ಮಾಜಿ ಮುಖ್ಯಮಂತ್ರಿ ಜಯಲಲಿತಾರ 900 ರೂ. ಕೋಟಿ ಆಸ್ತಿ ಯಾರ ಪಾಲಿಗೆ!

0
270

ಚನ್ನೈ ಮೇ. 28: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ. ಜಯಲಲಿತಾರ 900 ರೂ. ಕೋಟಿ ಮೌಲ್ಯದ ಆಸ್ತಿಗೆ ಅವರ ಬಂಧುಗಳಾದ ಸೋದರ ಸೊಸೆ ಜೆ.ದೀಪಾ ಹಾಗೂ ಸೋದರ ಅಳಿಯ  ಜೆ.ದೀಪಕ್ ‘ಕಾನೂನುಬದ್ಧ ವಾರಸುದಾರರು’ ಎಂದು ಮದ್ರಾಸ್ ಹೈಕೋರ್ಟ್ ಪರಿಗಣಿಸಿದೆ.

ಜಯಾಲಲಿತಾರ  ಸಾವಿನ ನಂತರ ಅವರ ಆಸ್ತಿಯನ್ನು ಗೆಳತಿ ಶಶಿಕಲಾ ಅನುಭವಿಸುತ್ತಿದ್ದರು. ಇದನ್ನು ಪ್ರಶ್ನಿಸಿ ಜಯಾರ ಸೋದರ ಅಳಿಯ ಹೈಕೋರ್ಟ್ ಮೇಟ್ಟಿಲೇರಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್ ಕಿರುಬಾಕರನ್ ಹಾಗೂ ನ್ಯಾಯಮೂರ್ತಿ ಅಬ್ದುಲ್ ಖೂದ್ದಸ್ ಅವರ ಪೀಠ ದೀಪಾ ಹಾಗೂ ದೀಪಕ್ ರವರಿಗೆ ಜಯಾರ ಆಸ್ತಿ ಮೇಲೆ ಹುಕ್ಕು ಇದೆ ಎಂದು ಅರ್ಜಿ ಮಾನ್ಯ ಮಾಡಿತ್ತು. ಇವರಿಗೆ ಸುಮಾರು 913 ರೂ. ಕೋಟಿ ಆಸ್ತಿ ದೊರಕಬಹುದು ಎಂದು ಕೋರ್ಟ್ ಮೌಲ್ಯಮಾಪನ ಮಾಡಿದೆ.

ಜಯಾ ಅವರ “ವೇದ ನಿಲಯಂ” ನಿವಾಸವನ್ನು ಸ್ಮಾರಕ ಎಂದು ಪರಿಗಣಿಸದೇ ಮುಖ್ಯಮಂತ್ರಿಗಳ ಅದಿಕೃತ ಕಛೇರಿ ಅಥವಾ  ನಿವಾಸ ಎಂದು ಪರಿಗಣಿಸಬಹುದು. ಸಣ್ಣ ಭಾಗವನ್ನು ಮಾತ್ರ ಸ್ಮಾರಕ ಮಾಡಬಹುದು ಎಂದು ಕೋರ್ಟ್ ಸಲಹೆ ನೀಡಿತು.


 

ambedkar image

LEAVE A REPLY

Please enter your comment!
Please enter your name here