ಬಾಲಿವುಡ್ ನಟ ಇರ್ಫಾನ್ ಖಾನ್ ನಿಧನ

ಮುಂಬೈ ಎ.29: ಬಾಲಿವುಡ್ ನ ಜನಪ್ರಿಯ ನಟ ಇರ್ಫಾನ್ ಖಾನ್ ಅವರು ಅನಾರೋಗ್ಯ ಸಮಸ್ಯಯಿಂದ ಕಳೆದ ಸುಮಾರು ದಿನಗಳಿಂದ ಬಳಲುತ್ತಿದ್ದರು. ವಿಶ್ವಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಅವರು ಬಹುಮುಖ ಪ್ರತಿಭೆಯುಳ್ಳ ಅದ್ಬುತ ನಟರಾಗಿದ್ದರು. ನಟ ಇರ್ಫಾನ್ ಖಾನ್ ಕಿರು ತೆರೆಯಲ್ಲಿ ಮೊದಲ ಬಾರಿಗೆ ಬಣ್ಣ ಹಚ್ಚಿ ‘ಸಲಾಮ್ ಬಾಂಬೆ’ ಚಿತ್ರದಲ್ಲಿ ನಟಿಸುವ ಮೂಲಕ ಸಿನಿ ಲೋಕಕ್ಕೆ ಕಾಲಿಟ್ಟರು. ವಿಭಿನ್ನವಾದ ಪಾತ್ರಗಳ ಮುಖೇನ ಸಿನಿ ಪ್ರೀಯರನ್ನು ರಂಜಿಸಿದರು. ತಮ್ಮ ಅದ್ಬುತ ನಟನೆಯ ಮೂಲಕ ಬಾಲಿವುಡ್ ಮಾತ್ರವಲ್ಲದೆ ಹಾಲಿವುಡ್ ಸಿನಿಮಾ […]
ಬೀದರ: ಚಿಟ್ಟಗುಪ್ಪಾದಲ್ಲಿ ಕೋರೊನಾ ಸೈನಿಕರಿಂದ ಜನ ಜಾಗೃತಿ

ಬೀದರ ಏ.29 : ಬೀದರ ಜಿಲ್ಲೆಯ ಚಿಟ್ಟಗುಪ್ಪಾ ತಾಲೂಕಿನಲ್ಲಿ ಕೊರೋನಾ ಸೈನಿಕರಿಂದ ಇತ್ತೀಚೆಗೆ ಜನಜಾಗೃತಿ ನಡೆಯಿತು. ಕೊರೊನಾ ರೋಗ ತಡೆಗೆ ಗಮನ ಹರಿಸಬೇಕಾದ ಅಂಶಗಳು ಮತ್ತು ಮಾಸ್ಕ, ಸ್ಯಾನಿಟೈಜರ್ ಅಥವಾ ಸಾಬೂನು ಬಳಕೆಯ ವಿಧಾನ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ಕೊರೊನಾ ಸೈನಿಕರಾದ ಲಕ್ಷ್ಮಿ ಬಾವಗೆ, ಗೀತಾ ಮಾಹಾಲಿಂಗಪುರ ಹಾಗೂ ರೇಷ್ಮಾ ಕುಂದನ ಇತರರು ಇದ್ದರು.
ಧಾರವಾಡ: ಜಿಲ್ಲೆಯ ಪೊಲೀಸ್ ಸಿಬ್ಬಂದಿ ಮತ್ತು ಅವರ ಕುಟುಂಬ ಸದಸ್ಯರಿಗೆ ಆಯುಷ್ ಔಷಧಿ ವಿತರಣೆಗೆ ಕ್ರಮ : ಎಸ್‍ಪಿ ವರ್ತಿಕಾ ಕಟಿಯಾರ್

ಧಾರವಾಡ ಏ.28: ಕೋವಿಡ್-19 ಕೊರೊನಾ ವೈರಸ್ ತಡೆಗಟ್ಟಲು ಹಗಲಿರುಳು ನಿರಂತರವಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಿಲ್ಲೆಯ ಎಲ್ಲ ಪೊಲೀಸ್ ಸಿಬ್ಬಂದಿಗಳಿಗೆ ಹಾಗೂ ಅವರ ಕುಟುಂಬ ಸದಸ್ಯರಿಗೆ ರೋಗ ನಿರೋಧಕ ಹಾಗೂ ವೈರಾಣು ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಯುಷ್ ಔಷಧಿಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ್ ಹೇಳಿದರು. ಜಿಲ್ಲಾ ಆಯುಷ್ ಇಲಾಖೆ ಹಾಗೂ ಜಿಲ್ಲೆಯ ಆಯುಷ್ ವೈದ್ಯರು ನೀಡಿರುವ ಆಯುರ್ವೇದಿಕ್ ಚವನಪ್ರಾಶ್ ಮತ್ತು ಹೋಮಿಯೋಪತಿಯ ಅರ್ಸಾನಿಕ್ ಆಲ್ಬಂ ಮಾತ್ರೆಗಳನ್ನು ಪೊಲೀಸ್ ಪೇದೆಗಳಿಗೆ […]
ಚಾಮರಾಜನಗರ: ಕೊರೊನಾ ವಾರಿಯರ್ಸ್‍ಗೆ ಪುಷ್ಪವೃಷ್ಠಿ ಮೂಲಕ ಕೃತಜ್ಞತಾ ಗೌರವ ಸಲ್ಲಿಕೆ

ಚಾಮರಾಜನಗರ, ಏ.27 : ಚಾಮರಾಜನಗರ ಕೊರೊನಾ ಮುಕ್ತ ಜಿಲ್ಲೆಯಾಗಿ ಮುಂದುವರೆಯುತ್ತಿರಲು ಹಗಲಿರುಳು ಪರಿಶ್ರಮ ಪಡುತ್ತಿರುವ ವಾರಿಯರ್ಸ್ ಎಂದೇ ಹೇಳಲಾಗುವ ಪ್ರಮುಖ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗೆ ಪುಷ್ಪವೃಷ್ಠಿ ಗೈಯುವ ಮೂಲಕ ಗೌರವ, ಕೃತಜ್ಞತೆ ಸಮರ್ಪಿಸುವ ವಿಶಿಷ್ಟ ಕಾರ್ಯಕ್ರಮ ಚಾಮರಾಜನಗರದಲ್ಲಿ ಇಂದು ನಡೆಯಿತು. ಚಾಮರಾಜನಗರದ ಹೃದಯ ಭಾಗವೆಂದೇ ಕರೆಯಲ್ಪಡುವ ಜೈ ಭುವನೇಶ್ವರಿ (ಪಚ್ಚಪ್ಪ ವೃತ್ತ) ವೃತ್ತದಲ್ಲಿ ಜಿಲ್ಲಾಡಳಿತವು ಆಯೋಜಿಸಿದ್ದ ವಿಶೇಷ ಕಾರ್ಯಕ್ರಮದಲ್ಲಿ ಕೋವಿಡ್-19 ಹರಡದಂತೆ ಶ್ರಮಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಪೊಲೀಸ್, ವೈದ್ಯರು, ಸೇರಿದಂತೆ ಅಗತ್ಯ ಸೇವೆಯ ಸಿಬ್ಬಂದಿಗೆ […]
ಮೇ 3ರವರೆಗೆ ಕಟಿಂಗ್ ಶಾಪ್, ರೆಸ್ಟೊರೆಂಟ್ ಬಂದ್: ಕೇಂದ್ರ ಸರಕಾರ ಸ್ಪಷ್ಟನೆ

ಹೊಸದಿಲ್ಲಿ ಎ.25: ಕೊರೋನಾ ವೈರಸ್ ನಿಂದಾಗಿ ಕೇಂದ್ರ ಸರಕಾರ ಘೋಷಣೆ ಮಾಡಿರುವ ಲಾಕ್ ಡೌನ್ ಮೇ 3ರಂದು ಕೊನೆಗೊಳ್ಳಲಿದೆ. ಕೇಂದ್ರ ಸರಕಾರ ದೇಶದ ಜನತೆಗೆ ಕೆಲವು ವಿನಾಯಿತಿ ನೀಡಿತ್ತು. ಆದರೆ ಇನ್ನೂ ಕೆಲವೊಂದು ಸಮಸ್ಯೆಯಲ್ಲಿ ಜನತೆ ಗೊಂದಲಕ್ಕಿಡಾಗಿದ್ದರು. ಈಗ ಕೇಂದ್ರ ಸರಕಾರ ರೆಸ್ಟೊರೆಂಟೆ, ಕಟಿಂಗ್ ಶಾಪ್, ಸಲೂನ್ ಗಳು ಮೇ 3ರವರೆಗೆ ಬಂದ್ ಆಗಿರುತ್ತದೆ ಎಂದು ಗೃಹ ಸಚಿವಾಲಯ ಟ್ವೀಟ್ ಮೂಲಕ ಸ್ಟಷ್ಟಪಡಿಸಿದೆ. #COVID19 UpdateIn view of queries coming from various sections of […]
ಕೊರೋನಾ ಸೋಂಕಿನಿಂದ ಗುಣಮುಖ, ಮೂವರು ಆಸ್ಪತ್ರೆಯಿಂದ ಬಿಡುಗಡೆ

ಕಲಬುರಗಿ.ಏ.24: ಕೊರೋನಾ ಸೋಂಕಿಗೆ ತುತ್ತಾಗಿ ಇ.ಎಸ್.ಐ.ಸಿ. ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಹಾಬಾದ ಪಟ್ಟಣದ ಇಬ್ಬರು ಮತ್ತು ಕಲಬುರಗಿ ನಗರದ ಓರ್ವ ರೋಗಿ ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಗುರುವಾರ ಅಸ್ಪತ್ರೆಯಿಂದ ಬಿಡುಗಡೆಗೊಳಿಸಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ. ನವದೆಹಲಿಯ ತಬ್ಲಿಘಿ ಜಮಾ ಅತ್ ಹೋಗಿ ಬಂದಿದ್ದ ಶಹಾಬಾದ ಪಟ್ಟಣದ ಅಪ್ಪರ ಮಡ್ಡಿ ಪ್ರದೇಶದ ವ್ಯಕ್ತಿಯ ಪತ್ನಿ 60 ವಯಸ್ಸಿನ ಮಹಿಳೆ(ರೋಗಿ ಸಂ-124) ಮತ್ತು ಇವರ ಸೊಸೆ 28 ವರ್ಷದ ಯುವತಿ (ರೋಗಿ ಸಂ-174) ಹಾಗೂ ಕಲಬುರಗಿ […]
ಜಿಲ್ಲಾಧಿಕಾರಿಗಳ ಒತ್ತಾಸೆ ಮರಳು ಶಿಲ್ಪ ರಚನೆಗೆ ಸ್ಪೂರ್ತಿ

ಹುಬ್ಬಳ್ಳಿ .ಏ.24: ಕೋವಿಡ್-19 ತುರ್ತು ಸಂದರ್ಭದಲ್ಲಿ ವೈದ್ಯರು, ನರ್ಸ್, ಪೊಲೀಸರು, ಆಶಾ, ಅಂಗನಾವಡಿ ಕಾರ್ಯತೆಯರು, ಸ್ವಯಂಸೇವಕರು ಹಾಗೂ ಮಾಧ್ಯಮದವರು ಹಗಳಿರುಳು ಕೆಲಸ ನಿರ್ವಹಿಸುತ್ತಿದ್ದಾರೆ. ದೇಶ ಅಘೋಷಿತ ಯುದ್ದದಲ್ಲಿ ತೊಡಗಿದೆ. ತಮ್ಮ ಜೀವ ಪಣಕಿಟ್ಟು ದುಡಿಯುತ್ತಿರುವ ಲಕ್ಷಾಂತರ ಜನರಿಗೆ ಗೌರವ ಸಲ್ಲಿಸುವ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಕಿಮ್ಸ್ ಆವರಣದಲ್ಲಿ ಮರಳು ಶಿಲ್ಪ ರಚಿಸಲಾಗಿದೆ. ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ ಕಲ್ಪನೆ ಹಾಗೂ ಆಶಯಗಳಿಗೆ ಕಲಾವಿದ ಮಂಜುನಾಥ ಹಿರೇಮಠ ಸಕಾರ ರೂಪ ನೀಡಿದ್ದಾರೆ. ಆರೋಗ್ಯವೇ ಭಾಗ್ಯ, ಸದಾಕಾಲ […]
ಸೆನ್ಸಾರ್ ಆಧಾರಿಸಿ ಕಾರ್ಯನಿರ್ವಹಿಸುವ ಸ್ವಯಂಚಾಲಿತ ಹ್ಯಾಂಡ್ ಸ್ಯಾನಿಟೈಜರ : ಕೆ.ಎಲ್.ಇ. ಇಂಜಿನಿಯರಿಂಗ್ ವಿದ್ಯಾರ್ಥಿಗಳ ವಿನೂತನ ಸಂಶೋಧನೆ

ಹುಬ್ಬಳ್ಳಿ ಏ.24: ಕೊರೋನಾ ವೈರಸ್ ಸಾಂಕ್ರಾಮಿಕವಾಗಿ ಹರಡುತ್ತಿದೆ. ಇದರಿಂದ ರಕ್ಷಿಸಿಕೊಳ್ಳಲು ಮಾಸ್ಕ್, ಹ್ಯಾಂಡ್ ಸ್ಯಾನಿಟೈಜರ ಹಾಗೂ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಲಾಗುತ್ತಿದೆ. ಆದರೂ ಕೆಲವೊಮ್ಮೆ ವೈರಸ್ ನಮಗೆ ಅರಿವಿಲ್ಲದೆಯೇ ಹರಡುವ ಸಾಧ್ಯ ಇರುತ್ತದೆ. ಕೋವೀಡ್ -19 ರೋಗಿಗಳನ್ನು ಚಿಕಿತ್ಸೆ ನೀಡುವ ಆಸ್ಪತ್ರೆಗಳಲ್ಲಿ ಹೆಚ್ಚಿನ ಜಾಗರೂಕತೆ ವಹಿಸುವುದು ಅವಶ್ಯಕ. ಇದನ್ನು ಮನಗಂಡ ಕೆ.ಎಲ್.ಇ ಇಂಜಿನಿಯರಿಂಗ್ ವಿದ್ಯಾರ್ಥಿಗಳ ತಂಡ ಸೆನ್ಸಾರ್ ಆಧಾರಿಸಿ ಕಾರ್ಯನಿರ್ವಹಿಸುವ ಸ್ವಯಂಚಾಲಿತ ಹ್ಯಾಂಡ್ ಸೆನಟೈಜರ್ ನಿರ್ಮಿಸಿದೆ. ಈಗ ಇರುವ ಹ್ಯಾಂಡ್ ಸ್ಯಾನಿಟೈಜರ ಬಳಸಲು ನಾವು ಕೈಯಿಂದ ಅವುಗಳನ್ನು ಮಟ್ಟಬೇಕು. […]
ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಕುಡಚಿ ಶಾಸಕ ಪಿ. ರಾಜೀವ್‌ನ ವಾಹನ ಚಾಲಕನ ಬಂಧನ

ಬೆಳಗಾವಿ ಎ 24 : ಅಕ್ರಮವಾಗಿ ಮದ್ಯ ಸಾಗಾಟ ಮಾಡುತ್ತಿದ್ದ ಕುಡಚಿ ಶಾಸಕ ಪಿ. ರಾಜೀವ್‌ನ ವಾಹನ ಚಾಲಕ ಪಾಲಬಾಂವಿ ಗ್ರಾಮದ ಬಾಳೇಶ ಭರಮಪ್ಪ ತಳವಾರ (30) ಸೇರಿದಂತೆ ಇತರೆ ಐವರು ಆರೋಪಿಗಳ ಪ್ರಕರಣಕ್ಕೆ ಸಂಬಂದಿಸಿದಂತೆ ಬೆಳಗಾವಿ ಗ್ರಾಮೀಣ ಠಾಣೆ ಪೋಲಿಸರು ಪ್ರತ್ಯೇಕ ದಾಳಿ ನಡೆಸಿ ಅವರಿಂದ ಒಟ್ಟು ರೂ 15.635 ಮೌಲ್ಯದ ಮಧ್ಯ ಹಾಗೂ ಎರಡು ವಾಹನಗಳನ್ನು ಜಪ್ತಿ ಮಾಡಿದ್ದಾರೆ. ಕಿಣೆಯ ಗ್ರಾಮದ ಬಳಿ ಬೋಲೆರೋ ಗೂಡ್ಸ ವಾಹನದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಬೆಳಗಾವಿ ತಾಲೂಕಿನ […]
ಹುಬ್ಬಳ್ಳಿ: ಸಂಚಾರಿ ಫೀವರ್ ಕ್ಲೀನಿಕ್ ಶುರು : ಕ್ವಾರೆಂಟೈನ್ ಪ್ರದೇಶಗಳ ಸಂಚರಿಸಿ ತಪಾಸಣೆ

ಹುಬ್ಬಳ್ಳಿ ಏ.18: ಕೊವೀಡ್ -19 ವಿರುದ್ದ ಹೋರಾಟ ನಡೆಸುತ್ತಿರುವ ಜಿಲ್ಲಾಡಳಿತ ರೈಲುಗಳನ್ನು ಐಸೋಲೇಷನ್ ವಾರ್ಡ್ಗಗಳಾಗಿ ಮಾಪರ್ಡಸಿದ ಭಾರತೀಯ ರೇಲ್ವೇ ಮಾದರಿಯಾಗಿರಿಸಿ ಸಂಚಾರಿ ಫೀವರ್ ಕ್ಲೀನಿಕ್ ಕಲ್ಪನೆಯನ್ನು ಸಾಕರಗೊಳಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜೊತೆ ಗೂಡಿ ನಿರ್ಮಿಸಿರುವ ಸಂಚಾರಿ ಫೀವರ್ ಕ್ಲೀನಕ್ ಬಹಳ ಉಪಯೋಗಕಾರಿಯಾಗಿದೆ. ಕ್ವಾರೆಂಟೈನ್ ಪ್ರದೇಶಗಳಲ್ಲಿ ಸಂಚರಿಸಿ ಜ್ವರ, ಕೆಮ್ಮು ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡವರನ್ನು ಪರೀಕ್ಷೆ ನೆಡೆಸಲಾಗುವುದು. ಹುಬ್ಬಳ್ಳಿ ಪ್ರಾದೇಶಿಕ ಕಾರ್ಯಗಾರದಲ್ಲಿ ವರ್ಕ ಮ್ಯಾನೇಜರ್ ಶ್ರೀನಾಥ್ […]