ವಿಜಯಪುರ: ಅಕ್ರಮ ಗಾಂಜಾ ಪತ್ತೆ ಪೊಲೀಸರ ದಾಳಿ

0
168
ಸಾಂದರ್ಭಿಕ ಚಿತ್ರ

ವಿಜಯಪರ (ಸಪ್ಟಂಬರ್ ) 07: ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದ ಹೋಲವೊಂದರಲ್ಲಿ ಗಾಂಜಾ ಜಪ್ತಿ. 

ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ರಾಜನಾಳ ಗ್ರಾಮದ ಹೊಲವೊಂದರ ಬೆಳೆಗಳ ಮಧ್ಯ ಬೆಳೆಯಲಾಗಿದ್ದ, 72 ಕೆ.ಜಿ. ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಆರೋಪಿ ರವಿ ವಾಲೀಕಾರ ಎಂಬುವವನು ತನ್ನ ತೋಟದಲ್ಲಿ ಅಕ್ರಮವಾಗಿ ಗಾಂಜಾವನ್ನು ಬೆಳೆದಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಡಿಎಸ್‍ಪಿ ಶಾಂತವೀರ, ನೇತೃತ್ವದಲ್ಲಿ ಪಿಎಸ್‍ಐ ಸಿ. ಬಿ. ಚಿಕ್ಕೋಡಿ ಸಿಬ್ಬಂದಿಗಳು ಹಾಗೂ ತಹಶೀಲ್ದಾರ ರವರೊನ್ನಳಗೊಂಡ ತಂಡದೊಂದಿಗೆ ದಾಳಿ ನಡೆಸಿ ಗಾಂಜಾವನ್ನು ಜಪ್ತ ಮಾಡಿ ಆರೋಪಿತನನ್ನು ಬಂಧಿಸಿದ್ದು, ಈ ಕುರಿತು ನಿಡಗುಂದಿ ಪೊಲೀಸ್ ಠಾಣೆ ಗುನ್ನಾ ನಂ. 94/2020 ರಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗಿದೆ.

ವಿಜಯಪುರ ಗಾಂಧಿಚೌಕ ಪೊಲೀಸ್ ಠಾಣಾ ವ್ಯಾಪ್ತಿಯ ಹೋಲವೊಂದರಲ್ಲಿ ಅಕ್ರಮವಾಗಿ ಬೆಳೆದ ಗಾಂಜಾ ಜಪ್ತಿ.
ವಿಜಯಪುರ ಶಹರದ ಬಬಲೇಶ್ವರ ರಸ್ತೆಯ ಜಮಖಂಡಿ ನಾಕಾ ಹತ್ತಿರದ ಹೊಲವೊಂದರ ಬೆಳೆಗಳ ಮಧ್ಯ ಬೆಳೆಯಲಾಗಿದ್ದ, 15 ಕೆ.ಜಿ. ಗಾಂಜಾವನ್ನು ಜಪ್ತಿ ಮಾಡಲಾಗಿದೆ. ಆರೋಪಿ ಕಾಂತು ನಾಯಕ್, ಸಾ: ಕರಬಂತನಾಳ ಗ್ರಾಮದವನು ತನ್ನ ತೋಟದಲ್ಲಿ ಅಕ್ರಮವಾಗಿ ಗಾಂಜಾವನ್ನು ಬೆಳೆದಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ವಿಜಯಪುರ ಹಾಗೂ ಡಿಎಸ್‍ಪಿ ವಿಜಯಪುರ ಉಪ-ವಿಭಾಗ ರವರ ಮಾರ್ಗದರ್ಶನದಲ್ಲಿ ಸಿಪಿಐ ಸುನೀಲ ಕಾಂಬಳೆ, ಸಿಪಿಐ ರವೀಂದ್ರ ನಾಯ್ಕೋಡಿ, ವಿಜಯಪುರ ಶಹರ ರವರ ನೇತೃತ್ವದಲ್ಲಿ ಗಾಂಧಿಚೌಕ ಪೊಲೀಸ್ ಠಾಣೆಯ ಅಧಿಕಾರಿ ಹಾಗೂ ಸಿಬ್ಬಂದಿರವರನ್ನೊಳಗೊಂಡ ತಂಡದೊಂದಿಗೆ ದಾಳಿ ನಡೆಸಿ ಗಾಂಜಾವನ್ನು ಜಪ್ತ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ಈ ಕುರಿತು ಗಾಂಧಿಚೌಕ ಪೊಲೀಸ್ ಠಾಣೆ ಗುನ್ನಾ ನಂ. 143/2020 ರಲ್ಲಿ ಪ್ರಕರಣ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಿದ್ದು ಇರುತ್ತದೆ. ಸದರಿ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕಾರ್ಯವನ್ನು ಶ್ಲಾಘೀಸಲಾಗಿದೆ.


 

LEAVE A REPLY

Please enter your comment!
Please enter your name here