ಅಥಣಿ ತಾಲೂಕಾ ಗೃಹರಕ್ಷಕ ಸಿಬ್ಬಂದಿಯಿಂದ ಹೀಗೊಂದು ಶ್ಲಾಘನೀಯ ಕಾರ್ಯ

0
230

ಬೆಳಗಾವಿ ಮೇ 17: ಪ್ರಕೃತಿ ವಿಕೋಪ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಜನಸೇವೆ ಸಲ್ಲಿಸುವಲ್ಲಿ ಯಾವತ್ತೂ ಮುಂಚೂಣಿಯಲ್ಲಿ ಇರುವ ಒಂದು ಇಲಾಖೆ ಅಂದರೆ ಅದು ನಿಸ್ಸಂದೇಹವಾಗಿ ಗೃಹರಕ್ಷಕ ಮತ್ತು ಪೌರ ರಕ್ಷಣಾ ಇಲಾಖೆ ಎಂದು ಹೇಳಬಹುದು.

ಏಕೆಂದರೆ ಪೋಲಿಸ್ ಇಲಾಖೆಗೆ ಹೆಚ್ಚಿನ ಒತ್ತಡ ಇರುವ ಸಂದರ್ಭಗಳಲ್ಲಿ ಅವರ ನೆರವಿಗೆ ಬರುವುದೇ ಗೃಹರಕ್ಷಕರು.ಇದೀಗ ದೇಶದಲ್ಲಿ ಕೋವಿಡ್ ನ ಎರಡನೆ ಅಲೆ ಭೀಕರ ಸ್ವರೂಪ ಪಡೆದಿರುವ ಈ ಸಂದರ್ಭದಲ್ಲಿ ರಾಜ್ಯ ಗೃಹರಕ್ಷಕ ದಳ ಇಡೀ ಕರ್ನಾಟಕದಾದ್ಯಂತ ನಿಷ್ಕಾಮ ಸೇವೆ (ಸಂಬಳ ರಹಿತ) ಸಲ್ಲಿಸುವಲ್ಲಿ ನಿರತರಾಗಿದ್ದಾರೆ.ಇದೀಗ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಗೃಹರಕ್ಷಕ ಸಿಬ್ಬಂದಿ ಕೈಗೊಂಡ ಕಾರ್ಯವೊಂದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಪೋಲೀಸ್ ಇಲಾಖೆಯ ಜೊತೆ ಜಂಟಿಯಾಗಿ ಕಾರ್ಯ ನಿರ್ವಹಿಸುವುದು ಮಾತ್ರ ವಲ್ಲದೆ ಕೋವಿಡ್ ಕರ್ತವ್ಯ ನಿರತ ಪೋಲಿಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿಗಳಿಗೆ ಊಟ, ಎಳೆನೀರು, ರಾಗಿ ಗಂಜಿ ಇತ್ಯಾದಿ ಆವಶ್ಯಕ ವಸ್ತುಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ವ್ಯವಸ್ಥೆ ಮಾಡಿಸಿದ್ದಾರೆ,ಇದೀಗ ಸಾರ್ವಜನಿಕರಲ್ಲಿ ಕರೋನ ಬಗ್ಗೆ ಮೂಡಿಸುವ ನಿಟ್ಟಿನಲ್ಲಿ, ನಗರದಲ್ಲಿ ಪಥಸಂಚಲನ ಕೈಗೊಂಡಿದ್ದು ಮಾತ್ರವಲ್ಲದೆ ಮೈಕ್ ಮೂಲಕ ನಾಗರಿಕರಿಗೆ ಕೋವಿಡ್ ನ ನಿಯಂತ್ರಣಕ್ಕೆ ಸರ್ಕಾರ ಸೂಚಿಸಿರುವ ನಿಯಮಾವಳಿಗಳ ಪಾಲನೆ ಕುರಿತು ತಿಳುವಳಿಕೆ ನೀಡುವ ಕಾರ್ಯ ಮಾಡಿದ್ದಾರೆ.

ಜೊತೆಗೆ ಕೊವಿಡ್ ಮಹಾಮಾರಿಯನ್ನು ಸಮರ್ಥವಾಗಿ ಹೇಗೆ ಎದುರಿಸಬೇಕು ಎನ್ನುವ ಮಾಹಿತಿಗಳ ಬ್ಯಾನರ್ ಗಳನ್ನು ಆಟೋ ಗಳಿಗೆ ಅಂಟಿಸಿ ಆಮೂಲಕ ಸಾರ್ವಜನಿಕರಿಗೆ ಕರೋನಾ ರೋಗದ ಮುನ್ನೆಚ್ಚರಿಕೆ ನೀಡಿದ ಗೃಹರಕ್ಷಕ ರ ಈ ನಿಷ್ಕಾಮ ಸೇವೆ ಸಾರ್ವಜನಿಕರ ಮೆಚ್ಚುಗೆಗೆ ಮಾತ್ರವಲ್ಲದೆ ಪೋಲೀಸರ ಅಧಿಕಾರಿಗಳ ಮೆಚ್ಚುಗೆ ಗೂ ಸಹ ಪಾತ್ರವಾಗಿದೆ.ಇದೇ ಸಂದರ್ಭದಲ್ಲಿ ಅಥಣಿ ಗೃಹರಕ್ಷಕ ದಳ ಘಟಕಾಧಿಕಾರಿ ಸುಭಾಷ್ ದೊಡವಾಡ ಅವರು ಪೋಲಿಸ್ ಮತ್ತು ಗೃಹರಕ್ಷಕ ಸಿಬ್ಬಂದಿಗಳಿಗೆ ಉಚಿತ ಮಾಸ್ಕ ವಿತರಿಸಿದರು.

ಈ ಜಾಗೃತಿ ಅಭಿಯಾನದಲ್ಲಿ ಅಥಣಿ Dysp ಎಸ್.ವಿ.ಗಿರೀಶ್.CPI ಶಂಕರಗೌಡ ಅಥಣಿ ಪಿಎಸ್ ಐ ಕುಮಾರ್ ಹಾಡಕಾರ್ KSRP ಯ RSI M.M ಚನಬಸನವರ್ .ಅಥಣಿ ತಾಲೂಕ ಗೃಹರಕ್ಷಕ ಅಧಿಕಾರಿ ರವಿಕುಮಾರ್ ಕೋಳಿ ಮತ್ತು ಅಥಣಿ ಗೃಹರಕ್ಷಕ ದಳ ಘಟಕಾಧಿಕಾರಿ ಸುಭಾಷ್ ದೊಡವಾಡ ಪಾಲ್ಗೊಂಡಿದ್ದರು


ambedkar image

LEAVE A REPLY

Please enter your comment!
Please enter your name here