ಸಿದ್ದರಾಮಯ್ಯ ಹೇಳಿದಂತೆ 10 ಸಾವಿರ ಕೊಡಲು ಸಾಧ್ಯವಿಲ್ಲ: ಸಚಿವ ಕೆ.ಎಸ್.ಈಶ್ವರಪ್ಪ

0
217
ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ

ಶಿವಮೊಗ್ಗ ಮೇ 10: ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ತಲಾ 10 ಸಾವಿರ ನೆರವು ನೀಡಲು ನಾವೇನು ನೋಟ್‌ ಪ್ರೀಂಟ್‌ ಮಾಡ್ತೀವಾ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ರವರ ವಿರುದ್ದ ಹರಿಹಾಯ್ದರು.

ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜೆಡಿಎಸ್‌ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು 14 ದಿನ ತಮ್ಮ ಬಾಯಿಗೆ ಬೀಗ ಹಾಕಿಕೊಂಡರೆ ಲಾಕ್‌ ಡೌನ್‌ ಸಂಪೂರ್ಣ ಯಶಸ್ವಿಯಾಗುತ್ತದೆ. ಎಲ್ಲೋ ಎ.ಸಿ. ರೂಮ್‌ ನಲ್ಲಿ ಕುಳಿತು ಅನಗತ್ಯ ಟೀಕೆ ಮಾಡುವುದು ಶೋಭೆ ತರುವುದಿಲ್ಲ.

ಬಿಜೆಪಿ ಸರಕಾರ ಹಗಲಿರುಳು ಕೊವೀಡ್‌ ನಿಯಂತ್ರಣಕ್ಕಾಗಿ ಶ್ರಮಿಸುತ್ತಿದೆ. ಅಗತ್ಯ ಸಲಹೆ, ಸೂಚನೆ ನೀಡುವುದು ಬಿಟ್ಟು ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿದಂತೆ 10 ಸಾವಿರ ಕೊಡಲು ಸಾಧ್ಯವಿಲ್ಲ ಎಂದು ಕುಟುಕಿದರು.


 

ambedkar image

LEAVE A REPLY

Please enter your comment!
Please enter your name here