ರವಿ ಡಿ ಚನ್ನಣ್ಣನವರ ಪೋಟೋ ಹಾಕಿಕೊಂಡು ವಾಹನ ಓಡಿಸುತ್ತಿದ್ದ ಚಾಲಕನಿಗೆ ರೂ.500 ದಂಡ

0
84

ವಿಜಯಪುರ ಮೇ 17: ವಿಜಯಪುರ ನಗರದ ಕೇಂದ್ರೀಯ ಬಸ್ ನಿಲ್ದಾಣದ ಮುಂಭಾಗದಲ್ಲಿ ಓಮಿನಿ ಕಾರ್ ಹಿಂಭಾಗ ಎಸ್ ಪಿ ರವಿ ಡಿ ಚೆನ್ನಣ್ಣನವರ ಪೊಟೋ ಹಾಕಿಕೊಂಡು ಚಾಲಕ ವಾಹನ ಓಡಿಸುತ್ತಿದ್ದ. ಸರಿಯಾದ ದಾಖಲಾತಿ ನೀಡದ್ದಕ್ಕೆ ರೂ. 500 ದಂಡ ಹಾಕಿ ಕಳುಹಿಸಿದ ಘಟನೆ ವಿಜಯಪುರ ನಗರದಲ್ಲಿ ನಡೆದಿದೆ.

ವಿಜಯಪುರ ನಗರದಲ್ಲಿ ಲಾಕಡೌನ್ ಮುಂದುವರೆದಿದ್ದು, ಅನಗತ್ಯ ಹೊರಗಡೆ ಬರುವವರ ವಿರುದ್ದ ದಂಡ ಹಾಗೂ ವಾಹನ ಸೀಜ್‌ ಮಾಡುತ್ತಿದ್ದಾರೆ. ಜನರೂ ಕೂಡ ನಿಗದಿತ ಸಮಯದಲ್ಲಿ ಮಾರುಕಟ್ಟೆಗಳತ್ತ ಬಂದು ಹೋಗುತ್ತಿದ್ದಾರೆ. ಅವಶ್ಯಕತೆ ಇದ್ದವರಿಗೆ ಮಾತ್ರ ಅನುಮತಿ ನೀಡುತ್ತಿದ್ದಾರೆ. ವಿಜಯಪುರ ನಗರದ ಹೃದಯ ಭಾಗ ಗಾಂಧಿಚೌಕಿನಲ್ಲಿ ಬಿಗಿ ಪೋಲಿಸ್ ಬಂದೋ ಬಸ್ತ್ ವ್ಯವಸ್ಥೆ ಮಾಡಲಾಗಿದೆ.


LEAVE A REPLY

Please enter your comment!
Please enter your name here