ಈ ವರ್ಷ ಶಾಲೆಗಳನ್ನು ತೆರೆಯುವುದು ಬೇಡ :ಬರಡೋಲ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಪದಾಧಿಕಾರಿ ಶ್ರೀಮತಿ ಭಾರತಿ ಸಿ. ಕಟ್ಟಿಮನಿ

0
224
ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಪದಾಧಿಕಾರಿ ಶ್ರೀಮತಿ ಭಾರತಿ ಸಿ. ಕಟ್ಟಿಮನಿ

ವಿಜಯಪುರ ನ.05: ಇತ್ತೀಚೆಗೆ ಶಾಲೆಗಳನ್ನು ಪ್ರಾರಂಭಿಸುವ ಬಗ್ಗೆ ಮಾನ್ಯ ಶಿಕ್ಷಣ ಸಚಿವರು ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ಜಂಟಿ ಕಾರ್ಯದರ್ಶಿಗಳು ಹಾಗೂ ಖಾಸಗಿ ಶಾಲಾಡಳಿತ ಮಂಡಳಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ವರದಿಯನ್ನು ಮಾನ್ಯ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿರುತ್ತದೆ. ಆದರೆ ನಾನು ವಯಕ್ತಿಕವಾಗಿ ಈ ವರ್ಷ ಶಾಲೆಗಳನ್ನು ತೆರೆಯುವುದು ಬೇಡ ಎಂದು ಬರಡೋಲ ಬಿಜೆಪಿ ಮಹಿಳಾ ಮೋರ್ಚಾದ ಜಿಲ್ಲಾ ಪದಾಧಿಕಾರಿಗಳಾದ ಶ್ರೀಮತಿ ಭಾರತಿ ಸಿ. ಕಟ್ಟಿಮನಿ ಹೇಳಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ಆನ್‍ಲೈನ್ ಕ್ಲಾಸ್ ಮಾಡಿ ಎಲ್ಲರನ್ನು ಪಾಸಮಾಡಲು ಕೊರೋನಾ ಸಂಪೂರ್ಣ ಮುಕ್ತವಾದ ನಂತರ ಶಾಲೆಯನ್ನು ಆರಂಭಿಸಬೇಕು. ತರಾತುರಿಯಲ್ಲಿ ಪ್ರಾರಂಭಿಸಿ ನಂತರ ಕಷ್ಟ ಅನುಭವಿಸುವುದು ಬೇಡ. ಒಂದು ವೇಳೆ ಶಾಲೆಗಳನ್ನು ಆರಂಭಿಸಿದರು ವಸತಿ ನಿಲಗಳನ್ನು ಆರಂಭಿಸುವುದು ಬೇಡ. ಕಾರಣ ಏನೆಂದರೆ ವಸತಿ ನಿಲಯಗಳಲ್ಲಿ ವಿದ್ಯಾರ್ಥಿಗಳು ಊಟ ವಸತಿ ಕುಡಿಯುವ ನೀರು ಶೌಚಾಲಯಗಳನ್ನು ಸಾಮೂಹಿಕವಾಗಿ ಬಳಸುತ್ತಾರೆ.

ಸಾಮೂಹಿಕವಾಗಿ ಬಳಸುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಸಾಧ್ಯವಾದ ಮಾತು. ಆದ್ದರಿಂದ ವಸತಿ ನಿಲಯಗಳನ್ನು ಪ್ರಾರಂಭಿಸಿದರೆ ಕೊರೋನಾ ಹರಡಲು ನಾವೇ ಅಣೆಮಾಡಿಕೊಟ್ಟಂತಾಗುತ್ತದೆ. ಆದ್ದರಿಂದ ಯಾವುದೇ ಮೆಟ್ರಿಕ ಪೂರ್ವ ಹಾಗೂ ನಂತರದ ವಸತಿ ನಿಲಯಗಳನ್ನು ಸಂಪೂರ್ಣ ಕೊರೋನಾ ಮುಕ್ತವಾಗುವವರೆಗೂ ಹಾಗೂ ಲಸಿಕೆ ಸಿಗುವವರಿಗೂ ತೆರೆಯಬಾರದು ಎಂದು ಈ ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಒತ್ತಾಯಿಸಿದ್ದಾರೆ.


 

ambedkar image

LEAVE A REPLY

Please enter your comment!
Please enter your name here