ಕನ್ನಡಿಗರ ʼಪವರ್‌ ಸ್ಟಾರ್‌ʼ,ʼಅಪ್ಪುʼ ನಡೆದು ಬಂದ ಹಾದಿ

0
224

ಪವರ್‌ ಸ್ಟಾರ್‌ ಖ್ಯಾತಿಯ ಕರುನಾಡಿನ ಪ್ರೀತಿಯ ʼಅಪ್ಪುʼ ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟರು. ಪುನೀತರಾಜಕುಮಾರ ಹಿನ್ನಲೆ ಗಾಯಕರಾಗಿ, ನಿರ್ಮಾಪಕರಾಗಿ, ಚಿತ್ರರಂಗದಕ್ಕೆ ಕೊಡುಗೆ ನೀಡಿದ್ದಾರೆ. ತಮ್ಮ ಸಿನಿಜೀವನದಲ್ಲಿ ಬಾಲನಟನಾಗಿ 14 ಚಿತ್ರಗಳಲ್ಲಿ ಮತ್ತು ನಾಯಕ ನಟನಾಗಿ 28 ಚಿತ್ರಗಳಲ್ಲಿ ನಟಿಸಿದ್ದಾರೆ. “ಪ್ರೇಮದ ಕಾಣಿಕೆ” ಚಿತ್ರದ ಮೂಲಕ ಬೆಳ್ಳಿತೆರೆಯ ಮೇಲೆ ಕಾಣಿಸಿಕೊಂಡಿದ್ದರು.

ಡಾ.ರಾಜಕುಮಾರ ಅವರ ಕೊನೆಯ ಪುತ್ರ ಪುನೀತರಾಜಕುಮಾರ. 1975 ಮಾರ್ಚ್‌ 17 ರಂದು ಜನಿಸಿದರು. ಪುನೀತರಾಜಕುಮಾರ ಅವರು ತಂದೆಯ ಹಾದಿಯಲ್ಲೇ ಉತ್ತಮ ಚಿತ್ರಗಳನ್ನು ಕನ್ನಡ ನಾಡಿನ ಜನತೆಗೆ ಕೊಟ್ಟಿದ್ದಾರೆ. ಅವರ ಎಲ್ಲ ಚಿತ್ರಗಳು ಎಲ್ಲ ವಯಸ್ಸಿನ ವರ್ಗದವರಿಗೂ, ಕುಟುಂಬ ಸಹಿತ ಕುಳಿತು ನೋಡುವಂತ ಚಿತ್ರಗಳನ್ನು ಕನ್ನಡ ನಾಡಿನ ಅಭಿಮಾನಿಗಳಿಗೆ ಕೊಟ್ಟಿದ್ದಾರೆ. ಇವರ ಹಿರಿಯ ಸಹೋದರರಾದ ರಾಘವೇಂದ್ರ ರಾಜಕುಮಾರ ಮತ್ತು ಶಿವರಾಜ ಕುಮಾರ ಕೂಡ ಯಶಸ್ವಿ ನಾಯಕ ನಟರು.

ತಂದೆಯ ನಟನೆ ಮತ್ತು ಶೂಟಿಂಗ್‌ ಸೆಟ್‌ ಗಳಿಗೆ ಹೋಗುತ್ತಿದ್ದರು. ಅಪ್ಪುಗೆ ಬಾಲ್ಯದಿಂದಲೇ ನಟೆಯಲ್ಲಿ ಆಸಕ್ತಿಯಿತು. ಬಾಲ ನಟನಾಗಿ “ಭಕ್ತ ಪ್ರಹ್ಲಾದ” ಚಿತ್ರದಲ್ಲಿ ಮನೋಜ್ಞ ಅಭಿನಯ ಮಾಡಿ ಕನ್ನಡ ನಾಡಿನ ಅಭಿಮಾನಿಗಳ ಮನದಲ್ಲಿ ನೆಲೆಸಿದ್ದಾರೆ. ಪುನೀತರಾಜಕುಮಾರ ಬಾಲ ನಟರಾಗಿ “ಭಾಗ್ಯವಂತ”, “ಚಲಿಸುವ ಮೋಡಗಳು”, “ಪರಶುರಾಮ್”‌, “ಶಿವ ಮೆಚ್ಚಿದ ಕಣ್ಣಪ್ಪ”, “ಬೆಟ್ಟದ ಹೂ” “ವಸಂತ ಗೀತ”, “ಸನಾದಿ ಅಪ್ಪಣ್ಣ”, ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಬಾಲನಟರಾಗಿ ಅಭಿನಯಿಸಿದ್ದರು.

ಪುನೀತರಾಜಕುಮಾರ ನಟನೆಯ “ಬೆಟ್ಟದ ಹೂ” ಚಿತ್ರದ ರಾಮು ಪಾತ್ರಕ್ಕೆ ರಾಷ್ಟ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. “ಚಲಿಸುವ ಮೋಡಗಳು” ಮತ್ತು “ಎರಡು ಕನಸು” ಚಿತ್ರ ನಟನೆಗಾಗಿ ಅತ್ಯತ್ತಮ ಬಾಲನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ. 2002 ರಲ್ಲಿ “ಅಪ್ಪು” ಚಿತ್ರದ ಮೂಲಕ ನಾಯಕ ನಟರಾಗಿ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು.

ಪುನೀತ ನಾಯಕರಾಗಿ ಅಭಿ, ಆಕಾಶ್‌, ಅರಸು, ಮಿಲನ, ಜಾಕಿ, ಹುಡುಗರು, ಅಣ್ಣಾಬಾಂಡ್‌, ಪವರ್‌, ಮೌರ್ಯ, ನಮ್ಮ ಬಸವ, ಪೃಥ್ವಿ, ನಮ್ಮ ಬಸವ, ವಂಶಿ, ರಾಜ್‌, ಪರಮಾತ್ಮ, ಯಾರೇ ಕೂಗಾಡಲಿ, ನಟ ಸಾರ್ವಭೌಮ, ರಾಜಕುಮಾರ, ಅಂಜನಿಪುತ್ರ, ರಣವಿಕ್ರಮ, ದೊಡ್ಮನೆ ಹುಡುಗ, ರಾಮ್‌, ನಿನ್ನಿಂದಲೇ, ಮೈತ್ರಿ, ಚಕ್ರವ್ಯೂಹ, ಯುವರತ್ನ ಸೇರಿದಂತೆ ಹಲವು ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.

ಚಿತ್ರನಿರ್ಮಾಪಕರಾಗಿ “ಕವಲುದಾರಿ”, “ಮಾಯಾಬಜಾರ್”‌, “ಫ್ರೆಂಚ್‌ ಬಿರಿಯಾನಿ”, “ಲಾ”, “ಪ್ಯಾಮಿಲಿ ಪ್ಯಾಕ್”‌, ಚಿತ್ರಗಳನ್ನು ಪಿ.ಆರ್.ಕೆ. ಪ್ರೊಡಕ್ಷನ್‌ ಹೋಮ್‌ ಬ್ಯಾನರ್‌ ನಲ್ಲಿ ನಿರ್ಮಿಸಿದ್ದಾರೆ. ತಾಯಿ ನೆನಪಿಗೊಸ್ಕರ ಪಿ.ಆರ್.ಕೆ. ಆಡಿಯೋ ಕಂಪನಿಯೊಂದನ್ನು ಸ್ಥಾಪಿಸಿದ್ದಾರೆ.

“ಕನ್ನಡದ ಕೋಟ್ಯಾಧಿಪತಿ”, “ಫ್ಯಾಮಿಲಿ ಪವರ್‌ ಶೋ ಕಾರ್ಯಕ್ರಮಗಳ ಯಶಸ್ವಿ ನಿರೂಪಣೆ ಮಾಡಿದ್ದಾರೆ. ಕಿರುತೆರೆಯಲ್ಲೂ ತಮ್ಮ ಪವರ ನಿರೂಪಣೆಯ ಮೂಲಕ ಸಾಭೀತು ಪಡಿಸಿದ್ದಾರೆ. ಕನ್ನಡ ನಾಡಿನ ಅಭಿಮಾನಿ ದೇವರುಗಳಲ್ಲಿ ಶಾಶ್ವತ ನೆನಪುಗಳನ್ನು ಬಿಟ್ಟು ಅಗಲಿದ್ದಾರೆ.


ambedkar image

LEAVE A REPLY

Please enter your comment!
Please enter your name here