂತಸ ಮೂಡಿತ್ತು. ಕಳೆದ ಮಾರ್ಚ 9 ರಂದು ಕೋವಿಡ್-19 ಸೋಂಕಿಗೆ ಒಳಗಾಗಿ ತೀವ್ರ ಅಸ್ವಸ್ಥ ರೀತಿಯಲ್ಲಿ, ಉಸಿರಾಟದ ತೊಂದರೆ ಹೃದಯ ಸಂಬಂಧಿ […]
ವಿಜಯಪುರ : ಮಾಧ್ಯಮ ಪ್ರತಿನಿಧಿಗಳ ಗಂಟಲು ದ್ರವ ಮಾದರಿ ಸಂಗ್ರಹ

ವಿಜಯಪುರ ಎ.24: ಜಿಲ್ಲಾಡಳಿತ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಸಹಯೋಗದಲ್ಲಿ ಇಂದು ನಗರದ ಜಿಲ್ಲಾ ಸವೇಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಮಾಧ್ಯಮ ಪ್ರತಿನಿಧಿಗಳಿಗಾಗಿ ಕೋವಿಡ್-19 ಮುನ್ನೆಚ್ಚರಿಕೆಯಾಗಿ ವೈದ್ಯಕೀಯ ತಪಾಸಣೆ ಅಂಗವಾಗಿ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲಾಯಿತು. ಜಿಲ್ಲಾ ಕೇಂದ್ರದ 28 ಜನ ಮಾಧ್ಯಮ ಪ್ರತಿನಿಧಿಗಳ ಗಂಟಲು ದ್ರವ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ವೈದ್ಯಕೀಯ ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ. ಅದರಂತೆ ನಾಳೆ ಬೆಳಿಗ್ಗೆ 11.30 ರಿಂದ ಸಂಜೆ 4.00 ಗಂಟೆಯವರೆಗೆ ಈ ಶಿಬಿರ ಆಯೋಜಿಸಲಾಗಿದ್ದು, ಜಿಲ್ಲಾ ಕೇಂದ್ರದಲ್ಲಿರುವ […]
ವಿಜಯಪುರ : ಜಿಲ್ಲೆಯಲ್ಲಿ ಈವರೆಗೆ 39 ಕೊರೋನಾ ಪಾಸಿಟಿವ್ ಪ್ರಕರಣ: ರೋಗಿಗಳ ಆರೋಗ್ಯ ಸ್ಥಿರ -ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ

ವಿಜಯಪುರ ಎ.24: ಜಿಲ್ಲೆಯಲ್ಲಿ ಈವರೆಗೆ ಒಟ್ಟು 39 ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದು, ಈ ಪೈಕಿ ಇಬ್ಬರು ಮೃತಪಟ್ಟಿದ್ದಾರೆ. ಇನ್ನುಳಿದ ಎಲ್ಲ ಪಾಸಿಟಿವ್ ರೋಗಿಗಳ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಅಪಾಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. ಮಾಧ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು ಜಿಲ್ಲೆಯ ಒಟ್ಟು 1511 ಜನರ ಗಂಟಲು ದ್ರವ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದ್ದು, 1358 ನೆಗೆಟಿವ್ ವರದಿ ಬಂದಿದೆ. 113 ಜನರ ವೈದ್ಯಕೀಯ ಪರೀಕ್ಷೆ ಇನ್ನೂ ಬರಬೇಕಾಗಿದೆ. ಈವರೆಗೆ […]