ಗೋಡೆ ಬರಹಕ್ಕೆ ಸಂಬಂಧಿಸಿ ಒರ್ವನ ಬಂಧನ

ಮಂಗಳೂರು ಡಿ.03: ನಗರದ ಉಗ್ರ ಗೋಡೆ ಬರಹಕ್ಕೆ ಸಂಬಂದಿಸಿದಂತೆ ತೀರ್ಥಹಳ್ಳಿ ಮೂಲದ ನಝೀರ ಎಂಬಾತನನ್ನು ಮಂಗಳೂರಿನ ಕದ್ರ ಪೊಲೀಸರು ಬಂದಿಸಿದ್ದಾರೆ. ಬಂಧಿತ ಆರೋಪಿ ಮಂಗಳೂರಿನಲ್ಲಿ ಪುಡ್ ಡಿಲೆವರಿ ಕೆಲಸ ನಿರ್ವಹಿಸುತ್ತಿದ್ದ ಎಂದು ತಿಳಿದು ಬಂದಿದೆ. ಆರೋಪಿಯ ಮೋಬೈಲ್ ಲೋಕೆಶನ್ ಆಧರಿಸಿ ಬಂದಿಸಿದ್ದಾರೆ. ಈತನ ಜೊತೆ ಬೈಕ್ ನಲ್ಲಿ ಬಂದಿದ್ದ ಇನ್ನೊಬ್ಬ ಆರೋಪಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.  

ರಿ-ಇನ್ವೆಸ್ಟ್ 2020; ಮೆಗಾವ್ಯಾಟ್ ಗಳನ್ನು ಗಿಗಾವ್ಯಾಟ್ ಗಳನ್ನಾಗಿ ಬದಲಾಯಿಸುವ ಯೋಜನೆ ಸಾಕಾರ

“ಕಳೆದ ಆರು ವರ್ಷಗಳಲ್ಲಿ ಭಾರತದ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಎರಡೂವರೆ ಪಟ್ಟು ಹೆಚ್ಚಳ” ನವದೆಹಲಿ ನ.27: 3ನೇ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆ ಶೃಂಗಸಭೆ ಮತ್ತು ಪ್ರದರ್ಶನ (ರಿ-ಇನ್ವೆಸ್ಟ್ 2020)ಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. ರಿ-ಇನ್ವೆಸ್ಟ್ 2020ಯ ಘೋಷವಾಕ್ಯ “ಸುಸ್ಥಿರ ಇಂಧನ ಬದಲಾವಣೆಗೆ ಆವಿಷ್ಕಾರಗಳು’’ ಎಂಬುದಾಗಿದೆ. ಅತ್ಯಲ್ಪ ಅವಧಿಯಲ್ಲಿಯೇ ಮೆಗಾವ್ಯಾಟ್ ನಿಂದ ಗಿಗಾ ವ್ಯಾಟ್ ಗೆ ಪ್ರಗತಿ ಹೊಂದಿರುವುದಕ್ಕೆ ಮತ್ತು ನಾವು ಹಿಂದಿನ ಆವೃತ್ತಿಗಳಲ್ಲಿ ಮಾತನಾಡಿದ್ದಂತೆ “ಒಂದು ಸೂರ್ಯ, […]

‘ನಿವಾರ್ ಸೈಕ್ಲೋನ್’ ರೆಡ್ ಅಲರ್ಟ್

ಮೈಸೂರು ನ.25: ನಿವಾರ್ ಚಂಡಮಾರುತವು ತಮಿಳುನಾಡು ಮತ್ತು ಪುದುಚೇರಿ ದಾಟಿ ಬರುವ ಮುನ್ಸೂಚೆ ಹಿನ್ನಲೆಯಲ್ಲಿ ರಾಜ್ಯದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಬಂಧಪಟ್ಟ ಅಧಿಕಾರಿಗಳಿಗೆ ಮುನ್ನೇಚರಿಕಾ ಕ್ರಮ ತೆಗೆದುಕೊಳ್ಳಲು ಸೂಚಿಸಲಾಗಿದೆ. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ‘ನಾವು ಚಂಡಮಾರುತವನ್ನು ನಿಲ್ಲಿಸಬಹುದೇ ? ಸಾಧ್ಯವಿಲ್ಲ . ಗರಿಷ್ಕ ಹಾನಿಗಳನ್ನು ತಪ್ಪಿಸಲು ತಡೆಗಟ್ಟುವ ಕ್ರಮ ಕೈಗೊಳ್ಳುವ ಕೆಲಗಳನ್ನು ಮಾಡಬಹುದು , ಕರಾವಳಿ ಕರ್ನಾಟಕದಲ್ಲಿ ರೆಡ್ ಅಲರ್ಟ್ ಘೋಷಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದೇ ವೇಳೆ ಕ್ಯಾಬಿನೆಟ್ ವಿಸ್ತರಣೆ ಸಂಬಂಧಿಸಿದಂತೆ […]

ಬಹುತೇಕ ಡಿಸೆಂಬರ್ ನಲ್ಲಿ ಹೊಸ ಸಂಸತ್ತ್ ಭವನಕ್ಕೆ ಪ್ರಧಾನಿಯುಂದ ಅಡಿಪಾಯ

ನವ ದೆಹಲಿ ನ.25: ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್ ನೇತೃತ್ವದಲ್ಲಿ 861.90 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಹೊಸ ಸಂಸತ್ತಿನ ಕಟ್ಟಡ ನಿರ್ಮಿಸಲಾಗುತ್ತಿದೆ. ಹೊಸದಾಗಿ ನಿರ್ಮಿಸಲಾಗುತ್ತಿರುವ ಸಂಸತ್ ಭವನಕ್ಕೆ ಡಿಸೆಂಬರ್‌ 10ಕ್ಕೆ ಪ್ರಧಾನಿ ನರೇಂದ್ರ ಮೋದಿ ಅಡಿಪಾಯ ಹಾಕುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಸಂಸತ್ತು ಆವರಣದಲ್ಲಿ ಮಹಾತ್ಮ ಗಾಂಧಿ ಮತ್ತು ಭೀಮ್ ರಾವ್ ಅಂಬೇಡ್ಕರ್ ಸೇರಿದಂತೆ ಸುಮಾರು ಐದು ಪ್ರತಿಮೆಗಳನ್ನು ಸಹ ನಿರ್ಮಾಣ ಕಾರ್ಯಗಳಿಂದಾಗಿ ತಾತ್ಕಾಲಿಕವಾಗಿ ಸ್ಥಳಾಂತರಿಸುವ ಸಾಧ್ಯತೆಯಿದೆ ಮತ್ತು ಅವುಗಳನ್ನು ಪ್ರಮುಖ ಸ್ಥಳಗಳಲ್ಲಿ ಮರುಸ್ಥಾಪಿಸಲಾಗುವುದು ಎಂದು […]

ಮಾಜಿ ಸಚಿವ ವಿನಯ ಕುಲಕರ್ಣಿ ಸಿಬಿಐ ವಶಕ್ಕೆ

ಧಾರವಾಡ ನ.05: ಧಾರವಾಡದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಅವರ ಸಹೋದರ ವಿಜಯ ಕುಲಕರ್ಣಿ ಅವರನ್ನು ಸಿಬಿಐ ವಶಕ್ಕೆ ಪಡೆದಿದೆ. 2016ರಲ್ಲಿ ಯೋಗೀಶ್ ಗೌಡ ಅವರನ್ನು ಧಾರವಾಡ ನಗರದ ಸಪ್ತಾಪೂರ ಜಿಮ್ ಗೆ ಬಂದಿದ್ದ ದುಷ್ಕರ್ಮಿಗಳು ಯೋಗೇಶ ಗೌಡನನ್ನು ಮಚ್ಚಿನಿಂದ ಬರ್ಬರವಾಗಿ ಕೊಲೆಗೈದಿದ್ದರು. ಈ ದೃಶ್ಯವು ಜಿಮ್ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಯೋಗೀಶ್ ಗೌಡರನ್ನು ಕೊಲೆ ಮಾಡಲು ವಿನಯ ಕುಲಕರ್ಣಿ ಸಂಚು ರೂಪಿಸಿದ್ದಾರೆ ಎನ್ನುವ […]

ಈ ವರ್ಷ ಶಾಲೆಗಳನ್ನು ತೆರೆಯುವುದು ಬೇಡ :ಬರಡೋಲ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಪದಾಧಿಕಾರಿ ಶ್ರೀಮತಿ ಭಾರತಿ ಸಿ. ಕಟ್ಟಿಮನಿ

ವಿಜಯಪುರ ನ.05: ಇತ್ತೀಚೆಗೆ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಮಾನ್ಯ ಶಿಕ್ಷಣ ಸಚಿವರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ಜಂಟಿ ಕಾರ್ಯದರ್ಶಿಗಳು ಹಾಗೂ ಖಾಸಗಿ ಶಾಲಾಡಳಿತ ಮಂಡಳಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ವರದಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿರುತ್ತದೆ. ಆದರೆ ನಾನು ವಯಕ್ತಿಕವಾಗಿ ಈ ವರ್ಷ ಶಾಲೆಗಳನ್ನು ತೆರೆಯುವುದು ಬೇಡ ಎಂದು ಬರಡೋಲ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಪದಾಧಿಕಾರಿಗಳಾದ ಶ್ರೀಮತಿ ಭಾರತಿ ಸಿ. ಕಟ್ಟಿಮನಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಆನ್‍ಲೈನ್ ಕ್ಲಾಸ್ ಮಾಡಿ ಎಲ್ಲರನ್ನು […]

ಮ್ಯಾಟ್ರಿಮೊನಿಯಲ್ಲಿ ಹಣ ಕಳೆದುಕೊಂಡ ಹಾಸನದ ಹುಡುಗ

ಹಾಸನ: ಜೀವನ ಸಂಗಾತಿಗಾಗಿ ಹುಡುಕುತ್ತಿದ್ದವನಿಗೆ ಮ್ಯಾಟ್ರಿಮೊನಿಯಲ್ಲಿ ಪರಿಚಯವಾದ ಹುಡುಗಿಯನ್ನು ಕಂಡು ಮದುವೆಯಾದರೆ ಈಕೆಯನ್ನೇ ಮದುವೆಯಾಗಬೇಕು ಅಂತ ಆತ ನಿರ್ಧರಿಸಿಬಿಟ್ಟಿದ್ದ. ಆದರೆ ಬದಲಾಗಿ ಆಕೆ ಮಾತ್ರ ಮಾಡಿದ್ದು ಮಾತ್ರ ಮಹಾಮೋಸ. ಆ ಮಹಿಳೆ ಹೆಸರು ಲಕ್ಷ್ಮಿ. ಹಾಸನ ಮೂಲದ 40 ವರ್ಷದ ಅವಿವಾಹಿತ ಪರಮೇಶ್‌ಗೆ ಮ್ಯಾಟ್ರಿಮೋನಿಯಲ್ಲಿ‌ ಪರಿಚಯವಾಗಿದ್ದ ಹುಡುಗಿ ಲಕ್ಷ್ಮೀ. ನಂತರ ಇಬ್ಬರೂ ಬೆಂಗಳೂರಿನ ಯಲಹಂಕದಲ್ಲಿ ಭೇಟಿಯಾಗಿ ಮದುವೆ ಮಾತುಕತೆ ಕೂಡ ನಡೆಸಿಕೊಂಡಿರುತ್ತಾರೆ. ಪರಮೇಶನನ್ನ ಭೇಟಿಯಾದ ದಿನವೇ ಲಕ್ಷ್ಮೀ ತಾನೊಬ್ಬ ಅನಾಥೆ. ಐಟಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ತಾನು […]

ಮನೆಗಳಲ್ಲೇ ಯೋಗಾಭ್ಯಾಸ ಮಾಡುವವರಿಗಾಗಿ ಅರಮನೆ ಆವರಣದಲ್ಲಿ ಪ್ರದರ್ಶನ, ಫೇಸ್ಬುಕ್ ಲೈವ್ ನಲ್ಲಿ ನೇರ ಪ್ರಸಾರ

ಮೈಸೂರು ಜೂನ್.21: ಕೋವಿಡ್-೧೯ ಹಿನ್ನಲೆಯಲ್ಲಿ ಮನೆ ಮನೆಗಳಲ್ಲೇ ಯೋಗಾಸನ ಮಾಡುವ ಮೂಲಕ ಮೈಸೂರಿನಲ್ಲಿ 6ನೇ ಅಂತಾರಾಷ್ಟ್ರೀಯ ಯೋಗದಿನ ಆಚರಿಸಲಾಯಿತು. ಮನೆಗಳಲ್ಲಿ ಯೋಗಾಭ್ಯಾಸ ಮಾಡುವವರ ಅನುಕೂಲಕ್ಕಾಗಿ ಜಿಲ್ಲಾಡಳಿತ ಹಾಗೂ ಯೋಗ ಸಂಸ್ಥೆಗಳ ಸಹಯೋಗದಲ್ಲಿ ಅರಮನೆ ಆವರಣದಲ್ಲಿ ಭಾನುವಾರ ಯೋಗಾಸನ ಪ್ರದರ್ಶನ ಆಯೋಜಿಸಿ ಫೇಸ್ಬುಕ್ ನಲ್ಲಿ ನೇರ ಪ್ರಸಾರ ಮಾಡಲಾಯಿತು. ಈ ವೇಳೆಯಲ್ಲಿ ಜಿಎಸ್‌ಎಸ್ ಯೋಗ ಫೌಂಡೇಶನ್‌ನ ಶ್ರೀಹರಿ ಅವರು ಮಾತನಾಡಿ, ಕಳೆದ ಐದು ವರ್ಷಗಳಿಂದ ಅರಮನೆಯ ಆವರಣದಲ್ಲಿ ಸಾವಿರಾರು ಯೋಗ ಪಟುಗಳೊಂದಿಗೆ ಯೋಗ ದಿನಾಚರಣೆ ಆಚರಿಸುತ್ತಾ ಬಂದಿದ್ದೇವೆ. ಆದರೆ […]

ಕಲಬುರ್ಗಿಯಲ್ಲಿ ರೌಡಿಶೀಟರ್ ಹತ್ಯೆ: ಸ್ನೇಹಿತರಿಂದಲೇ ಸ್ಕೇಚ್

ಕಲಬುರ್ಗಿ ಜೂನ್ .20: ಕಲಬುರ್ಗಿಯಲ್ಲಿ ರೌಡಿಶೀಟರನನ್ನು ಮಾರಕಾಸ್ರ್ತಗಳಿಂದ ಬರ್ಬರವಾಗಿ ಕೊಲೆ ಮಾಡಿದ್ದಾರೆ. ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ. ಕಲಬುರ್ಗಿ ನಗರದ ರಿಂಗ್ ರಸ್ತೆಯ ಪೀರ ಬಂಗಾಲಿ ಮೈದಾನದಲ್ಲಿ ಘಟನೆ ನಡೆದಿದೆ. ಕೊಲೆಯಾದ ರೌಡಿಶೀಟರನನ್ನು ಹಸನ್ ಅಲಿ(24) ಎಂದು ಗುರುತಿಸಲಾಗಿದೆ. ಸ್ನೇಹಿತರ ನಡುವೆ ಗಲಾಟೆ ಜೋರಾಗಿ ವಿಕೋಪಕ್ಕೆ ಹೋಗಿ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ಕೊಲೆಯಾದ ಹಸನ್ ಅಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಈತನ ಮೇಲೆ ಕೊಲೆ ಪ್ರಕರಣ, ಬೈಕ್ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. […]

ಹುತಾತ್ಮ ಕರ್ನಲ್ ಸಂತೋಷ ಕುಟುಂಬಕ್ಕೆ 5 ಕೋಟಿ ಪರಿಹಾರ ಘೋಷಿಸಿದ ತೆಲಂಗಾಣ ಸಿಎಂ ಚಂದ್ರಶೇಖರ ರಾವ್

ಹೈದರಾಬಾದ್ ಜೂನ್.20: ಲಡಾಖನ ಗಲ್ವಾನ್ ಗಡಿಯಲ್ಲಿ ಭಾರತ ಚೀನಾ ನಡುವೆ ಸಂಭವಿಸಿದ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ ಬಾಬು ಅವರ ಕುಟುಂಬಕ್ಕೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ 5 ಕೋಟಿ ಪರಿಹಾರ ಹಾಗೂ ಸಂತೋಷ ಬಾಬುರವರ ಪತ್ನಿಗೆ ಸರಕಾರಿ ಕೆಲಸ ನೀಡುವುದಾಗಿ ಘೋಷಿಸಿದ್ದಾರೆ. ಹುತಾತ್ಮ ಸಂತೋಷ ಬಾಬು ಅವರ ಮನೆಗೆ ಸಿಎಂ ಚಂದ್ರಶೇಖರ ರಾವ್ ಬೇಟಿ ನೀಡಿ ಕುಟುಂಬದವರಿಗೆ ಸಾಂತ್ವಾನ ಹೇಳಿ ಜೊತೆಗೆ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದಾರೆ. ಇತರ 19 ಹುತಾತ್ಮ ಯೋಧರ ಕುಟುಂಬಸ್ಥರಿಗೆ ತಲಾ […]