ಮೀಸಲಾತಿ ಸೃಷ್ಟಿ ಮತ್ತು ಸ್ಥಿತಿ

0
348
ರವೀಂದ್ರ ಎನ್ ಎಸ್ - ಲೇಖಕರು

ಮೀಸಲಾತಿ, ಆರಕ್ಷಣ್, ರಿಸರ್ವೇಶನ್…ಈ ಶಬ್ದಗಳನ್ನ ಕೇಳಿದ್ರೆ ಸಾಕು ದೇಶದ ಅದೆಷ್ಟೋ ಮನಸುಗಳಲ್ಲಿ ವಿಷ ಹೊಗೆಯಾಡುತ್ತದೆ even ಮೀಸಲಾತಿ ಪಡ್ಕೊಳೋ ಜನಾಂಗಗಳೂ ಕೂಡ, ರಿಸರ್ವೇಷನ್ ನಿಂದ ದೇಶ ಹಿಂದುಳಿಯಿತು, ದೇಶ ಹಾಳಾಯ್ತು..etc ಆರೋಪಗಳನ್ನು ನಿತ್ಯ ಒಂದು ವರ್ಗದ ಮೇಲೆ ಮಾಡುತ್ತಲೇ ಬಂದಿದ್ದಾರೆ. ಅಷ್ಟಕ್ಕೂ ಈ ರಿಸರ್ವೇಷನ್ ಬಗ್ಗೆ ಒಂದು ‘ಸಮುದಾಯ’ ಇಷ್ಟು ಅಸಹನೆ ಹೊಂದಿರುವುದು ಈಗಷ್ಟೇ ಅಲ್ಲ , ಸಂವಿಧಾನ ಜಾರಿ ಆದಾಗಿನಿಂದಲೂ ಆ ಒಂದು ಸಮುದಾಯ ಸಂವಿಧಾನದ ವಿರುದ್ದ ಮೀಸಲಾತಿ ವಿರುದ್ದ ಅದರ ಫಲಾನುಭವಿಗಳ ವಿರುದ್ದ ಪ್ರತ್ಯಕ್ಷ ಪರೋಕ್ಷವಾಗಿ ತನ್ನ ಅಸಮಧಾನವನ್ನು ಹೊರ ಹಾಕುತ್ತಲೇ ಇದೆ.

ಮೀಸಲಾತಿಯನ್ನು ಬಡವರಿಗೆ ಕೊಡಿ. ನಿರ್ಗತಿಕರಿಗೆ ಕೊಡಿ. ಎಲ್ಲ ಸಮುದಾಯದ ಬಡ ಜನಗಳಿಗೆ ಮೀಸಲಾತಿ ಕೊಡಿ…ಆ ಸಮುದಾಯದಲ್ಲಿ‌ ಬಡವರಿಲ್ಲವೆ ? ಈ ಸಮುದಾಯಗಳಲ್ಲಿ ಬಡವರಿಲ್ಲವೆ ? ಅಂಥ ಜನಗಳನ್ನ ಬಿಟ್ಟು ಅನುಕೂಲಸ್ಥ ಜನಗಳಿಗೆ ಜಾತಿ ಆಧಾರದಲ್ಲಿ ಮೀಸಲಾತಿ ಕೊಡ್ತ ಇರೋದು ಸರಿಯಲ್ಲ ಅದು ಅನ್ಯಾಯ ಹಾಗೆ ಹೀಗೆ ಇಂತಹ ಎಳೆಗಳನ್ನ ಇಟ್ಕೊಂಡು ವಿತಂಡ ವಾದ ಮಾಡೋದಕ್ಕೆ ಶುರು ಹಚ್ಕೊಂಡು ಕೊನೆಗೆ ಸಂವಿಧಾನ ಸರಿ ಇಲ್ಲ ಬದಲಾಯಿಸಬೇಕು ಅನ್ನೋ ಹಂತಕ್ಕೆ ತಂದು ಚರ್ಚೆಯನ್ನ ನಿಲ್ಲಿಸ್ತಾರೆ. ಇದು ನಾನು ಸುಮಾರು 15-18 ವರ್ಷಗಳಿಂದ ನೋಡಿಕೊಂಡು ಅವರ ಜೊತೆ ಚರ್ಚೆ ಮಾಡಿ, ಗುದ್ದಾಡಿ ಕಂಡ ಕಟು ಸತ್ಯ. ಇಂಥ ವಿತಂಡ ವಾದ ಮಾಡೋದಕ್ಕೆ ಶುರು ಹಚ್ಕೊಳೋರು ಯಾರು ಗೊತ್ತ ? ಲಿಂಗಾಯತರು, ಒಕ್ಕಲಿಗ, ಕುರುಬ, ಮಡಿವಾಳ, ಮರಾಠಾ, ಬಂಟ ಇತ್ಯಾದಿ OBC ಹುಡುಗರು. ಅವರೊಂದಿಗೆ ಎಷ್ಟು ವಾದಿಸಿದರೂ ಅಷ್ಟೇ ಫಲ ಶೂನ್ಯ ಅವರು ತಿಳ್ಕೊಂಡಿದ್ದು ನಾವು ಮೇಲ್ವರ್ಗದವರು ನಾವು General category ನಮಗೆ ಯಾವ ಅನುಕೂಲಗಳೂ ಇಲ್ಲ So ಸಂವಿಧಾನ ಸರಿ ಇಲ್ಲ..

ಅವರುಗಳ ದೃಷ್ಟಿಲಿ ಸಂವಿಧಾನ ಕೇವಲ ಒಂದಿಷ್ಟು ಜಾತಿ ಜನಾಂಗಗಳಿಗೆ ರಿಸರ್ವೇಷನ್ ಕೊಡೋದಕ್ಕೆ ಬರ್ದಿರೊ ಒಂದು ಪುಸ್ತಕ ಅಷ್ಟೇ. ಇಂಥ ಮನಸ್ಥಿತಿ ಜನಗಳ ಜೊತೆ ಏನ್ ಮಾತಾಡೋದು ? ಹೋಗ್ಲಿ ಆ ವಿತಂಡವಾದಿಗಳು ಸಂವಿಧಾನನ್ನಾದ್ರೂ ಪೂರ್ತಿ ಓದಿರುತ್ತಾರ ? ಇಲ್ಲವೇ ಇಲ್ಲ ಯಾರೋ ಕಿವಿಯಲ್ಲಿ ತುಂಬಿದ ವಿಷವನ್ನ SC ST ಜನಗಳ ಮೇಲೆ ಪ್ರಯೋಗಿಸ್ತ ಇರ್ತಾರೆ, ಮಾತೆತ್ತಿದರೆ ಸಂವಿಧಾನದ ವಿರುದ್ದ ಆಕ್ರೋಶ ಬರೀ ರಿಸರ್ವೇಷನ್ ಬಗ್ಗೆ ದ್ವೇಷ.

ಅಷ್ಟಕ್ಕೂ ಈ ಮೀಸಲಾತಿ ಅಂದ್ರೆ ಏನು ? ಸಂವಿಧಾನ ಯಾಕೆ ಅದನ್ನ ಕೊಟ್ಟಿದೆ ಅನ್ನೋದಕ್ಕೆ ಕಾರಣ ತುಂಬ ಸರಳವಾಗಿದೆ ಸರ್ಕಾರದ ಅಥವಾ ಯಾವುದೇ ಅರೆ ಸರ್ಕಾರಿ sector ಗಳಲ್ಲಿ ಎಲ್ಲ ಸಮುದಾಯಗಳಿಗೆ ಸಮನಾಗಿ ಪಾಲ್ಗೊಳ್ಳಲು ನೀಡುವ ಒಂದು ಅವಕಾಶ. ಉದಾಹರಣೆಗೆ ಶಿಕ್ಷಣ ಇಲಾಖೆ ಇಲ್ಲಿ ನೌಕರಿ ಪಡೆದುಕೊಳ್ಳಲು ಒಬ್ಬ ವ್ಯಕ್ತಿ Bed, Ded ಮಾಡಿರಲೇ ಬೇಕು ರಿಸರ್ವೇಷನ್ ಇದೆ ಅನ್ನೋ ಕಾರಣಕ್ಕೆ SSLC ಆಗಿರೋ ಒಬ್ಬ ವ್ಯಕ್ತಿಯನ್ನ ಶಿಕ್ಷಕ ಜಾಗಕ್ಕೆ ಕೂರಿಸಲ್ಲ ಇಲ್ಲಿ ಆತನಿಗೆ ಇರುವ ಒಂದು ಅವಕಾಶ ಏನಂದರೆ ಆತ sc ಆಗಿದ್ರೆ ಆತನಿಗೆ ನೀಡಿರುವ 15% ಕೋಟಾದಲ್ಲಿ ST ಆಗಿದ್ದರೆ 3% ಕೋಟಾದಲ್ಲಿ ಆಯ್ಕೆ ಆಗುತ್ತಾನೆ ಅದರರ್ಥ ಆತ General category ಜೊತೆಗೆ Fight ಮಾಡಲ್ಲ ತನ್ನದೇ ಸಮುದಾಯಗಳ ಜೊತೆ competition ಮಾಡಿ ಅವರಿಗಿಂತ ಹೆಚ್ಚಿನ ಅಂಕ ಇದ್ದಲ್ಲಿ ಆಯ್ಕೆ ಆಗಲು ಅವಕಾಶ ಪಡ್ಕೊಳ್ತಾನೆ. ಇಲ್ಲಿ ಆತ ತನ್ನ ಸಮುದಾಯಕ್ಕೆ ನೀಡಲಾದ ಕೋಟಾ ಪಡ್ಕೊಳ್ತಾನೇ ಹೊರತು ಬೇರೆಯವರ ಕೋಟ ಕಿತ್ಕೊಳಲ್ಲ. ಹಾಗೇ ಪೋಲಿಸ್ ಇಲಾಖೆಯಲ್ಲಿ ಕೆಲಸಕ್ಕೆ ಸೇರುವ SC,ST ಹುಡುಗರ ಎತ್ತರ 168cm ತೂಕ 58 kg ಇರಲೇ ಬೇಕು. ದೈಹಿಕ ಪರಿಕ್ಷೆಯಲ್ಲಿ ಲಾಂಗ್ ಜಂಪ್, ಹೈ ಜಂಪ್, ಶಾಟ್ ಫುಟ್, 800 meter, 100 meter ಓಟ ಇವುಗಳಲ್ಲಿ ಭಾಗ ವಹಿಸಲೇಬೇಕು ಅಲ್ಲಿ sc st obc gm ಅಂತ ಯಾವ ಸಡಿಲಿಕೆನೂ ಸಿಕ್ಕಲ್ಲ. SC ST ಅಂತ ಅವರನ್ನು ಸಪರೇಟ್ ಆಗಿ ಓಡಿಸಲ್ಲ ಎಲ್ಲರನ್ನು ಸೇರಿಸಿನೇ ಓಡಿಸೋದು ಅಲ್ಲಿ ಪಾಸಾದ್ರೆ ಮಾತ್ರ ಆತ ಆಯ್ಕೆಗೆ ಅರ್ಹ ಇಲ್ಲದಿದ್ದರೆ ಇಲ್ಲ . ಅಂದ್ರೆ general category ಅಭ್ಯರ್ಥಿಗಳು ಕೊಡೋ ಎಲ್ಲ test ಗಳಲ್ಲಿ sc st ಗಳು ಕೂಡ ಭಾಗವಹಿಸಲೇ ಬೇಕು ಪಾಸ್ ಆಗಲೇ ಬೇಕು, ಅಂದಾಗ ಮಾತ್ರ ಅವರನ್ನು eligible ಅಂತ ಪರಿಗಣಿಸಲಾಗುತ್ತೇ ಹೊರತು ಅವ್ರು sc st ಅಂತ ಹಾಗೇ selection ಮಾಡ್ಕೊಳಲ್ಲ..

ಹಾಗೇ Engineering ಮತ್ತು Medical Course ಗಳಿಗೆ ಸೇರಬೇಕು ಅಂದ್ರೆ PU Science ನಲ್ಲಿ ಒಳ್ಳೆ Marks ತಗಿ ಬೇಕು ಜೊತೆಗೆ CET ಯಲ್ಲಿ ಒಳ್ಳೆಯ percentage ಇರ್ಲೇಬೇಕು ಅಂದಾಗ ಮಾತ್ರ BE, MBBS ಕೋರ್ಸಗಳಿಗೆ ಆಯ್ಕೆಯಾಗೋದು SC ST ಅನ್ನೋ ಕಾರಣಕ್ಕೆ Arts ಕಾಮರ್ಸ್ ವಿದ್ಯಾರ್ಥಿಗಳನ್ನು ಆ ಕೋರ್ಸಗಳಲ್ಲಿ ಸೇರಿಸಿಕೊಳ್ಳಲ್ಲ ಅಲ್ಲವೇ ? ಅಂದರೆ ಉಳಿದ ಎಲ್ಲ ಅಭ್ಯರ್ಥಿಗಳಲ್ಲಿ ಇರಬೇಕಾದ ಅವಶ್ಯಕ ಶೈಕ್ಷಣಿಕ (ದೈಹಿಕ) ಅರ್ಹತೆಗಳು SC ST ಇವರಲ್ಲೂ ಇದ್ದಾಗ ಮಾತ್ರ ಆಯ್ಕೆ ಆಗೋಕೆ ಸಾಧ್ಯ. ಹಾಗೆ ಆಯ್ಕೆ ಆದ ಅಭ್ಯರ್ಥಿ ತಮ್ಮ ಸಮುದಾಯಗಳಿಗೆ ನೀಡಲಾದ ಭಾಗದಲ್ಲಿ (SC.ST.OBC) ಪಾಲು ಪಡ್ಕೊಳ್ತಾರೆ ಅಷ್ಟೇ ಹೊರತು ಬೇರೆಯವರ ಪಾಲು ಕಿತ್ಕೊಳಲ್ಲ.. ಹಾಗಿದ್ದೂ ರಿಸರ್ವೇಷನ್ ವಿದ್ಯಾರ್ಥಿಗಳನ್ನ ಹಿಯಾಳಿಸುವುದು ಅವಮಾನ ಮಾಡುವುದು ಮೊದಲಿನಿಂದಲೂ ಇದ್ದೆ ಇದೆ (ಹೀಗೆ ಹೀಯಾಳಿಸಿದ್ದರಿಂದ ಎಷ್ಟೋ ವಿದ್ಯಾರ್ಥಿ ಗಳು ಆತ್ಮಹತ್ಯೆ ಮಾಡ್ಕೊಂಡಿದ್ದಾರೆ)

ರಿಸರ್ವೇಷನ್ ಅನ್ನು ಬಡವರಿಗೆ ಕೊಡಿ ಎನ್ನುವುದು ಹಲವು ಜನಗಳ ತಳ ಬುಡ ಇಲ್ಲದ ವಾದ ..ಅಂತಹ ಜನಗಳು ಫಸ್ಟ್ ತಿಳ್ಕೊಬೇಕಾಗಿದ್ದು ರಿಸರ್ವೇನ್ ಅನ್ನೋದು ಬಡತನ ಹೋಗಲಾಡಿಸುವ ಕಾರ್ಯಕ್ರಮ ಅಲ್ಲ ಅದು ಸಮುದಾಯಗಳ ಪಾಲ್ಗೊಳ್ಳುವಿಕೆಗೆ ನೀಡುವ ಅವಕಾಶ ಅಷ್ಟೇ. ಇವತ್ತಿಗೂ ಅಸಂಖ್ಯಾತ ಊರುಗಳಲ್ಲಿ SC ST ಜನ ಅನುಕೂಲಸ್ಥರಿರಲಿ ಬಡವರಿರಲಿ ದೇವಸ್ಥಾನಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರವೇಶ ನಿರಾಕರಿಸಲಾಗುತ್ತಿದೆ ಕಾರಣ ಇಷ್ಟೆ ಮೇಲ್ಜಾತಿ ವರ್ಗಗಳಿಗೆ SC ST ಗಳು ಕೆಳ ಜಾತಿಯವರಷ್ಟೇ ಅವರು ಶ್ರೀಮಂತರಾಗಿರಲಿ ಬಡವವರಾಗಿರಲಿ ವಿದ್ಯಾವಂತರಾಗಿರಲಿ ಅವಿದ್ಯಾವಂತರಾಗಿರಲಿ ಅವರನ್ನು ಕೀಳು ಜನಗಳು ಎನ್ನುವ ಭಾವನೆ ಇಂದಲೇ ನೋಡುತ್ತಾರೆ ಹೊರತು ಶ್ರೀಮಂತ ಬಡವ ಎನ್ನುವ Angle ನಿಂದ ನೋಡಲ್ಲ ಎನ್ನುವ ಅಂಶಗಳು ವಿತಂಡವಾದಿಗಳ ಗಮನಕ್ಕೆ ಬರಲ್ಲ. ಜಾತಿ ಆಚರಣೆ ಒಂದು ರೀತಿಯಲ್ಲಿ ಮಾನಸಿಕ ಕಾಯಿಲೆ ಅದು ಎರಡು ರೂಪದಲ್ಲಿ ಇರುತ್ತೆ ಒಂದು Silent ಇನ್ನೊಂದು Violent ಇದು ಸುಲಭಕ್ಕೆ ಹೋಗಲ್ಲ.

ಇದಕ್ಕೆ ಎರಡು ಉದಾಹರಣೆಗಳು ಅಂದ್ರೆ ಮೊದಲನೆಯದು ವಯ್ಯಕ್ತಿಕವಾಗಿ ನನಗೆ ತೀರ ಪರಿಚಿತ So called ಮೇಲ್ಜಾತಿ ಹುಡುಗಿಯೊಬ್ಬಳು ನನ್ನ ಜೊತೆ ಆತ್ಮೀಯವಾಗಿ ಮಾತಾಡ್ತ ಮಾತಿನ ಮಧ್ಯೆ ತನ್ನ ಜೊತೆ ಕೆಲಸ ಮಾಡುತ್ತಿದ್ದ (ಸವಿತಾ ಸಮಾಜದ) ಹುಡುಗಿ ಒಬ್ಬಳು ಕಷ್ಟದಲ್ಲಿ ಇದ್ದಾಗ ಅವಳ ಮನೆಗೆ ಹೋಗಿ ಹೆಲ್ಪ್ ಮಾಡಿದೆ ಆದ್ರೆ ಅವ್ರ ಮನೆಲಿ ನೀರು ಮಾತ್ರ ಕುಡಿಲಿಲ್ಲಪ್ಪ ಅಂತ ಹೇಳ್ದಾಗ ನನಗೆ ಕಂಡಿದ್ದು ಆ ಹುಡುಗಿ ಮಾಡಿದ್ದು ಸಹಾಯ ಅಲ್ಲ ಉಪಕಾರನೂ ಅಲ್ಲ ಭಿಕ್ಷೆ ಕೊಟ್ಟೆ ಅನ್ನುವ ದೊಡ್ಡಸ್ತಿಕೆ, ಆ ಮನೆಲೀ ನೀರು ಕುಡಿಯಲಿಲ್ಲ ಎನ್ನುವ ಸ್ವಜಾತಿಯ ಹೆಮ್ಮೆ ಅಷ್ಟೇ.

ಎರಡನೆಯ ಉದಾಹರಣೆ ಅಂದ್ರೆ ತೀರ ಮೊನ್ನೆಯಷ್ಟೆ ನಮ್ಮದೇ ಕರ್ನಾಟಕ ರಾಜ್ಯದ ಗ್ರಾಮ ಒಂದರಲ್ಲಿ ಮೇಲ್ವರ್ಗದ ವ್ಯಕ್ತಿಯ ಬೈಕ್ ಮುಟ್ಟಿದ್ದಕ್ಕೆ SC ಹುಡುಗನೊಬ್ಬನನ್ನು ಬಟ್ಟೆ ಬಿಚ್ಚಿಸಿ ಹಲ್ಲೆ ಮಾಡಿದ್ದು ಇವು ಎರಡು ಡಿಫರಂಟ್ ಜಾತಿವಾದಿ ಮನಸ್ಥಿತಿಗಳು ಎರಡೂ ಅನಾಹುತಕಾರಿಗಳೇ. ಇಂಥ ಮನಸ್ಥಿತಿಯ ಜನಗಳ ಕೈಗೆ ಸರ್ಕಾರದ ಚುಕ್ಕಾಣಿ ಏನಾದ್ರೂ ಸಿಕ್ಕಿದ್ರೆ ಗತಿ ಏನು ? ದೇವಸ್ಥಾನ, ಊರೊಳಗೆ ಬರೋದಕ್ಕೆ ಬಿಡ್ದೆ ಇರೋ ಜನಗಳು. ಸರ್ಕಾರದ ಹುದ್ದೆಗಳಲ್ಲಿ ಕೂತ್ಕೊಳೋಕೆ ಅವಕಾಶ ಕೊಡ್ತಾರ ? ಖಂಡಿತ ಕೊಡಲ್ಲ ಇಂತಹ ಕಾರಣಗಳಿಗಾಗಿಯೇ ಸಂವಿಧಾನ Reservation ಕೊಟ್ಟಿದ್ದು. ಅವರು ಬಡವರೋ ಶ್ರೀಮಂತರೋ ಅನ್ನೋದನ್ನ ನೋಡಿ ಅಲ್ಲ.

Reservation ಬಗ್ಗೆ ಇನ್ನೂ ಸರಳವಾಗಿ ಹೇಳ್ಬೇಕು ಅಂದರೆ ಒಂದೊಂದು ಊರಿನಲ್ಲಿ ಒಂದೊಂದು ಜಾತಿಗಳು ಪ್ರಭಲವಾಗಿರುತ್ತವೆ ಒಂದೂರಲ್ಲಿ ಲಿಂಗಾಯತ. ಒಂದೂರಲ್ಲಿ ಒಕ್ಕಲಿಗ ಇನ್ನೊಂದು ಊರಲ್ಲಿ ಕುರುಬ ಇನ್ನೊಂದು ಊರಲ್ಲಿ ಮುಸ್ಲಿಂ ಹೀಗೆ ಇಂತಹ ಸಂದರ್ಭಗಳಲ್ಲಿ ಸ್ಥಳಿಯ ಸಂಸ್ಥೆಗಳಾದ ಗ್ರಾಮ ಪಂಚಾಯ್ತಿ, ಸೋಸೈಟಿಗಳು etc ಚುನಾವಣೆಗಳಲ್ಲಿ ಮೀಸಲಾತಿ ಇಲ್ಲದೆ ಹೋದರೆ ಎಲ್ಲ ಸೀಟುಗಳು ಒಂದು ಪ್ರಭಲ ಜಾತಿಯ ಪಾಲಾಗುತ್ತವೆ ಆಗ ಅಧಿಕಾರ ಒಂದೇ ವರ್ಗದ ಜನಗಳ ಕೈಗೆ ಸಿಕ್ಕು ಇತರ ಚಿಕ್ಕ ಸಮುದಾಯಗಳು ತುಳಿತಕ್ಕೆ ಒಳಗಾಗುತ್ತವೆ ಹಾಗಾಗದಿರಲಿ ಎನ್ನುವ ಕಾರಣಕ್ಕೆ sc st obc ಅಲ್ಪ ಸಂಖ್ಯಾತ, ಮಹಿಳಾ ಮೀಸಲಾತಿ ನೀಡಲಾಗಿದೆ ಆ ಮೂಲಕ ಎಲ್ಲ ಸಮುದಾಯದ ಜನಗಳು ಗ್ರಾಮ ಪಂಚಾಯತ, ತಾಲೂಕ ಪಂಚಾಯತ, ಜಿಲ್ಲಾ ಪಂಚಾಯತ, ನಗರ ಪಾಲಿಕೆ…ಇತ್ಯಾದಿಗಳ ಆಡಳಿತಗಳಲ್ಲಿ ಭಾಗವಹಿಸಲು ಸಾಧ್ಯವಾಗಿದೆ. ಇಲ್ಲಿ ಮೀಸಲಾತಿ ಪಡೆಯದೇ ಇರೋರು ಯಾರಿದ್ದಾರೆ ಯೋಚನೆ ಮಾಡಿ ? 85% (SC.ST.OBC) ಜನ 50% ಮಿಸಲಾತಿ ಪಡೆದು ಕೊಂಡರೆ ಉಳಿದ 50% ಮೀಸಲಾತಿ 15% ಜನಗಳಿಗೆ ಇದ್ದೆ ಇದೆ ಅಲ್ಲವೇ ?

ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಮೂರು ಶ್ರೇಣಿಯ ಪಂಚಾಯತಗಳಲ್ಲಿ ಅಧ್ಯಕ್ಷ ಉಪಾಧ್ಯಕ್ಷ ಪ್ರತಿ ಸರ್ತಿ ಬದಲಾಗ್ತ ಇರುತ್ತೆ ಮಹಿಳೆಯರೂ ಸೇರಿದಂತೆ ಪ್ರತಿ ಜಾತಿಯವರಿಗೂ ಆಡಳಿತ ನಡೆಸುವ ಅವಕಾಶ ದೊರಕಿಸಲಾಗಿದೆ ಇದು ಭಾರತದ ಸಂವಿಧಾನ ಪ್ರತಿಯೊಬ್ಬರಿಗೂ ನೀಡಿರುವ ಮೀಸಲಾತಿ ಹೀಗೆ ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಈ ದೇಶದ ಸಂವಿಧಾನದ ಫಲಾನುಭವಿಯಾಗಿದ್ದಾನೆ.

ಆದರೂ ಸಂವಿಧಾನ, ಮೀಸಲಾತಿ, ಅಂಬೇಡ್ಕರ್ ಅವರನ್ನು ನಿಂದಿಸುವ ಕೆಲಸ ಮಾತ್ರ ನಿಲ್ಲಿಸಲ್ಲ.ಇದೀಗ ಯಾವತ್ತೂ ಮೆರಿಟ್ ಟ್ಯಾಲೆಂಟ್ ಬಗ್ಗೆ ಮಾತಾಡ್ತ ಇದ್ದ ಜನಾಂಗ Silent ಆಗಿ 10% Reservation ಪಡ್ಕೊಂಡಿದೆ ತೀವ್ರವಾಗಿ ವಿರೋಧಿಸಬೇಕಾದ OBC ಸಮುದಾಯ ನಮಗೇನೂ ಆಗಲ್ಲ ಅನ್ನೋ ರೀತಿಯಲ್ಲಿ ತೆಪ್ಪಗೆ ಕುಳಿತುಕೊಂಡಿದೆ. ಮುಂಬರುವ ದಿನಮಾನಗಳಲ್ಲಿ ಇದರ ಘೋರ ಪರಿಣಾಮ ಏನಾಗುತ್ತೆ ಎನ್ನುವ ಅರಿವಿರದ ಜನಗಳಿಗೆ ಅದರ “ಫಲ” ಸಿಕ್ಕೆ ಸಿಗುತ್ತದೆ ಅನ್ನೊದರಲ್ಲಿ ಯಾವ ಸಂದೇಹವೂ ಇಲ್ಲ.

ಕೊನೆಯದಾಗಿ ಒಂದು ಮಾತು ಯಾವಾಗಲೂ ಮೆರಿಟ್ ಟ್ಯಾಲೆಂಟ್ ಅಂತ ಜಂಭ ಕೊಚ್ಕೊಳ್ಳೊ ಜನಗಳಿಗೆ ಹೇಳಬೇಕು ಅಂದ್ರೆ ಯಾವ ಟ್ಯಾಲೆಂಟ್ ಬಗ್ಗೆ ಮಾತಾಡ್ತಿದ್ದಿರಿ ? ನಮಗೆ ಸ್ಕೂಲು ಕಾಲೇಜುಗಳ ಬಾಗಿಲು ತೆಗೆದು ಎಷ್ಟು ವರ್ಷಗಳಾಯ್ತು ? ಬರೀ ಕೆಲವೇ ಕೆಲವು ವರ್ಷಗಳು. ಸ್ವಲ್ಪ ಕಾಲಾವಕಾಶ ಕೊಡಿ ಮೆರಿಟ್ಟೂ ನೋಡೋಣ, ಇವತ್ತು ನಿಮ್ಮ ಮನೆ ಹೆಣ್ಮಕ್ಳು ಮಾಡೋ ಭರತನಾಟ್ಯವನ್ನು ಟ್ಯಾಲೆಂಟ್ ಅನ್ಕೊಂಡ್ರೆ ಅದು ಸಾವಿರು ವರ್ಷ ಗಳ ಹಿಂದೆ ಬಡ ಶೂದ್ರ ಹೆಣ್ಮಕ್ಳ ಕಾಲಿಗೆ ನಿವೇ ಗೆಜ್ಜೆ ಕಟ್ಟಿ ದೇವದಾಸಿ ಮಾಡಿದ್ದಿರಲ್ಲ ಅವರು ಮಾಡಿದ ನೃತ್ಯ ಅದು ಶೂದ್ರಾತೀ ಶೂದ್ರರ ಟ್ಯಾಲೆಂಟ್, ಕ್ವಿಂಟಾಲ್ ಗಟ್ಲೆ ಭಾರ ಎತ್ತೋದು. ಕುಸ್ತಿ ಆಡೋದು, ಡೊಳ್ಳು ಬಾರಿಸೋದು, ಹಲಿಗೆ ಹೊಡಿಯೋದು, ಗೀಗಿ ಪದ, ನಿಂತ ಜಾಗದಲ್ಲೆ ಜಾನಪದ ಹಾಡು ಕಟ್ಟಿ ಹಾಡೋದು, ಸೋಬಾನ ಪದಗಳು ಇವೆಲ್ಲ ನೀವು ಹಿಯಾಳಿಸೋ ಶೂದ್ರ ಅತೀ ಶೂದ್ರರ ಟ್ಯಾಲೆಂಟ್ಗಳೇ ಅಷ್ಟೇ ಯಾಕೆ ನೀವುಗಳು ಜಮೀನ್ದಾರ್ರು ಜಾಗಿರ್ದಾರ್ರು ಅನ್ನೋ ಜಾಗಗಳಲ್ಲಿ ಬೆಚ್ಚಗೆ ಕುತ್ಕೊಂಡಾಗ ಊರು ಕಾಯ್ದ ತಳವಾರ, ವಾಲೇಕಾರ ಕತ್ತಿ ಹಿಡಿದದ್ದೂ ಕೂಡ ಶೂದ್ರರ ಟ್ಯಾಲೆಂಟ್ ಇವುಗಳಲ್ಲಿ ನಿಮ್ಮ‌ ಟ್ಯಾಲೆಂಟ್ ಯಾವುದು ? ಯಾವ ಟ್ಯಾಲೆಂಟೂ ನಿಮ್ಮ ಸ್ವಂತದ್ದಲ್ಲ ಎಲ್ಲ ಕೆಳಗಿನ ಜನಗಳಲ್ಲಿದ್ದಿದ್ದನ್ನು ಕಿತ್ಕೊಂಡಿದ್ದೆ ನಿಮ್ಮ‌ ಟ್ಯಾಲೆಂಟ್. ಇಷ್ಟು ದಿವಸ ಕೆಳ ವರ್ಗದ ಜನಗಳಿಗೆ ರಿಸರ್ವೇಷನ್ ಕ್ಯಾಂಡಿಡೆಟ್.ಅರ್ಧ ಫೀಸ್. government beggars ಅಂತ ಹಿಯಾಳಿಸ್ತ ಇದ್ದ ನೀವು ಇವತ್ತು ಅದೇ ಭಿಕ್ಷೆ ಪಡ್ಕೊಂಡಿದ್ದಿರಿ. ಡಾ ಅಂಬೇಡ್ಕರ್ ಮತ್ತು ಸಂವಿಧಾನವನ್ನು ಆರಂಭದಿಂದ ತಿರಸ್ಕರಿಸುತ್ತಲೇ ಬಂದ ನಿಮಗೆ ಇವತ್ತು ಅದೇ ಸಂವಿಧಾನ ಯಾವ ಬೇಧ ಭಾವವೂ ಇಲ್ಲದೆ ನಿಮಗೆ ಬೇಕಾಗಿದ್ದನ್ನ ಪಡ್ಕೊಳೊ ಅವಕಾಶ ಕೊಟ್ಟಿದೆ So ಇನ್ನು ಮುಂದೆ ಆದ್ರೂ SC ST ಗಳನ್ನು ನಿಂದಿಸುವ. ಅವಮಾನಿಸುವ ಕೆಲಸ ಮಾಡಬೇಡಿ. ಹಾಗೇ ನಿಮಗೆ ಬೇಕಾಗಿದ್ದನ್ನು ಪಡ್ಕೊಳೋಕೆ ಅವಕಾಶ ಕೊಟ್ಟ ಸಂವಿಧಾನವನ್ನು ಗೌರವಿಸಿ..

ರವೀಂದ್ರ ಎನ್ ಎಸ್, ಲೇಖಕರು


 

ambedkar image

LEAVE A REPLY

Please enter your comment!
Please enter your name here