ಒಂದು ಮಾತು: ಅವಳನ್ನು ದ್ವೇಷಿಸುವ ಮೊದಲು…..!

ಹೀಗೊಂದು ಮಾತು ಹೇಳಿದರೆ ನಿಮಗೆ ಬೇಸರವಾಗಲಿಕ್ಕಿಲ್ಲ. ದ್ವೇಷದಿಂದ ಏನನ್ನು ಸಾಧಿಸಲಿಕ್ಕೆ ಆಗುವುದಿಲ್ಲ. ಎಂಬ ಮಾತು ಎಲ್ಲರಿಗೂ ಗೊತ್ತು. ಆದರೂ ಪ್ರತಿಯೊಬ್ಬನಲ್ಲಿಯೂ ದ್ವೇಷದ ಭಾವನೆ ಇದ್ದೇ ಇರುತ್ತದೆ. ನಾವು ದ್ವೇಷವನ್ನು ಇನ್ನೊಬ್ಬರಿಗೆ ಕೊಡುವುದಾದರೆ, ಅದನ್ನು ಪ್ರೀತಿಯಿಂದಲೇ ಕೊಡಬೇಕು. ಆ ದ್ವೇಷವನ್ನು ಸ್ವೀಕರಿಸಲು ಸಾಧ್ಯವಿದೆ. ನಾನೀಗ ಮತ್ತೊಂದು ಮಾತು ಹೇಳಿದರೆ ನಿಮಗೆ ಆಘಾತವಾಗಬಹದು.ಒಂದು ಮಾತು “ಪ್ರೀತಿಯನ್ನು ಪ್ರೀತಿಯಿಂದ ಕೊಟ್ಟರೆ ಈ ಪ್ರಪಂಚದಲ್ಲಿ ಎಷ್ಟೋ ಜನ ದ್ವೇಷಿಸುವವರು ಇದ್ದಾರೆ” ಇದೆಲ್ಲ ಯಾಕೆ ಹೀಗೆ ಆಗುತ್ತದೆ ಎಂದರೆ ನಮ್ಮ ಪ್ರೀತಿಯಲ್ಲಿ ನಮಗೆ ತಿಳಿಯದ […]
“ಪ್ರೀತಿ ಹುಚ್ಚು ಹಚ್ಚಿಕೊಂಡ ಹುಡುಗ-ಹುಡುಗಿಯರೆ ಪ್ರೇಮದ ಅಮಲಿನಲ್ಲಿ ಮುಳಗಬೇಡಿ”

“ಪ್ರೀತಿ” ಪ್ರತಿಯೊಬ್ಬರಲ್ಲೂ ಪುಟಿಯುವ ಚೇತನ. ಜೀವನದಲ್ಲಿ ಪ್ರೀತಿಸದವರು ಯಾರಿದ್ದಾರೆ ಹೇಳಿ? ಕಣ್ಣ ಭಾಷೆಯಲ್ಲಿ ಮಾತನಾಡಿಸುವ ಹುಡುಗಿಯ ನೋಟಕ್ಕೆ ಕರಗಿ ನೀರಾಗುವ ಹುಡುಗರದೆಷ್ಟೋ ಜನ ಇದ್ದಾರೆ. ಪ್ರೀತಿಯಲ್ಲಿ ಬಿದ್ದ ಮನಸ್ಸಿಗೆ ಕುಂತರೂ, ನಿಂತರೂ, ನಡೆದಾಡಿದರೂ, ನಿದ್ರಾಲೋಕದೊಳಗಿದ್ದರೂ ಪ್ರೇಮದ ಅಮಲಿನಲ್ಲಿಯೆ ತೆಲಾಡುವ ಹುಡುಗ-ಹುಡುಗಿಯರು ಕಾಣುವ ಕನಸ್ಸುಗಳಿಗೆ ಕೊನೆಯಿಲ್ಲ. ಮಾತುಗಳಿಗೆ ಮಿತಿಯಿಲ್ಲ. ಪ್ರೀತಿ ಎಂದರೇನೆಂದು ಅರಿಯದ, ಆಗತಾನೆ ಹರೆಯಕ್ಕೆ ಕಾಲಿಟ್ಟ ಟೀನೇಜ ಹುಡುಗ-ಹುಡುಗಿಯರು ಕಲ್ಪನೆಯ ಸಾವಿರಾರು ಕನಸ್ಸುಗಳನ್ನು ಕಟ್ಟಿಕೊಂಡು ಕನಸು ನನಸಾಗುವ ಖುಷಿಯಲ್ಲಿ ನೆಲವಾವುದೋ, ಆಕಾಶವಾವುದೋ ತಿಳಿಯದೆ ಪ್ರೀತಿಯ ಹುಚ್ಚಲಿ ತಮ್ಮ […]
ಪ್ರೀತಿ ಮುದುಡಿದ ಹೂವಲ್ಲವೇ…? ನಿನ್ನ ವಾತ್ಸಲ್ಯ.

ನಿನ್ನೊಂದಿಗೆ ಜನ್ಮ ಜನ್ಮಾಂತರಗಳಿಂದ ಮಾತನಾಡಿದೆ. ಆದರೂ ಏನೂ ಮಾತೆ ಆಡಿಲ್ಲ ಅನಿಸುತ್ತದೆ. ನಿನ್ನೊಂದಿಗೆ ಹೇಗೆ ಮಾತನಾಡಬೇಕೆಂಬುದು ಗೊತ್ತಾಗುತ್ತಿಲ್ಲ. ಗೊತ್ತಿಲ್ಲದೆ ಏನೆಲ್ಲ ಮಾತನಾಡಿ ಬಿಡುವೆ. ಇಷ್ಟೆಲ್ಲ ಮಾತನಾಡಿದರೂ ನಾನು ಇದೇ ಮೊದಲ ಸಲ ಮಾತನಾಡಿಸುತ್ತಿರುವೆ ಎನಿಸುತ್ತದೆ. ಹೀಗೆ ಅನಿಸುವುದು ಪ್ರೇಮಿಗಳಿಗೆ ಮಾತ್ರ ಎಂಬುದು ನನ್ನ ನಂಬಿಕೆ. ನಿನ್ನ ಪ್ರೀತಿಗೆ ಜನ್ಮ ಜನ್ಮಾಂತರಗಳಿಂದ ಕಾಯುತ್ತಿರುವವಳು ನಾನು. ಈ ಜನ್ಮದಲ್ಲಿಯೂ ಕೈ ಕೊಟ್ಟೆ ನೀನು. ಪ್ರೀತಿ ಎಂದರೆ ಮೊದ ಮೊದಲು ಏನೂ ತಿಳಿದುಕೊಂಡಿರಲಿಲ್ಲ. ಪ್ರೀತಿಯ ಬಗ್ಗೆ ನನಗೆ ಯಾವ ಭಾವನೆಯು ಇರಲಿಲ್ಲ. […]
ಹೆಣ್ಣು ಮಾಯಾ ಜಿಂಕೆ ಯಾದರೆ, ಗಂಡೇನು…?

ಹೃದಯದ ಹಳೆಯ ಜೀವವೇ, ಹೆಣ್ಣನ್ನು ಮಾಯಾ ಜಿಂಕೆಗೆ ಹೊಲಿಸುವಿಯಲ್ಲ! ಯಾಕೆ? ಒಂದು ಸಲ ಯೋಚಿಸು, ಹೆಣ್ಣು ಮಾಯಾ ಜಿಂಕೆ ಯಾದರೆ, ಗಂಡೇನು….? ಇದರ ಬಗ್ಗೆ ಯೋಚಿಸುವ ಸಮಯ ನಿನಗೆಲ್ಲಿ ಸಿಗಬೇಕು. ಜಗತ್ತಿನಲ್ಲಿ ಎಂದು ಮಾನವನ ಉಗಮವಾಯಿತೋ ಅಂದಿನಿಂದ ಈ ಕ್ಷಣದವರೆಗೆ ಗಂಡಸರು ಹೆಣ್ಣಿನ ಬಗ್ಗೆ ಯೋಚಿಸುತ್ತ ಬಂದಿದ್ದಾರೆ. ಒಂದು ಕ್ಷಣವೂ ಅವರು ತಮ್ಮ ಬಗ್ಗೆ ಯೋಚಿಕೊಂಡಿಲ್ಲ. ನಮ್ಮ ಪ್ರಾಚೀನ ಕಾಲದ ವೇದ, ಪುರಾಣಗಳು, ಶಾಸ್ತ್ರಗಳು ದೊಡ್ಡ ದೊಡ್ಡ ದಾರ್ಶನಿಕರು, ಋಷಿಗಳು, ಯೋಗಿಗಳು, ತ್ಯಾಗಿಗಳು ಎಲ್ಲರೂ ಹೆಣ್ಣನ್ನೂ ಮಾಯಾ […]
ಮೌನದ ಪ್ರೀತಿಯಲಿ ನೆನಪಾದ ನಿನ್ನ ಗುಲಾಬಿ

ಹೃದಯದ ಹಳೆಯ ಜೀವವೇ, ಪ್ರೀತಿ ಕುರುಡಾದದ್ದು, ಪ್ರೀತಿಗೆ ದ್ವೇಷವಿಲ್ಲ, ಅಸೈಯೆ ಇಲ್ಲ. ಪ್ರೀತಿಗೆ ಯಾವುದೂ ಬೇಸರವಾಗುವುದಿಲ್ಲ. ಈ ಜಗತ್ತಿನಲ್ಲಿ ಎನೆಲ್ಲ ಸ್ವೀಕರಿಸುವುದು ಪ್ರೀತಿ ಒಂದೆ. ಅದಕ್ಕೆ ಪ್ರೀತಿಯನ್ನು ಅಳೆಯಲಿಕ್ಕೆ ಯಾವ ಮೀಟರ ಇಲ್ಲ. ಇಂದು ನಮ್ಮಿಬ್ಬರ ಮೌನದಲ್ಲಿ ಆ ಪ್ರೀತಿಯ ಹಳೆಯ ನೆನಪುಗಳು ಆಗಾಗ ಮರುಕಳಿಸುತ್ತಿವೆಯಲ್ಲ ! ನಿನಗೆ ಹಳೆಯ ನೆನಪುಗಳು ಮರುಕಳಿಸುತ್ತವೆಯೋ ಇಲ್ಲವೋ ಗೊತ್ತಿಲ್ಲ.ನನಗಂತೂ ಆ ಹಳೆಯ ನೆನಪುಗಳು ಸದಾ ಕಾಡುತ್ತಲೆ ಇರುತ್ತವೆ. ನಾನೇ ನಿನಗಿಂತ ಅದೃಷ್ಟವಂತಳು. ಆ ಹಳೆಯ ಮಧುರ ಭಾವನೆಗಳನ್ನು ಮರೆಯಲು ಪ್ರಯತ್ನಿಸುತ್ತಿಲ್ಲ. […]