“ಅಪ್ಪ ಹೇಳಿದ ಆರ್ಮೀ ಕಥೆಗಳು”

0
181
ರವೀಂದ್ರ ಎನ್ ಎಸ್ - ಲೇಖಕರು

ಯಾವುದೇ ದೇಶದ ನಾಗರಿಕ ತಾನು ಆರಾಮಾಗಿ ಇರುವಾಗ ಈ ಮೂರು ಜನಗಳನ್ನ ಮರೆತು ಬಿಡುತ್ತಾನಂತೆ ಮೊದಲನೆಯವನು ದೇವರು ಎರಡನೆಯವನು ವೈದ್ಯ ಮೂರನೆಯವನು ಸೈನಿಕ ಹೀಗೊಂದು ಲೋಕೋಕ್ತಿ ಜಗತ್ತಿನ ಎಲ್ಲ ಭಾಷೆಗಳಲ್ಲೂ ಇದೆ. ಅದು ನಿಜವೂ ಹೌದು. ಅದರಲ್ಲೂ ಕೊನೆಯ ವ್ಯಕ್ತಿ ಸೈನಿಕ ಇದ್ದಾನಲ್ಲ ಆತ ಮಾತ್ರ ನಮಗೆ ನೆನಪಾಗೋದು ಯುದ್ಧ ದಂಗೆಗಳು ಉಂಟಾದಾಗ ಮಾತ್ರ ಅಂಥ ಟೈಮ್ ಗಳಲ್ಲಿ ಮಾತ್ರ ಸೈನಿಕರನ್ನ ಹೀರೋ ಮಾಡಿ FB ಗಳಲ್ಲಿ ಒಂದಿಷ್ಟು ಪೋಷ್ಟ ಹಾಕಿ. ವಾಟ್ಸಪ್ ಸ್ಟೇಟಸ್ ಹಾಕಿ ದೇಶಪ್ರೇಮ ಹೊರಗೆ ಹಾಕ್ತಿವಿ. ಯುದ್ದ, ದಂಗೆಗಳೆಲ್ಲ ಮುಗಿದ ಮೇಲೆ ಯಥಾ ಪ್ರಕಾರ ನಮ್ಮ ನಿತ್ಯ ಜೀವನದ ಜಂಜಾಟ ಗಳಲ್ಲಿ ಮುಳುಗಿ ಬಿಡುತ್ತೆವೆ, ಅಲ್ಲಿಗೆ ಸೈನಿಕ ನಮ್ಮ ದೇಶ ಭಕ್ತಿ ಎರಡೂ ವಿಷಗಳಿಗೆ ಮತ್ತೊಂದು ದಂಗೆ ಯುದ್ಧ ಆರಂಭವಾಗುವವರೆಗೆ ಪೂರ್ಣ ವಿರಾಮ.

ಇವು ನಮ್ಮ/ ನಿಮ್ಮಂಥ ಸಾಮನ್ಯ ಜನಗಳ ದೇಶ ಭಕ್ತಿ. ಆದ್ರೆ ಕೆಲವು ಜನ ನಮ್ಮೆಲ್ಲರಿಗಿಂತ ಭಿನ್ನವಾಗಿ ಹುಟ್ತಾರೆ ಹಾಗೆ ಹುಟ್ಟುವಾಗಲೇ ದೇಶಪ್ರೇಮ ಎನ್ನುವುದನ್ನ ತಮ್ಮ ರಕ್ತದಲ್ಲೆ ಪಡ್ಕೊಂಡು ಹುಟ್ಟಿರ್ತಾರೆ
ರೈಫಲ್ ಮ್ಯಾನ್ ಜಸ್ವಂತ್ ಸಿಂಗ್ ರಾವತ್ ಅಂತಹ ಮಹಾನ್ ದೇಶ ಪ್ರೇಮಿ. ಉತ್ತರಖಂಡ ರಾಜ್ಯದ ಚಿಕ್ಕ ಹಳ್ಳಿಯೊಂದರಲ್ಲಿ ಆಗಸ್ಟ್ 17 – 1947 ರಲ್ಲಿ ಜನಿಸಿದ ಜಸ್ವಂತ್ ಸಿಂಗ್ ತನ್ನ 17ನೇ ವಯಸ್ಸಿಗೆ ಭಾರತೀಯ ಸೇನೆಗೆ ಸೇರುವ ಪ್ರಯತ್ನ ಮಾಡುತ್ತಾನೆ ಆದರೆ ವಯಸ್ಸು ಕಡಿಮೆ ಇದ್ದ ಕಾರಣ ಅಧಿಕಾರಿಗಳು ಆತನನ್ನು ಭರ್ತಿ ಮಾಡಿಕೊಳ್ಳದೆ ಮುಂದಿನ ವರ್ಷ ಪ್ರಯತ್ನ ಮಾಡುವಂತೆ ಹೇಳಿ ಕಳಿಸುತ್ತಾರೆ ಆದರೆ ಛಲಬಿಡದ ಜಸ್ವಂತ್ ಸಿಂಗ್ ಮಾರನೆಯ ವರ್ಷ ಅಂದರೆ ತನ್ನ ಹದಿನೆಂಟನೇ ವಯಸ್ಸಿಗೆ As a ರೈಫಲ್ ಮ್ಯಾನ್ ಎಂದು ಭಾರತೀಯ ಸೇನೆಗೆ ಆಯ್ಕೆಯಾಗುತ್ತಾನೆ. ಅಂದು ಸೇನೆಗೆ ಭರ್ತಿಯಾದ ಜಸ್ವಂತ್ ಸಿಂಗ್ ಇಂದಿಗೂ ರಿಟೈರ್ ಆಗಿಲ್ಲ ಇದು ಆಶ್ಚರ್ಯವಾದರೂ ಸತ್ಯ. ನಾಲ್ಕನೇ ಗಡವಾಲ್ ರಾಯಫಲ್ಸ್ನಲ್ಲಿ ರೈಫಲ್ ಮ್ಯಾನ್ ಆಗಿ ಆಯ್ಕೆಯಾದ ಜಸ್ವಂತ್ ಸಿಂಗ್ 19 ಆಗಸ್ಟ್ 1960 ತನ್ನ ತರಬೇತಿಯನ್ನು ಪೂರ್ಣ ಪೂರ್ಣಗೊಳಿಸುತ್ತಾನೆ ಇಲ್ಲಿಂದ ಜಸ್ವಂತ್ ಸಿಂಗ್ ಪರಾಕ್ರಮದ ಪ್ರಯಾಣ ಆರಂಭವಾಗುತ್ತದೆ. ಆರಂಭದಲ್ಲಿ ನಾಗಾಲ್ಯಾಂಡ್ ನಲ್ಲಿ ಸ್ವಲ್ಪ ದಿವಸ ಕರ್ತವ್ಯ ನಿರ್ವಹಿಸಿದ ಜಸ್ವಂತ್ ಸಿಂಗ್ ಅಲ್ಲಿಂದ ಅರುಣಾಚಲಪ್ರದೇಶದ ನೌರನಂಗ್ ಗಡಿಗೆ ಕಳುಹಿಸಲಾಗುತ್ತದೆ.

ಇಲ್ಲಿ ದೇಶ ಮರೆಯಲಾಗದ ಎರಡು ಘಟನೆಗಳು ಸಂಭವಿಸುತ್ತದೆ ಒಂದು ಚೀನಾ ಸೈನ್ಯದ ಎದುರು ಭಾರತದ ಸೈನ್ಯದ ಸೋಲು ಎರಡನೆಯದು ಜಸ್ವಂತ್ ಸಿಂಗ್ ಎನ್ನುವ Dare Davil ಎದುರು ಚೀನಾ ಸೈನ್ಯದ ಹೀನಾಯ ಸೋಲು. ಅರುಣಾಚಲದ ಬಾರ್ಡರ್ ಗೆ ಜಸ್ವಂತ್ ಸಿಂಗ್ ಪೋಸ್ಟಿಂಗ್ ಆಗುತ್ತಲೇ ಚೀನಾದ ಸೈನ್ಯ ಧಾಳಿಗೆ ಮುಂದಾಗುತ್ತದೆ. ಭಾರತ ಸರ್ಕಾರ ಸೇನೆಗೆ ಪೋಸ್ಟ್ಗಳನ್ನು ಬಿಟ್ಟು ವಾಪಸ್ಸು ಬರುವಂತೆ ಆದೇಶ ನೀಡುತ್ತದೆ ಆದರೆ ಜಸ್ವಂತ್ ಸಿಂಗ್ ಮತ್ತು ಆತನ ಜೊತೆಗಿದ್ದವರೂ ಸೈನಿಕರಾದ ತ್ರಿಲೋಕ್ ಸಿಂಗ್ ನೇಗಿ ಮತ್ತು ಗೋಪಾಲ್ ಸಿಂಗ್ ಎಂಥದೇ ಪರಿಸ್ಥಿತಿಯಲ್ಲಿ ಪೋಸ್ಟ್ ಬಿಟ್ಟು ವಾಪಸ್ ಹೋಗಕೂಡದು ಇಲ್ಲೇ ಇದ್ದು ಚೀನಾ ಸೈನ್ಯವನ್ನು ಎದುರಿಸುವ ಸಂಕಲ್ಪ ಮಾಡುತ್ತಾರೆ.

ಅವರು ಅಂತಹ ಒಂದು ಭಯಂಕರ ದಿಟ್ಟ ನಿರ್ಧಾರವನ್ನು ಕೈಗೊಂಡ ಕೆಲವೇ ಗಂಟೆಗಳಲ್ಲಿ ಚೀನಾ ಸೈನ್ಯ ಆಕ್ರಮಣಕ್ಕೆ ಮುಂದಾಗಿ ಗುಂಡಿನ ದಾಳಿಯನ್ನು ಆರಂಭಿಸುತ್ತದೆ ಜಸ್ವಂತ್ ಸಿಂಗ್ ಮತ್ತು ಆತನ ಜೊತೆ ಇಬ್ಬರು ಜೊತೆಗಾರರಾದ ಲ್ಯಾನ್ಸ್ ನಾಯಕ್ ತ್ರಿಲೋಕ್ ಸಿಂಗ್ ಜವಾನ್ ಗೋಪಾಲ್ ಸಿಂಗ್ ಸುಮಾರು ಹೊತ್ತು ಚೀನಿ ಸೈನ್ಯಕ್ಕೆ ಫೈರಿಂಗ್ ಮೂಲಕ ತಕ್ಕ ಉತ್ತರ ಕೊಡುತ್ತಾರೆ.

ಚೀನಿ ಸೈನ್ಯದ ಮೇಲೆ ಆಕ್ರಮಣಕ್ಕೆ ಮುಂದಾದ ಮೂವರು ಭಾರತಿಯ ಯೋಧರು ಚೀನಿಯರ ಬಂಕರ್ ಗೆ ನುಗ್ಗಿ ಚೀನಿ ಸೈನಿಕರ ಕೈಯಲ್ಲಿದ್ದ MMG ಶಸ್ತ್ರಾಸ್ತ್ರಗಳನ್ನು ಕಿತ್ತುಕೊಂಡು ಅವರ ಮೇಲೆ ದಾಳಿಗೆ ಮುಂದಾಗುತ್ತಾರೆ ಈ ಮಧ್ಯೆ ಜಸ್ವಂತ್ ಜೊತೆಗಿದ್ದ ಇಬ್ಬರು ಜವಾನರು ಮರಣ ಹೊಂದುತ್ತಾರೆ. ನಂತರ ಜಸ್ವಂತ್ ಸಿಂಗ್ ಒಬ್ಬನೇ ಏಕಾಂಗಿಯಾಗಿ ಚೀನಾ ಸೈನ್ಯದ ಮೇಲೆ ಫೈರಿಂಗ್ ಅನ್ನು ಮುಂದುವರಿಸುತ್ತಾನೆ ಸಹಾಯದ ಅಗತ್ಯ ತುಂಬಾ ಇದ್ದರೂ ಒಬ್ಬ ವ್ಯಕ್ತಿ ಕೂಡ ಸಹಾಯಕ್ಕೆ ಭಾವಿಸುವಂಥ ಪರಿಸ್ಥಿತಿ ಅಲ್ಲಿರಲಿಲ್ಲ ಈ ಸಂದರ್ಭದಲ್ಲಿ ಸ್ಥಳೀಯ ಬುಡಕಟ್ಟು ಪಂಗಡದ ಇಬ್ಬರು ಶೈಲ ಮತ್ತು ನೂರ ಎನ್ನುವ ಹುಡುಗಿಯರು ಜಸ್ವಂತ್ ಸಿಂಗ್ ರಾವತ್ ನ ಸಹಾಯಕ್ಕೆ ಧಾವಿಸುತ್ತಾರೆ ಕೈ ಚೀಲಗಳಲ್ಲಿ ಮದ್ದುಗುಂಡುಗಳನ್ನು ತುಂಬಿಕೊಂಡು ಜಸ್ವಂತ್ ಸಿಂಗ್ ಕೊಡುವ ಸಾಹಸ ಮಾಡುತ್ತಾರೆ.

ಜಸ್ವಂತ್ ಸಿಂಗ್ ಒಬ್ಬನೇ ಬೇರೆ ಬೇರೆ ಬಂಕರುಗಳಿಂದ ಚೀನೀ ಸೈನ್ಯದ ಮೇಲೆ ನಿರಂತರ ಫೈರಿಂಗ್ ಮಾಡುತ್ತಿದ್ದ ಜಸ್ವಂತ್ ಸಿಂಗ್ ಒಂದು ಬಂಕರ್ ನಿಂದ ಗುಂಡಿನ ದಾಳಿ ಆರಂಭಿಸಿದರೆ ಅಲ್ಲಿನ ಮದ್ದುಗುಂಡುಗಳು ಖಾಲಿಯಾಗುವವರೆಗೆ ಫೈರಿಂಗ್ ಮಾಡುತ್ತಿದ್ದ ನಂತರ ಇನ್ನೊಂದು ಬಂದರಿಗೆ ಓಡಿಹೋಗಿ ಅಲ್ಲಿಂದ ಫೈರಿಂಗ್ ಮಾಡುತ್ತಿದ್ದ ಹೀಗೆ ನಾಲ್ಕು ಐದು ಕಡೆಗಳಿಂದ ಏಕಾಂಗಿಯಾಗಿ ಫೈರಿಂಗ್ ಮಾಡುತ್ತಿದ್ದ ಜಸ್ವಂತ್ ಸಿಂಗ್ ಗೆ ಮದ್ದುಗುಂಡುಗಳ ಚೀಲ ಹಿಡುಕೊಂಡು ಬೆನ್ನಿಗೆ ನಿಂತಿದ್ದು ನೂರಾ ಸೈಲಾ ಸಹೋದರಿಯರು.

ಹೀಗೆ ಜಸ್ವಂತ್ ಸಿಂಗ್ ದಾಳಿ ಮಾಡಿದ್ದು ಎಷ್ಟು ಗಂಟೆಗೆ ಗೊತ್ತಾ ಭರ್ತಿ 72 ಗಂಟೆ ಅಂದರೆ ಸುಮಾರು ಮೂರು ದಿವಸ ಊಟ ನೀರು ನಿದ್ದೆಯಿಲ್ಲದೆ ನಿರಂತರ ಫೈರಿಂಗ್ ಮಾಡುತ್ತಿದ್ದರೆ ಆ ಇಬ್ಬರು ಹುಡುಗಿಯರು ಮದ್ದುಗುಂಡುಗಳು ಕಮ್ಮಿಯಾಗದಂತೆ ನೋಡಿಕೊಳ್ಳುತ್ತಿದ್ದರು ಹೀಗೆ ನಿರಂತರ ಫೈರಿಂಗ್ ಅಲ್ಲಿ ಜಸ್ವಂತ್ ಸಿಂಗ್ ಕೈಯಲ್ಲಿ ಯಮಲೋಕ ಸೇರಿದ ಚೀನಾ ಸೈನಿಕರ ಸಂಖ್ಯೆ ಬರೋಬ್ಬರಿ ಮೂರು ನೂರು ಅಂದರೆ ಆತನ ಪರಾಕ್ರಮದ ಕಲ್ಪನೆ ಮಾಡಿಕೊಳ್ಳಿ ಹೀಗೆ ಭಾರತದ ಸೈನ್ಯದ ಕಡೆಯಿಂದ ತೀವ್ರ ಪ್ರತಿರೋಧ ಕಂಡ ಚೀನಾ ಕಂಗಾಲಾಗಿ ಹೋಗುತ್ತದೆ ಸತತ ಮೂರು ದಿನಗಳ ಕಾಲ ಅರುಣಾಚಲದ ನೆಲದಲ್ಲಿ ಕಾಲಿಡಲು ಅವಕಾಶ ಸಿಗದಂತಹ ಪ್ರತಿರೋಧ ಅದು.

ತಮ್ಮ ನಾಲ್ಕು ಡಿವಿಜನ್ ಸೈನ್ಯವನ್ನು ಒಂದಿಂಚು ಮುಂದಡಿ ಇಡುವುದಕ್ಕೆ ಅವಕಾಶ ನೀಡುತ್ತಿಲ್ಲ ಎಂದರೆ ಭಾರತದ ಎಷ್ಟು ಡಿವಿಜನ / ಬೆಟಾಲಿಯನ್ ಸೈನ್ಯ ಬೆಟ್ಟದ ಮೇಲೆ ಇರಬೇಕು ಎನ್ನುವ ಸೀಕ್ರೆಟ್ ತಿಳಿದುಕೊಳ್ಳಲು ಚೀನಿ ಸೈನಿಕರು ಬೇರೆ ಬೇರೆ ತಂತ್ರಗಳನ್ನು ಹೆಣೆಯುತ್ತಾರೆ ಸ್ಥಳೀಯ ಬುಡಕಟ್ಟು ಜನಗಳನ್ನು ವಿಚಾರಣೆ ಮಾಡುತ್ತಾ ಶೈಲ ಮತ್ತು ನೂರ ತಂದೆಯನ್ನು ಹಿಡಿದು ಟಾರ್ಚರ್ ಮಾಡುತ್ತಾರೆ ಆಗ ಶೈಲ ಮತ್ತು ನೂರಾ ತಂದೆ ಹೇಳಿದ ವಿಷಯ ಕೇಳಿ ಚೀನಿ ಸೈನಿಕರು ದಿಗ್ಭ್ರಾಂತರಾಗಿ ಹೋಗುತ್ತಾರೆ ಬೆಟ್ಟದ ಮೇಲೆ ಇರುವುದು ಕೇವಲ ಮೂರು ಜನ ಅವರಲ್ಲಿ ಕೇವಲ ಒಬ್ಬ ಸೈನಿಕ ಇಬ್ಬರು ಹುಡುಗಿಯರು ಇಷ್ಟು ವಿಷಯ ಗೊತ್ತಾಗುತ್ತಿದ್ದಂತೆ ಚಿನಿ ಸೈನ್ಯ ಅವಮಾನದಿಂದ ಕುದ್ದು ಹೋಗುತ್ತದೆ ತಮ್ಮ ನಾಲ್ಕು ಡಿವಿಜನ್ ಸೈನ್ಯವನ್ನು ಮಂಡಿಯೂರುವಂತೆ ಮಾಡಿದ ಆ ಏಕಾಂಗಿ ಸೈನಿಕನನ್ನು ಹೇಗಾದರೂ ಕೊಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದ ಚಿನಿ ಸೇನೆ ಬೆಟ್ಟವನ್ನು ಬಳಸಿ ಹಿಂದಿನಿಂದ ನುಸುಳಿ ಮೇಲೆ ಬಂದು ಜಸ್ವಂತ್ ಸಿಂಗ್ ನತ್ತ ಧಾವಿಸಿ ಮೊದಲು ನೂರಾ ಮತ್ತು ಸೈಲಾ ರನ್ನು ಕೊಂದು ಹಾಕುತ್ತದೆ.

ಮೊದಲೆ ಗುಂಡೆಟು ತಿಂದ ಗಾಯಾಳು ಆಗಿದ್ದ ಜವಾನ್ ಜಸ್ವಂತ್ ಚೀನಿ ಸೈನಿಕರ ಕೈಗೆ ಸಿಕ್ಕು ಚಿತ್ರಹಿಂಸೆ ಅನುಭವಿಸುವುದಕ್ಕಿಂತ ಸಾಯೋದು ಒಳ್ಳೆಯದು ಅನ್ಕೊಂಡು‌ ತನಗೆ ತಾನೇ Shoot ಮಾಡ್ಕೊಂಡು ಬಿಡ್ತಾನೆ. ಜಸ್ವಂತ್ ಮೇಲೇ ಚೀನಿಯರಿಗೆ ಅದೆಷ್ಟು ಆಕ್ರೋಶವಿತ್ತು ಅಂದರೆ ಜಸ್ವಂತ್ ಸಿಂಗ್ ನ ಶವವನ್ನು ಮರಕ್ಕೆ ನೇತು ಹಾಕುತ್ತಾರೆ ನಂತರ ದೇಹದಿಂದ ರುಂಡವನ್ನು ಕತ್ತರಿಸಿ ಚೀನಾಗೆ ತೆಗೆದುಕೊಂಡು ಹೋಗುತ್ತಾರೆ ಚೀನಾ ಸೈನ್ಯದಲ್ಲಿ ಜಸ್ವಂತ್ ಸಿಂಗ್ ನ ಶೌರ್ಯದ ಚರ್ಚೆಗಳು ನಡೆದು ಅದು ಹಿರಿಯ ಅಧಿಕಾರಿಗಳ ಕಿವಿಯ ವರೆಗೂ ಹೋಗುತ್ತದೆ ಜಸ್ವಂತ್ ನ ಶೌರ್ಯ ಅವರಿಗೂ ಗೊತ್ತಾಗುತ್ತದೆ ಆಗ ಚೀನಿ ಸೈನ್ಯದ ಹಿರಿಯ ಅಧಿಕಾರಿಗಳು ಜಸ್ವಂತ್ ಸಿಂಗ್ ನ ರುಂಡವನ್ನು ಅತ್ಯಂತ ಗೌರವ ಪೂರ್ವಕವಾಗಿ ಭಾರತೀಯ ಸೇನೆಗೆ ಹಸ್ತಾಂತರಿಸುತ್ತದೆ. ಮತ್ತು ಜಸ್ವಂತ್ ಸಿಂಗ್ ಅವರ ಕಂಚಿನ ಪ್ರತಿಮೆಯೊಂದನ್ನು ಭಾರತೀಯ ಸೇನೆಗೆ ನೀಡಿ ಜಸ್ವಂತ್ ಸಿಂಗ್ ಶೌರ್ಯಕ್ಕೆ ತಮ್ಮ ಗೌರವ ವಂದನೆಗಳನ್ನು ಸಲ್ಲಿಸುತ್ತದೆ. ಹೀಗೆ ಶತ್ರು ದೇಶದ ಸೈನಿಕರಿಂದಲೇ ಗೌರವ ಪಡೆದುಕೊಂಡ ಭಾರತದ ಮಹಾನ್ ಯೋಧ ಜಸ್ವಂತ್ ಸಿಂಗ್.

ಭಾರತ ಸರ್ಕಾರ ಮರಣೋತ್ತರ ಸೇನೆಯ ಎರಡನೇ ಅತ್ಯುನ್ನತ ಗೌರವವಾದ ಮಹಾವೀರ ಚಕ್ರ ಪದಕ ನೀಡಿ ತನ್ನ ಗೌರವವನ್ನು ಸಲ್ಲಿಸುತ್ತದೆ ಮತ್ತು ಆತನ ಜೊತೆ ಹುತಾತ್ಮರಾದ ನೂರಾ ಮತ್ತು ಸೈಲಾ ಅವರುಗಳ ಸ್ಮರಣಾರ್ಥ ಅವರು ಯುದ್ಧ ಮಾಡಿದ ಅವಳಿ ಬೆಟ್ಟಗಳಿಗೆ ಶೈಲಾ‌ ಪಹಾಡ್ ನೂರಾ ಪಹಾಡ್ ಎಂದು ಹೆಸರಿಟ್ಟು ಗೌರವಿಸುತ್ತದೆ. ಮತ್ತು ಅರುಣಾಚಲ ಪ್ರದೇಶದ ಎರಡು ರಸ್ತೆಗಳಿಗೆ ನೂರ ಸೈಲಾ ಹೆಸರಿಡುತ್ತದೆ. ಇಲ್ಲಿಗೆ ಜಸ್ವಂತ್ ಸಿಂಗ್ ಕಥೆ ಮುಗಿಯಲ್ಲ ಜಸ್ವಂತ್ ಸಿಂಗ್ ಪ್ರಾಣ ತೆತ್ತ ಬಂಕರ್ ಬಳಿ ಆತನ ಸಮಾಧಿಯನ್ನು ಸೇನೆ ನಿರ್ಮಾಣ ಮಾಡುತ್ತದೆ ಅಲ್ಲಿಗೆ ಬರುವ ಸೈನಿಕನಿಗೂ ಜಸ್ವಂತ್ ಸಿಂಗ್ ನ ಸಾಹಸದ ಕಥೆಯನ್ನು ಹೇಳುವ ಸಂಪ್ರದಾಯ ಶುರುವಾಗುತ್ತದೆ ಆಗ ಅಲ್ಲಿ ಕರ್ತವ್ಯ ನಿರ್ವಹಿಸುವ ಸೈನಿಕರಿಗೆ ಕೆಲವು ವಿಚಿತ್ರ ಅನುಭವಗಳು ಆಗಲಾರಂಭಿಸುತ್ತವೆ ಯಾವುದೇ ಒಬ್ಬ ಸೈನಿಕ ಕರ್ತವ್ಯದ ಮೇಲಿದ್ದಾಗ ನಿದ್ದೆ ಹೋಗುವುದು ಕರ್ತವ್ಯಲೋಪ ಎಸಗುವುದು ಮಾಡಿದಾಗ ಅವರ ಮುಖಕ್ಕೆ ರಪ್ಪನೆ ಯಾರೋ ಬಾರಿಸಿದ ಬೆನ್ನ ಮೇಲೆ ಬೂಟು ಕಾಲಿನಿಂದ ಒದ್ದಂತಹ ಅನುಭವಗಳು ಆಗಲು ಆರಂಭಿಸುತ್ತವೆ.

ಸೈನಿಕರಿಗೆ ಮಾತ್ರ ಅಲ್ಲ ಅಧಿಕಾರಿಗಳಿಗೂ ಕೂಡ ಕೆಲವು ವಿಚಿತ್ರ ಅನುಭವಗಳಾಗಲು ಆರಂಭಿಸುತ್ತವೆ ಕನಸಿನಲ್ಲಿ ಯಾರೋ ಒಬ್ಬ ವ್ಯಕ್ತಿ ಬಂದು ಗಡಿಯಲ್ಲಿ ಚೀನಿ ಸೈನಿಕರ ಚಟುವಟಿಕೆಗಳ ಮಾಹಿತಿಯನ್ನು ನಿಖರವಾಗಿ ನೀಡುವುದು ಯಾವ ಜಾಗಗಳಲ್ಲಿ ಸೈನಿಕರನ್ನು ಹೆಚ್ಚಿಗೆ ನೀಯೋಜಿಸಬೇಕು ಎನ್ನುವ ಸಲಹೆಗಳನ್ನು ನೀಡುವುದು ಇವೇ ಮುಂತಾದ ನಂಬಲಸಾಧ್ಯವಾದ ಘಟನೆಗಳು ನಡೆಯಲಾರಂಭಿಸುತ್ತವೆ. ನಂತರ ಅಲ್ಲಿನ ಸೈನಿಕರು ಮತ್ತು ಅಧಿಕಾರಿಗಳು ಅದು ಜಸ್ವಂತ್ ಸಿಂಗ್ ನ ಆತ್ಮವೇ ಎಂದು ತೀರ್ಮಾನಿಸಿ ಆತನ ಸಮಾಧಿ ಮೇಲೆ ದೇವಸ್ಥಾನವನ್ನು ಕಟ್ಟುವ ನಿರ್ಣಯ ಕೈಗೊಳ್ಳುತ್ತಾರೆ.

ಮತ್ತು ಪ್ರತಿ ನಿತ್ಯ ಜಸ್ವಂತ್ ಸಿಂಗ್ ನ ಫೋಟೋಗೆ ಪೂಜೆ ಮಾಡಲು ಒಬ್ಬ ಸೈನಿಕನನ್ನು ನಿಯೋಜನೆ ಮಾಡುತ್ತಾರೆ. ಆತ ಪ್ರತಿ ನಿತ್ಯ ಬೆಳಗಿನ ಏಳು ಗಂಟೆಗೆ iron ಮಾಡಿದ uniform. Polished shoes ಇಟ್ಟು ಗೌರವ ಸಲ್ಲಿಸಿ ಬರುವ ಪರಿಪಾಠ ಆರಂಭವಾಗುತ್ತದೆ ನಂತರ ಇನ್ನು ವಿಚಿತ್ರ ವಿಸ್ಮಯ ಎನ್ನುವ ಘಟನೆಗಳು ನಡೆಯಲಾರಂಭಿಸುತ್ತವೆ ಇವತ್ತು ಬೆಳಿಗ್ಗೆ iron ಮಾಡಿ ಇಟ್ಟ uniform ಮಾರನೆಯ ದಿನ ಬೆಳಿಗ್ಗೆ ನೋಡಿದಾಗ ಯಾರೋ ಅದನ್ನು ಬಳಸಿರುವಂತೆ ಕಾಲರ್ ಎಲ್ಲ ಕೊಳೆಯಾಗಿರುವುದು polished ಬೂಟುಗಳನ್ನು ಯಾರೋ ಹಾಕಿಕೊಂಡು ಸುತ್ತಾಡಿರುವಂತೆ ಬೂಟ್ ಮೇಲೆಲ್ಲ ಧೂಳು ಮಣ್ಣು ಮೆತ್ಕೊಂಡಿದ್ದನ್ನ ಕಂಡು ಸೈನಿಕರು ಮೇಲಾಧಿಕಾರಿಗಳಿಗೆ ವಿಷಯ ತಿಳಿಸಿದಾಗ ಖುದ್ದು Senior Army Official ಗಳು ಪರಿಶಿಲನೆ ಮಾಡ್ತಾರೆ ಆಗ ಅವರಿಗೂ ಈ ವಿಷಯ ಗೊತ್ತಾಗಿ ಆಶ್ಚರ್ಯ ಪಡುತ್ತಾರೆ. ಅಲ್ಲಿಗೆ ಅವರೆಲ್ಲರಿಗೂ ಒಂದು ವಿಷಯ ಕನ್ಫರ್ಮ ಆಗುತ್ತೆ ಜಸ್ವಂತ್ ಸಿಂಗ್ ಇವತ್ತಿಗೂ ಡ್ಯೂಟಿ ಮೇಲೆ ಇದ್ದಾನೆ.

ಕೊನೆಗೆ ಈ ವಿಷಯ ಆರ್ಮಿ ತುಂಬ ಹರಡಿ ಜಸ್ವಂತ್ ಸಿಂಗ್ ರ ಹೆಸರಿನ ಮುಂದೆ ಬರೆಯಲಾದ “ದಿವಂಗತ” ಪದವನ್ನು ತೆಗೆದು ಹಾಕಲಾಗುತ್ತದೆ ಮತ್ತು ಆತ ಕರ್ತವ್ಯದ ಮೇಲಿರುವ ಒಬ್ಬ ಸೈನಿಕ ಎಂದು ಕನ್ಸಿಡರ್ ಮಾಡಿ ಆತನಿಗೆ ನೀಡುವ ರೆಗ್ಯುಲರ್ ಸಂಬಳ ಮತ್ತು ಭತ್ತೆಯನ್ನು ನಿಯಮಿತವಾಗಿ ಜಸ್ವಂತ್ ಸಿಂಗ್ ಮನೆಗೆ ತಲುಪಿಸುತ್ತಿದೆ (ಇವತ್ತಿಗೂ) ಅಲ್ಲದೆ ಒಬ್ಬ ಜೀವಂತ ಸೈನಿಕನಿಗೆ ನೀಡುವಂತೆ ಜಸ್ವಂತ್ ಸಿಂಗ್ ಗೆ Promotion ಸಹ ನೀಡಲಾಗಿದೆ ಒಬ್ಬ ಸಾಧಾರಣ ಸಿಪಾಯಿ ಆಗಿ ಸೇನೆ ಸೇರಿದ ಜಸ್ವಂತ್ ಸಿಂಗ್ ಮೇಜರ್ ವರೆಗೆ ಬಡ್ತಿ ನೀಡಲಾಗಿದೆ.

ಅಲ್ಲದೆ ಎಲ್ಲ ಸೈನಿಕರಿಗೂ ರಜೆ ನೀಡುವ ಹಾಗೆ ಜಸ್ವಂತ್ ಸಿಂಗ್ ಗೂ ರಜೆ ನೀಡಲಾಗುತ್ತದೆ. ರಜೆ ಮುಂಜೂರಾದ ತಕ್ಷಣ ಜಸ್ವಂತ್ ಸಿಂಗ್ ನ ಫೋಟೋ ಜೊತೆ ಆತನ ಬ್ಯಾಗ್ ರೆಡಿ ಮಾಡಿ ಮಿಲಿಟರಿ ಜೀಪ್ ನಲ್ಲಿ ಗೌರವ ಪೂರ್ವಕವಾಗಿ ಆತನ ಮನೆಗೆ ಕರೆತಂದು ಬಿಡಲಾಗುತ್ತದೆ ಮತ್ತು ರಜೆ ಮುಕ್ತಾಯಗೊಂಡ ನಂತರ ಸೇನೆಯ ಜವಾನರು ಬಂದು ಗೌರವ ಪೂರ್ವಕವಾಗಿ ಮತ್ತೆ ಅಧಿಕಾರಿಗಳನ್ನು ಕರೆದೊಯ್ಯುವ ಹಾಗೆ ಕರೆದೊಯ್ಯುತ್ತಾರೆ. ಜವಾನ ಆಗಿ ಸೇನೆ ಸೇರಿದ ಜಸ್ವಂತ್ ಸಿಂಗ್ ಮೇಜರ್ ಆಗಿ ಸೇವಾವಧಿ ಪೂರ್ಣಗೊಂಡು ನಿವೃತ್ತಿ ಆಗಿದ್ದಾನೆ.

ರೈಫಲ್ ಮ್ಯಾನ್ ಆಗಿದ್ದ ಜಸ್ವಂತ್ ಸಿಂಗ್ ಈಗ “ಬಾಬಾ ಜಸ್ವಂತ್ ಸಿಂಗ್ ” ” ಬಂಕರ್ ವಾಲೇ ಬಾಬಾ ” ಎಂಬ ಹೆಸರಿನಿಂದ ಆರ್ಮಿಯವರಿಗೆ ಮಾತ್ರ ಅಲ್ಲ ಅರುಣಾಚಲ ಪ್ರದೇಶ ಮತ್ತು ಉತ್ತರ ಖಂಡ ರಾಜ್ಯಗಳಲ್ಲಿನ ನಾಗರಿಕರಿಗೂ ಚಿರ ಪರಿಚಿತನಾಗಿದ್ದಾನೆ. ಬಾಬಾ ಜಸ್ವಂತ್ ದೇವಸ್ಥಾನಕ್ಕೆ ಸಿವಿಲಿಯ್ ಕೂಡ ತಮ್ಮ ಕಷ್ಟ ಗಳನ್ನು ಪರಿಹರಿಸುವಂತೆ ಹರಕೆಗಳನ್ನು ಕಟ್ಕೊಳ್ಳುತ್ತಾರೆ. ತನ್ನ ಶೌರ್ಯ ಪರಾಕ್ರಮಗಳಿಂದ ಒಬ್ಬ ಸಾಮಾನ್ಯ ಮನುಷ್ಯ ದೇವರಾಗಿರುವ ಇಂಥ ಘಟನೆಗಳು ಜಗತ್ತಿನ ಯಾವ Military History ಗಳಲ್ಲೂ ಕಾಣಲು ಸಾಧ್ಯ ಇಲ್ಲ.

ಇವತ್ತು ಜಸ್ವಂತ್ ಸಿಂಗ್ ದೇವಸ್ಥಾನದಲ್ಲಿ ಐದು ಜನ ಸೈನಿಕರನ್ನು ಸೇವೆಗೆ ನಿಯೋಜಿಸಲಾಗುತ್ತದೆ ಬೆಳಗಿನ ಜಾವ 4:30 ಕ್ಕೆ ಬೆಡ್ ಟೀ. 7:30 Breakfast ಮದ್ಯಾಹ್ನ ಲಂಚ್ ರಾತ್ರಿ 7:30 ಕ್ಕೆ ಡಿನ್ನರ್ ನೀಡಲಾಗುತ್ತದೆ. ಬೆಡ್ ರೂಮ್ ಅನ್ನು ನಿತ್ಯ ರೆಡಿ ಮಾಡಲಾಗುತ್ತದೆ. ಜೊತೆಗೆ ಪ್ರತಿನಿತ್ಯ iron ಮಾಡಿದ ಬಟ್ಟೆ ಶೂ ಮತ್ತು Fully Loaded AK 47 ಇಡಲಾಗುತ್ತದೆ ಇವತ್ತಿಗೂ ಬಾಬಾ ಜಸ್ವಂತ್ ಸಿಂಗ್ ಡ್ಯೂಟಿ ಮಾಡ್ತನೆ ಇದ್ದಾನೆ ಯಾಕಂದ್ರೆ ಸಾವು ಕರೆದೊಯ್ದಿದ್ದು ಆತನ ದೇಹವನ್ನು ಮಾತ್ರ ಆದರೆ ಆತನ ಆತ್ಮದಲ್ಲಿದ್ದ ದೇಶಭಕ್ತಿ ಇವತ್ತಿಗೂ ದೇಶಸೇವೆ ಮಾಡುತ್ತಲೆ ಇದೆ ಮುಂದೆಯೂ ಮಾಡುತ್ತಲೇ ಇರುತ್ತದೆ.ಇಂತಹ ಅದೆಷ್ಟೋ ಮಹಾ ವೀರರು ಭಾರತ ದೇಶಕ್ಕಾಗಿ ತಮ್ಮ ಹನಿ ಹನಿ ರಕ್ತ ಬಸಿದಿದ್ದಾರೆ ಅಂತಹ ಮಹಾನ್ ಪರಾಕ್ರಮಿಗಳ ಕಥೆಗಳನ್ನು ಮುಂದಿನ ಪೀಳಿಗೆಗೆ ತಿಳಿಸೋ ಕಾರ್ಯ ಮಾಡುವ ಅಗತ್ಯ ಇದೆ ಇಂತಹ ಇನ್ನಷ್ಟು ಅಪ್ಪ ಹೇಳಿದ ಮಹಾನ್ ಯೋಧರ ಕಥೆಗಳನ್ನು ಹುಡುಕಿಕೊಂಡು ಬರ್ತಿನಿ‌ ಅಲ್ಲಿ ವರೆಗೆ ಜೈ ಹಿಂದ್…

ರವೀಂದ್ರ ಎನ್ ಎಸ್ – ಲೇಖಕರು


 

LEAVE A REPLY

Please enter your comment!
Please enter your name here