ನಿರುದ್ಯೋಗಿಗಳಿಗೊಂದು ಅವಕಾಶ

0
231
ಸಾಂದರ್ಭಿಕ ಚಿತ್ರ

ವಿಜಯಪುರ ಸೆ.12: ಜಿಲ್ಲೆ ಹಾಗೂ ತಾಲೂಕಾ ವ್ಯಾಪ್ತಿಯಲ್ಲಿ ಅವತಾರ ಯೋಜನೆಯಡಿ ಸಾರಿಗೆ ಸಂಸ್ಥೆಯ ಬಸ್ಸುಗಳ ಮುಂಗಡ ಟಿಕೆಟ್ ಕೌಂಟರ್ ನೀಡುವ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿ ಈ ಮೊದಲು ಟೆಂಡರ್ ಮುಖಾಂತರ ಖಾಸಗಿ ಟಿಕೆಟ್ ಏಜೆಂಟರ್ ನ್ನು ಆಯ್ಕೆ ಮಾಡಲಾಗುತ್ತಿದ್ದು, ಈ ಪ್ರಕ್ರಿಯೆ ಹಿಂಪಡೆದು ಪ್ರಸ್ತುತ ಖಾಸಗಿ ಅವತಾರ ಟಿಕೆಟ್ ಏಜೆಂಟರ್ ನ್ನು ವಾಕ್ ಇನ್ ಪದ್ಧತಿಯನ್ವಯ ಆಯ್ಕೆಮಾಡಲಾಗುವುದು ಎಂದು ವಿಜಯಪುರ ವಿಭಾಗ, ಈ.ಕ.ರ.ಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆ ಹಾಗೂ ತಾಲೂಕ ವ್ಯಾಪ್ತಿಯಲ್ಲಿರುವ ನಿರುದ್ಯೋಗಿ ಯುವಕ ಯುವತಿಯರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ ಹಾಗೂ ಈ.ಕ.ರ.ಸಾ ಸಂಸ್ಥೆಯ ವಿಜಯಪುರ ವಿಭಾಗದ (ಸಂಚಾರ ಶಾಖೆಯಲ್ಲಿ) ಕಚೇರಿ ವೇಳೆಯಲ್ಲಿ ವಿಚಾರಿಸಬಹುದಾಗಿದೆ ಅಥವಾ ವಿಭಾಗೀಯ ಸಾರಿಗೆ ಅಧಿಕಾರಿ : 7760992252 ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


advertisement

ambedkar image

LEAVE A REPLY

Please enter your comment!
Please enter your name here