ವಿಜಯಪುರ: ಪೊಲೀಸ್ ಸಿಬ್ಬಂದಿಗೆ ಕರೋನಾ ಪಾಸಿಟಿವ್; ಪೊಲೀಸ್ ಠಾಣೆ ಸ್ಥಳಾಂತರ

0
260

ವಿಜಯಪುರ ಜೂ.13: ವಿಜಯಪುರ ಶಹರದ ಗೋಲಗುಂಬಜ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಕಂಟೇನ್‍ಮೆಂಟ್ ಝೋನ್ ಬಂದೋಬಸ್ತ ಕುರಿತು ಜಿಲ್ಲೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಜನರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಇಲ್ಲಿಯವರೆಗೆ ಕಂಟೇನ್‍ಮೆಂಟ್ ಝೋನ್, ಚೆಕ್‍ಪೋಸ್ಟ್, ನಿಗದಿತ ಆಸ್ಪತ್ರೆ ಹಾಗೂ ಇತರೆ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಪೈಕಿ ಒಟ್ಟು 217 ಜನರ ಸ್ವಾಬ್ ಸ್ಯಾಂಪಲ್ ಸಂಗ್ರಹಿಸಿ ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗಿತ್ತು, ಅದರಲ್ಲಿ ಇಂದು ದಿನಾಂಕ: 13.06.2020 ರಂದು ಜಲನಗರ ಪೊಲೀಸ್ ಠಾಣೆಯ ಸಿಬ್ಬಂದಿ P-6586 ಇವರಿಗೆ ಕರೋನಾ POSITIVE ಬಂದಿದೆ. ನಿಗದಿತ ಆಸ್ಪತ್ರೆಗೆ ಚಿಕಿತ್ಸೆ ಕುರಿತು ದಾಖಲಿಸಲಾಗಿದೆ.

ಈ ಪ್ರಯುಕ್ತ ಜಲನಗರ ಪೊಲೀಸ್ ಠಾಣೆಯನ್ನು ಪಕ್ಕದ ಕಲ್ಯಾಣ ಮಂಟಪಕ್ಕೆ ಸ್ಥಳಾಂತರಿಸಲಾಗಿದೆ. ಸದರಿ ಪೊಲೀಸ್ ಸಿಬ್ಬಂದಿಯವರ Primary and Secondary Contact ಇರುವವರನ್ನು ಗುರುತಿಸಿ ಕ್ವಾರಂಟೈನ್‍ನಲ್ಲಿ ಇಡಲಾಗಿದ್ದು, ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here