ಪ್ರೀತಿಸುವ ಜೀವವಿದೆ

0
213
ಬದುಕು image

ಬೀಸುವ ಎಳೆ ಗಾಳಿಯಲ್ಲಿ
ನಿನ್ನ ಸ್ಪರ್ಶ ಬಂದಿದೆ
ಗಗನ ತುಂಬ ಚುಕ್ಕಿಯರಳಿವೆ
ನೆನಪು ಬಂದು ಮತ್ತೆ ಪ್ರೀತಿ ಚಿಗುರಿದೆ

ಸುಳಿ-ಗಾಳಿ ಬೀಸಿ
ಪ್ರಕೃತಿ ಒಡಲು
ಸೊಬಗು-ಬೆಡಗು ತುಂಬಿ
ನೆನಪು ಬಂದು ಮತ್ತೆ ಕಣ್ಣೀರ ಕಡಲ ಉಕ್ಕಿದೆ.

ಎಳೆ ಗಾಳಿ ಬೀಸಿದರೆ
ನಿನ್ನ ಸ್ಪರ್ಶವೇಕೆ ಬಂತು
ಹೋಗಿಲ್ಲವೇನು ಪ್ರೀತಿ ಸತ್ತು
ತಂಗಾಳಿಯಲಿ ತಂಗಾಳಿಯಾಗಿ ಸ್ಪರ್ಶಿಸದಿರು

ತಂಗಾಳಿಯ ಹಾಗಾಗಬೇಡ
ಬಿಗಿದಪ್ಪಿಕೊಂಡ ಪ್ರೀತಿಗೆ ಬರಡಾಗಬೇಡ
ತಂಗಾಳಿಯ ನಿನ್ನ ಸ್ಪರ್ಶವಾಗಿ
ನೆನಪು ಬಂದು ಮತ್ತೆ ಭಾವ ತುಂಬಿ ಕವಿತೆ ಮೂಡಿದೆ.

ಹೊಟ್ಟೆಯುರಿಸುವ, ಮನವ ನೋಯಿಸುವ
ತಂಗಾಳಿಯಾಗಿ ಬರಬೇಡ
ಮರೆತೆನೆಂದು ದುಡುಕಿ ಮರೆಯಾಗಬೇಡ
ಪ್ರೀತಿಯಿದೆ, ನೆನಪು ಇದೆ, ಪ್ರೀತಿಸುವ ಜೀವ ಇನ್ನೂ ಇದೆ.


LEAVE A REPLY

Please enter your comment!
Please enter your name here