ಎಚ್ಚರ! ATM ಹ್ಯಾಕ್‌ ಮಾಡಿ ಹಣ ಕದಿಯುತ್ತಿರುವ ವಂಚಕರು!

ಇಷ್ಟು ದಿನ ಕ್ರೆಡಿಟ್, ಡೆಬಿಟ್ ಕಾರ್ಡ್ ಗಳನ್ನು ಸ್ಕ್ಯಾನ್ ಮಾಡಿ ವಂಚಿಸುತ್ತಿದ್ದ ತಂಡ ಇದೀಗ, ಹೊಸ ಕುತಂತ್ರವೊಂದನ್ನು ಕಂಡುಕೊಂಡಿದೆ. ಎಟಿಎಂ ಡೇಟಾ ಹ್ಯಾಕ್ ಮಾಡಿ ಹಣವನ್ನು ಕದಿಯುತ್ತಿದ್ದಾರೆ. 

0
74

ಬೆಂಗಳೂರು: ಸೈಬರ್‌ ಕ್ರೈಂ ದಿನದಿಂದ ದಿನಕ್ಕೆ ಹೆಚ್ಚಾಗತೊಡಗಿದೆ. ತಂತ್ರಜ್ಞಾನ ಎಷ್ಟೇ ಸೆಕ್ಯೂರ್‌ ಇದೆ ಎಂದು ಹೇಳಿದರು ಕೆಲವು ಹ್ಯಾಕರ್‌ ಗಳು ತಮ್ಮ ಬುದ್ದಿ ಉಪಯೋಗಿಸಿ ಹೀಗೂ ಕೃತ್ಯಗಳನ್ನು ಮಾಡಬಹುದು ಎಂದು ತೋರಿಸುತ್ತಿದ್ದಾರೆ. ದೇಶದಲ್ಲಿ ಸೈಬರ್‌ ಕಳ್ಳರ ಹಾವಳಿ ಹೆಚ್ಚಾಗತೊಡಗಿದೆ.

ಇಷ್ಟು ದಿನ ಕ್ರೆಡಿಟ್, ಡೆಬಿಟ್ ಕಾರ್ಡ್ ಗಳನ್ನು ಸ್ಕ್ಯಾನ್ ಮಾಡಿ ವಂಚಿಸುತ್ತಿದ್ದ ತಂಡ ಇದೀಗ, ಹೊಸ ಕುತಂತ್ರವೊಂದನ್ನು ಕಂಡುಕೊಂಡಿದೆ. ಎಟಿಎಂ ಡೇಟಾ ಹ್ಯಾಕ್ ಮಾಡಿ ಹಣವನ್ನು ಕದಿಯುತ್ತಿದ್ದಾರೆ.

ಬೆಂಗಳೂರಿನಲ್ಲಿ ಇಂತಹ ಪ್ರಕರಣಗಳು ಕಂಡುಬರುತ್ತಿವೆ.  ಎಟಿಎಂ ಯಂತ್ರಗಳಿಗೆ ಪೆನ್ ಡ್ರೈವ್ ಹಾಕಿ ಗ್ಯಾಂಗ್ ಡೇಟಾ ಸಂಗ್ರಹಿಸುತ್ತಿದೆ. ಕೆ. ಜಿ. ರಸ್ತೆ ಹಾಗೂ ಗಾಂಧಿನಗರದ ಎಸ್ ಬಿಐ ಎಟಿಎಂ ಕೇಂದ್ರ ಬಳಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದೆ. ಹಂತ ಹಂತವಾಗಿ ಎಟಿಎಂ ಯಂತ್ರದಿಂದ 13. 50 ಲಕ್ಷ ರೂಪಾಯಿಯನ್ನು ಸೈಬರ್ ಚೋರರು ಲಪಟಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಎಟಿಎಂ ಹ್ಯಾಕ್‌ ಮಾಡಿ ದುಡ್ಡು ಲಪಟಾಯಿಸಿರುವ ವಿಷಯ ಗೋತ್ತಾಗುತಿದ್ದಂತೆ ಎಸ್ ಬಿಐ ಕಚೇರಿಯ ಮುಖ್ಯ ಅಧಿಕಾರಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಹ್ಯಾಕರ್‌ ಗಳಿಗಾಗಿ ಬಲೆ ಬಿಸಿದ್ದಾರೆ.


LEAVE A REPLY

Please enter your comment!
Please enter your name here