ವಿಜಯಪುರ: ವಿಜಯಪುರ ಮಹಾನಗರ ಪಾಲಿಕೆಯ ವಾರ್ಡ್ ನಂ.29 ರ ಉಪ ಚುನಾವಣೆಯ By-election for Ward No. 29 ಹಿನ್ನೆಲೆ ಬಿಜೆಪಿ ಪಕ್ಷದ ವತಿಯಿಂದ ಶ್ರೀ ಗೀರಿಶ ವಿಜಯಕುಮಾರ ಬಿರಾದಾರ ಪರವಾಗಿ ಮಹಾನಗರ ಪಾಲಿಕೆ ಸದಸ್ಯರಾದ ಪ್ರೇಮಾನಂದ ಬಿರಾದಾರ ಮನೆ ಮನೆ ತೆರಳಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರ ಶಾಸಕ ಬಸನಗೌಡ ಆರ್. ಪಾಟೀಲ ಯತ್ನಾಳ ಅವರು ಜನಪರ ಅಭಿವೃದ್ಧಿ ಕಾರ್ಯಗಳನ್ನು ನೊಡಿ ಜನರು ಈ ಭಾರಿ ಗೀರಿಶ ವಿಜಯಕುಮಾರ ಬಿರಾದಾರ ಅವರನ್ನು ಬಹುಮತ ನೀಡಿ ಹೆಚ್ಚಿನ ಅಂತರದಲ್ಲಿ ಗೆಲ್ಲಿಸುವ ಮೂಲಕ ಅಭಿವೃದ್ಧಿಗೆ ನಾಂದಿ ಹಾಡಬೇಕು ಎಂದರು.
By-election for Ward No. 29 ವಾರ್ಡ್ ನಂ. 29ರ ಬಿಜೆಪಿ ಅಭ್ಯರ್ಥಿ ಗೀರಿಶ ವಿಜಯಕುಮಾರ ಬಿರಾದಾರ ಮಾತನಾಡಿ, ವಾರ್ಡ ಸೌಂದರ್ಯೀಕರಣ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಯೋಚನೆಯನ್ನು ರೂಪಿಸಿಕೊಂಡಿರುವೆ. ಈ ವಾರ್ಡ್ ಮಾದರಿ ವಾರ್ಡ ಆಗಿ ಮಾಡುವ ಗುರಿ ಹೊಂದಿರುವೆ. ಇದೇ ನವೆಂಬರ್ 23 ರಂದು ನಡೆಯಲಿರುವ ಚುನಾವಣೆಯಲ್ಲಿ ತಮ್ಮ ಅತ್ಯಮೂಲ್ಯವಾದ ಮತವನ್ನು ನನಗೆ ನೀಡಿ ಈ ಬಾರಿ ನನ್ನನ್ನು ಆರಿಸಿ ಗೆಲ್ಲಿಸಬೇಕೆಂದು ವಿನಂತಿಸಿಕೊಳ್ಳುವೆ.
ಇದನ್ನೂ ಓದಿ: Vijayapura News | ಡಿಸೆಂಬರ್ 14ರಂದು ರಾಷ್ಟ್ರೀಯ ಲೋಕ ಅದಾಲತ್ – ಶಿವಾಜಿ ಅನಂತ ನಲವಾಡೆ
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖರಾದ ವಿಜಯ ಜೋಶಿ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಪಾಪುಸಿಂಗ ರಜಪೂತ, ಬಿಜೆಪಿ ಮುಖಂಡರಾದ ಯಲ್ಲಪ್ಪ ಬಾಗಾದಿ, ಅಶೋಕ ಬೆಲ್ಲದ, ಮಡಿವಾಳ ಯಾಳವಾರ, ಆದಿತ್ಯ ತಾವರಗೇರಿ, ಸಿದ್ರಾಮ ಬಿರಾದಾರ, ಸಚೀನ ಪಡಗಾನೂರ, ಸಿದ್ರಾಯ ಬಿರಾದಾರ, ಎಂ.ಎನ್.ಇಜೇರಿ, ಇಮ್ರಾನ, ಲಕ್ಷ್ಮಣ ಹಣಮಗೊಂಡ, ನಿಂಗು ಬಿರಾದರ, ಮಲ್ಲು ಗಚ್ಚಿನಕಟ್ಟಿ, ರಾಘು ಸಲಗರ, ಅರುಣ ನಾಟೀಕಾರ, ಪುಮೀತ ಹಂಚಿನಾಳ, ಸೇರಿದಂತೆ ಬಿಜೆಪಿ ಪಕ್ಷದ ಕಾರ್ಯಕರ್ತರು ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.






