ವಿಜಯಪುರ: ಅಕ್ರಮ ಸಾರಾಯಿ ಮಾರಾಟ ಮಾಡುತ್ತಿದ್ದ ಧಾಬಾ, ಹೊಟೇಲ್ ಗಳ ಮೇಲೆ ದಾಳಿ; 51 ಜನ ಬಂಧನ

0
229
ಸಾಂದರ್ಭಿಕ ಚಿತ್ರ

ವಿಜಯಪುರ (ಸಪ್ಟಂಬರ) 07: ಅಕ್ರಮವಾಗಿ ಸರಾಯಿ ಮಾರಾಟ ಮಾಡುತ್ತಿದ್ದ ದಾಬಾ, ಹೋಟೆಲ್ ಗಳ ಮೇಲೆ ದಾಳಿ ಮಾಡಿರುವ ಪೊಲೀಸರು ಒಟ್ಟು 138 ಸ್ಥಳಗಳಲ್ಲಿ ಅಕ್ರಮ ಸರಾಯಿ ದಂಧೆಯನ್ನು ಪತ್ತೆ ಹಚ್ಚಿದ್ದಾರೆ. ಮಾರಾಟ ಮಾಡುತ್ತಿರುವವರ ವಿರುದ್ದ ದಾಳಿ ಮಾಡಿ ಕಾನೂನು ಕ್ರಮ ಜರುಗಿಸಿದ್ದು, ಈ ಪೈಕಿ ವಿಜಯಪುರ ಜಿಲ್ಲೆಯಲ್ಲಿ 38 ದಾಬಾ, 05 ಹೋಟೆಲ್ ಹಾಗೂ 06 ಗ್ರಾಮಗಳಲ್ಲಿ ಹೀಗೆ ಒಟ್ಟು 49 ಪ್ರಕರಣಗಳನ್ನು ಅಬಕಾರಿ ಕಾಯ್ದೆಯಡಿಯಲ್ಲಿ ದಾಖಲಿಸಿಕೊಂಡು, 51 ಜನ ಆರೋಪಿತರನ್ನು ಬಂಧಿಸಿದ್ದಾರೆ. ಬಂಧಿತರಿಂದ ಒಟ್ಟು 128.74 ಲೀಟರ್ ಅಕ್ರಮ ಸರಾಯಿಯನ್ನು ವಶಪಡಿಸಿಕೊಂಡು ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಎಸ್ಪಿ ಅಗರವಾಲ ತಿಳಿಸಿದ್ದಾರೆ.


 

LEAVE A REPLY

Please enter your comment!
Please enter your name here