ಲಾಂಛನ ವಿನ್ಯಾಸಕಾರ ಸ್ಫರ್ಧೆಗೆ ಅರ್ಜಿ ಆಹ್ವಾನ

0
195
ಜಿಲ್ಲಾಧಿಕಾರಿ ಪಿ. ಸುನೀಲ ಕುಮಾರ

ವಿಜಯಪುರ: ಫೆ:11: ಜಿಲ್ಲಾ ಕೌಶಲ್ಯ ಅಭಿವೃದ್ಧಿ ಕಚೇರಿಯ ಲೋಗೋ ವಿನ್ಯಾಸಗೊಳಿಸಲು ಸ್ಫರ್ಧೆಯನ್ನು ಏರ್ಪಡಿಸಲು ಉದ್ದೇಶಿಸಲಾಗಿದ್ದು, ಇದಕ್ಕಾಗಿ ಸಿದ್ಧಪಡಿಸಲಾದ ವೆಬ್‍ಪೇಜ್‍ನ್ನು ಜಿಲ್ಲಾಧಿಕಾರಿಗಳು ಬುಧುವಾರದಂದು ಬಿಡುಗಡೆಗೊಳಿಸಿದರು.

ಈ ಸ್ಫರ್ಧೆಯಲ್ಲಿ ಭಾಗವಹಿಸಲು ಎಲ್ಲ ವಿನ್ಯಾಸಕಾರರನ್ನು ಆಹ್ವಾನಿಸಲಾಗಿದ್ದು, ಜಿಲ್ಲೆಯ ಇತಿಹಾಸ, ಸಂಸ್ಕøತಿ ಮತ್ತು ವಿಶಿಷ್ಟತೆಗಳನ್ನು ಬಿಂಬಿಸುವ ಲಾಂಛನ ವಿನ್ಯಾಸಗೊಳಿಸುವುದಕ್ಕಾಗಿ ಒಂದು ಸ್ಫರ್ಧೆಯ ಮೂಲಕ ಅರ್ಜಿ ಸಹ ಆಹ್ವಾನಿಸಲಾಗಿದೆ.

ಜಿಲ್ಲಾ ಕೌಶಲ್ಯ ಮಿಷನ್ ಸಮಿತಿ ಸಭೆಯಲ್ಲಿ ಅತೀ ಹೆಚ್ಚು ಮೆಚ್ಚುಗೆ ಪಡೆದ ಮೊದಲ 3 ವಿನ್ಯಾಸಗಳಲ್ಲಿ ಅಂತಿಮವಾಗಿ ಒಂದನ್ನು ಆಯ್ಕೆ ಮಾಡಿ ವಿಜೇತರನ್ನು ಘೋಷಿಸಲಾಗುವುದು. ನಂತರ ವ್ಯವಸ್ಥಾಪಕರು, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಬೆಂಗಳೂರು ಇವರಿಗೆ ಅನುಮೋದನೆಗಾಗಿ ಕಳುಹಿಸಲಾಗುವುದು.
ಪ್ರಥಮ ಬಹುಮಾನ – 5000 ರೂ, ದ್ವಿತೀಯ ಬಹುಮಾನ-3000 ರೂ, ತೃತೀಯ ಬಹುಮಾನ-1000 ರೂ ಆಗಿದ್ದು, ಎಲ್ಲಾ ವಿಜೇತರಿಗೆ ಒಂದು ಪ್ರಮಾಣ ಪತ್ರವನ್ನು ವಿತರಿಸಲಾಗುವುದು.

ಇಚ್ಛೆಯುಳ್ಳವರು ಲಾಂಛನದೊಂದಿಗೆ ತಮ್ಮ ಪೂರ್ಣ ವಿವರವನ್ನು ದಿನಾಂಕ : 10-02-2021 ರಿಂದ 26-2-2021 ರೊಳಗಾಗಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ (ವಿಜೇತರಾದವರಿಗೆ ಬಹುಮಾನ, ಲಾಂಛನ ರಚಿಸುವ ನಿಯಮಗಳು, ಸಲ್ಲಿಸುವ ವಿಧಾನ ಮತ್ತು ನಮೂನೆ ಇತ್ಯಾದಿ) ಈ tinyurl.com/dsmlogo ಲಿಂಕ್‍ನಲ್ಲಿ ವೀಕ್ಷಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.


ambedkar image

LEAVE A REPLY

Please enter your comment!
Please enter your name here