ಮಳೆಯ ರುದ್ರನರ್ತನಕ್ಕೆ ಜಿಲ್ಲೆಯ ಜನಜೀವನ ಅಸ್ತವ್ಯಸ್ಥ; ಜಲಾಶಯಗಳ ಒಳಹರಿವು ಹೆಚ್ಚಳ

0
117

ವಿಜಯಪುರ ಅ.15 : ಜಿಲ್ಲೆಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ದೇ.ಹಿಪ್ಪರಗಿಯಲ್ಲಿ 9420 ಮೀ.ಮೀ ಮತ್ತು 8750 ಮೀ.ಮೀ ರಷ್ಟು ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ವಾಸ್ತವಿಕ ಮಳೆಯ ಪ್ರಮಾಣ 3.00 ಮೀ.ಮೀ ಇದ್ದು, 36.00 ಮೀ.ಮೀ ಮಳೆಯಾಗಿದ್ದು ಇದು ಶೇ 1155ರಷ್ಟು ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್ ಅವರು ತಿಳಿಸಿದ್ದಾರೆ. ಪ್ರವಾಹ ಪರಿಸ್ಥಿತಿ ನಿಯಂತ್ರಣ ಕುರಿತು ನೇಮಿಸಲಾದ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು ಉಪವಿಭಾಗಾಧಿಕಾರಿಗಳು, ತಹಸೀಲ್ದಾರರು ಕೇಂದ್ರ ಸ್ಥಾನದಲ್ಲಿದ್ದು, ಅತೀ ವೃಷ್ಟಿ, ಪ್ರವಾಹ ಪರಿಸ್ಥಿತಿ ನಿಯಂತ್ರಣ ಕುರಿತು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಜಿಲ್ಲಾಧಿಕಾರಿಗಳವರ ಕಚೇರಿಯಲ್ಲಿ ಜಿಲ್ಲಾ ಕಂಟ್ರೋಲ್ ರೂಮ್ ಸಂ, ಟೋಲ್ ಫ್ರೀ ನಂ : 1077 ಮತ್ತು 08352-221261 ಪ್ರಾರಂಭಿಸಿ, ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಮಹಾರಾಷ್ಟ್ರ ರಾಜ್ಯದಲ್ಲಿ ಅತೀ ಹೆಚ್ಚು ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಉಜಿನಿ ಜಲಾಶಯದಿಂದ 2.50 ಲಕ್ಷ ಕ್ಯೂಸೆಕ್ಸ್ ವೀರ ಜಲಾಶಯದಿಂದ 0.30 ಲಕ್ಷ ಕ್ಯೂಸೆಕ್ಸ್ ನೀರನ್ನು ಹರಿಬಿಡಲಾಗಿದ್ದು, ಇದಲ್ಲದೆ ಅಕ್ಕಲಕೋಟ ತಾಲೂಕಿನ ನಳದುರ್ಗಾ ಟ್ಯಾಂಕ್ ಹಾನಿಗೆ ಒಳಗಾಗಿರುವುದರಿಂದ ಭೀಮಾನದಿಯಲ್ಲಿ 300 ಲಕ್ಷಕ್ಕೂ ಅಧಿಕ ನೀರು ಹರಿಯುತ್ತಿರುವುದರಿಂದ ಪ್ರವಾಹ ಪರಿಸ್ಥಿತಿ ಉಂಟಾಗಿರುತ್ತದೆ.

ನದಿ ಪಾತ್ರದ ಎಲ್ಲ ಜನರಿಗೆ ಪ್ರವಾಹದ ಕುರಿತು ಮುನ್ನೆಚ್ಚರಿಕೆ ನೀಡಲಾಗಿದೆ. ಆಲಮಟ್ಟಿ ಜಲಾಶಯದ ಒಳಹರಿವು 0.99 ಲಕ್ಷ ಕ್ಯೂಸೆಕ್ಸ್ ಹೊರಹರಿವು 1.17 ಲಕ್ಷ ಕ್ಯೂಸೆಕ್ಸ್ ಸೊನ್ನ ಜಲಾಶಯದ ಒಳಹರಿವು 3.02 ಲಕ್ಷ ಕ್ಯೂಸೆಕ್ಸ್ ಹೊರಹರಿವು 3.03 ಲಕ್ಷ ಕ್ಯೂಸೆಕ್ಸ್ ಆಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.

ಸಿಂದಗಿ ತಾಲೂಕಿನ ಮೊರಟಗಿಯಲ್ಲಿ 01 ಕಾಳಜಿ ಕೇಂದ್ರವನ್ನು ಪ್ರಾರಂಭಿಸಲಾಗಿದ್ದು, ಅಲ್ಲಿ ಒಟ್ಟು 28 ಜನರಿಗೆ ಆಶ್ರಯವನ್ನು ಕಲ್ಪಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಯ ಗುಂದವಾನ (ಸೈಟ-2) ಕೆರೆ ಮಳೆಯಿಂದ ಹಾನಿಯಾದ ಕೆನಾಲ್ ಗೇಟ್ ಹಾಗೂ ಕೆನಾಲ್ ಹಾನಿಗೆ ಒಳಗಾಗಿದ್ದು, ಅದನ್ನು ದುರಸ್ತಿ ಪಡಿಸಲಾಗಿದೆ. ಇದರಿಂದ ಬೆಳೆ ಹಾನಿಯಾಗಿದ್ದು, ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿರುತ್ತದೆ.

ಮನೆ ಹಾನಿಯಲ್ಲಿ ಪೂರ್ಣ 01 ಭಾಗಶಃ 810 ಒಟ್ಟು 811 ಆಗಿದ್ದು, ಜಾನುವಾರು ಜೀವ ಹಾನಿಯಲ್ಲಿ ದೊಡ್ಡ 02 ಚಿಕ್ಕ 03 ಒಟ್ಟು 03 ಆಗಿರುತ್ತದೆ.

ಮುದ್ದೇಬಿಹಾಳ ತಾಲೂಕಿನ ಕೊಳೂರು ಗ್ರಾಮದಲ್ಲಿ ಮನೆಯ ಗೋಡೆ ಬಿದ್ದು, ಒಬ್ಬರು ಗಾಯಗೊಂಡಿರುತ್ತಾರೆ. ದೇ.ಹಿಪ್ಪರಗಿ ತಾಲೂಕಿನ ಮುಳಸಾವಳಗಿ ಗ್ರಾಮದಲ್ಲಿ ಹಳ್ಳದಲ್ಲಿ ಕೊಚ್ಚಿಕೊಂಡು ಹೋಗಿ ಒಬ್ಬ ವ್ಯಕ್ತಿಯು ಮೃತನಾಗಿರುತ್ತಾನೆ. ತಾಳಿಕೋಟಿ ಬಳಿ ದೋಣಿ ನದಿಯಲ್ಲಿ ಏಳು ಜನ ಕಟ್ಟಿಗೆ ಕಡಿಯುವವರು ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.

ಬಗಲೂರು ಮತ್ತು ಘತ್ತರಗಾ ಬ್ರಿಜ್ ಮೇಲೆ ನೀರು ಬಂದಿದ್ದು, ಸಿಂದಗಿ ಮತ್ತು ಅಫಜಲಪೂರ ರಸ್ತೆ ಸಂಪರ್ಕ ಕಡಿತಗೊಂಡಿರುತ್ತದೆ. ಸಿಂದಗಿ ತಾಲೂಕಿನ ತಾರಾಪೂರ ಗ್ರಾಮಕ್ಕೆ ನೀರು ಸುತ್ತುವರೆದಿರುತ್ತದೆ. ಉಪ ವಿಭಾಗಾಧಿಕಾರಿಗಳು ಇಂಡಿ ಇವರ ನೇತೃತ್ವದಲ್ಲಿ ಸ್ಥಳಾಂತರಿಸುವ 50 ಕುಟುಂಬಗಳನ್ನು ಸ್ಥಳಾಂತರಿಸುವ ಕಾರ್ಯ ಪ್ರಗತಿಯಲ್ಲಿರುತ್ತದೆ.

ಲೋಕೋಪಯೋಗಿ ಇಲಾಖೆಯ ಒಟ್ಟು 6303 ಕಿ.ಮೀ ರಸ್ತೆಯ ಮತ್ತು 2 ಬ್ರಿಡ್ಜ್‍ಗಳ ಹಾನಿಗೆ ಒಳಗಾಗಿರುತ್ತದೆ. ಮೂಲಭೂತ ಸೌಕರ್ಯಗಳ ಹಾನಿಯ ಕುರಿತು ಸಮೀಕ್ಷೆಯ ಕಾರ್ಯ ಪ್ರಗತಿಯಲ್ಲಿರುತ್ತದೆ. ಬೆಳೆ ಹಾನಿಯ ಕುರಿತು ಬೆಳೆ ಸಮೀಕ್ಷಾ ಕಾರ್ಯ ಪ್ರಗತಿಯಲ್ಲಿರುತ್ತದೆ ಎಂದು ಅವರು ತಿಳಿಸಿದ್ದಾರೆ.


 

LEAVE A REPLY

Please enter your comment!
Please enter your name here