ವಿದ್ಯಾಗಮ ಜನೇವರಿ 1 ರಿಂದ ಪುನರಾರಂಭ

0
73

ಬೆಂಗಳೂರು ಡಿ.17: ಗ್ರಾಮೀಣ ಪ್ರದೇಶದ ಮಕ್ಕಳ ಹಿತದೃಷ್ಟಿಯಿಂದ ಜಾರಿಗೆ ಬಂದಿದ್ದ ವಿದ್ಯಾಗಮ ಯೋಜನೆಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಜನೇವರಿ 1 ರಿಂದ ವಿದ್ಯಾಗಮ ಪುನರಾರಂಭಿಸಲಾಗುತ್ತಿದೆ.

ಮಕ್ಕಳು ಆನ್‌ಲೈನ್ ತರಗತಿಗಳಿಗೆ ನೆಟ್ ವರ್ಕ್ ಸಮಸ್ಯೆ, ವಿದ್ಯುತ್ ಸಮಸ್ಯೆ, ಸುಧಾರಿತ ಮೊಬೈಲ್ ಕೊರತೆ ಹೀಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಹಿನ್ನೆಲೆ ವಿದ್ಯಾರ್ಥಿಗಳ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ಜನೇವರಿ 1 ರಿಂದ ಪರಿಷ್ಕೃತ ರೂಪದಲ್ಲಿ ಮತ್ತೆ ವಿದ್ಯಾಗಮವನ್ನ ಜಾರಿಗೆ ತರಲು ನಿರ್ಧರಿಸಲಾಗಿದೆ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ತಿಳಿಸಿದ್ದಾರೆ.

ವಿದ್ಯಾಗಮ ಆರಂಭವನ್ನು ಶಾಲೆಗಳ ಆರಂಭ ಎಂದು ಯಾರೂ ಭಾವಿಸಬಾರದು. ಕಲಿಕೆ ನಿರಂತರವಾಗಿಬೇಕು ಎಂಬ ದೃಷ್ಟಿಯಿಂದ ಈ ವಿದ್ಯಾಗಮ ಯೋಜನೆ ಪುನಾರಂಭಿಸಲಾಗಿದೆ. ಸ್ವಲ್ಪ ಬದಲಾವಣೆ ಮಾಡಿ ವಿದ್ಯಾಗಮವನ್ನು ಮತ್ತೆ ಜಾರಿಗೆ ತರಬೇಕು ಎಂದು ಶಿಕ್ಷಕ ವಲಯದಲ್ಲೂ ಅಭಿಪ್ರಾಯ ಕೇಳಿಬಂದಿತ್ತು. ಹಾಗಾಗಿ ಕೆಲವು ಸುಧಾರಿತ ಕ್ರಮಗಳೊಡನೆ ಈ ಯೋಜನೆಯನ್ನು ಮತ್ತೆ ಆರಂಭಿಸಲಾಗಿದೆ ಎಂದಿದ್ದಾರೆ.

ಶಿಕ್ಷಣ ಇಲಾಖೆ ಈ ಬಾರಿ ಹಲವು ಸುಧಾರಣೆಗಳನ್ನು ಕೈಗೊಂಡಿದ್ದು, ಯೋಜನೆ ಕೇವಲ ಸರ್ಕಾರಿ ಶಾಲೆಗಳಿಗೆ ಸೀಮಿತವಾಗಿಲ್ಲ. ಖಾಸಗಿ ಶಾಲೆಗಳು ಸಹ 1 ರಿಂದ 10ನೇ ತರಗತಿವರೆಗೆ ಅವಕಾಶವಿದೆ. ಇದು ಯಾವ ವಿದ್ಯಾರ್ಥಿಗೂ ಕಡ್ಡಾಯವಲ್ಲ. ತಂದೆ-ತಾಯಿ ಒಪ್ಪಿಗೆ ಕೊಟ್ಟರೆ ಮಾತ್ರ ವಿದ್ಯಾರ್ಥಿಗಳು ಹಾಜರಾಗಬಹುದು. ಎಲ್ಲರಿಗೂ ಕೊರೊನಾ ಮಾರ್ಗಸೂಚಿ ಕಡ್ಡಾಯ ಎಂದಿದ್ದಾರೆ.


LEAVE A REPLY

Please enter your comment!
Please enter your name here