ಮಾಜಿ ಸೈನಿಕರಿಂದ 72ನೇ ಗಣರಾಜ್ಯೋತ್ಸವ ಆಚರಣೆ

0
53

ವಿಜಯಪುರ ಜ.26: 72ನೇ ಗಣರಾಜ್ಯೋತ್ಸವದ ಅಂಗವಾಗಿ ವಿಜಯಪುರ ಜಿಲ್ಲಾ ಮಾಜಿ ಸೈನಿಕರ ಕಲ್ಯಾಣ ಸಂಘದಲ್ಲಿ ಜಿಲ್ಲೆಯ ಸಮಸ್ತ ಮಾಜಿ ಸೈನಿಕರು 72ನೇ ಗಣರಾಜ್ಯೋತ್ಸವ ಅತೀ ವಿಜೃಂಭಣೆಯಿಂದ ಆಚರಿಸಲಾಯಿತು.

ಧ್ವಜಾರೋಹಣವನ್ನು ಅಧ್ಯಕ್ಷರಾದ ಎಂ.ಬಿ. ತೋಟದ ನೆರವೇರಿಸಿ ಮಾತನಾಡಿದ ಅವರು, ದೇಶದ ಸಮಸ್ತ ನಾಗರಿಕರಿಗೆ ಶುಭಾಶಯಗಳನ್ನು ಕೋರಿದರು. ಹಾಗೂ 1971 ರ ಇಂಡೋ ಪಾಕ್ ಯುದ್ಧದ ವಿಜಯೋತ್ಸವನ್ನು ವಿಜೃಂಭಣೆಯಾಗಿ ಗೋಲ್ಡನ್ ಜುಬ್ಲಿ ಆಚರಿಸುವ ಕುರಿತು ಎಲ್ಲ ಮಾಜಿ ಸೈನಿಕರಿಗೆ ವಿವರಿಸಲಾಯಿತು.

ಈ ಸಂಧರ್ಭದಲ್ಲಿ ಜಿಲ್ಲೆಯ ಮಾಜಿ ಸೈನಿಕ ಅಧ್ಯಕ್ಷರಾದ ಎಂ.ಬಿ. ತೋಟದ, ಕರ್ನಲ್ ಬಿ.ಎಸ್. ಹಿಪ್ಪರಗಿ, ಸ್ಕಾಡನ್ ಲೀಡರ್ ಗುಡ್ಡದ, ಉಪಾಧ್ಯಕ್ಷ ಎಸ್. ಮುಚ್ಚಂಡಿ, ಕಾರ್ಯದರ್ಶಿ ಜೈನುದ್ದೀನ ಗುಂಡಬಾವಡಿ ಹಾಗೂ ಎಸ್.ಡಿ.ಮಾನೆ, ನಾನಾಗೌಡ ಹಿರೇಗೌಡರ, ಎಸ್.ಡಿ.ಬಿರಾದಾರ, ತಾಲಬಾವಡಿ, ಎಸ್.ಶೇಗುಣಸಿ, ಮಾಚಪ್ಪನವರ, ಸೇರಿದಂತೆ ಹಾಗೂ ಸಮಸ್ತ ಮಾಜಿ ಸೈನಿಕರು ಹಾಜರಿದ್ದರು.


LEAVE A REPLY

Please enter your comment!
Please enter your name here