ವಿಜಯಪುರ: ತುಟ್ಟಿಭತ್ಯೆ ಹೆಚ್ಚಳ ದರವನ್ನು ಸ್ಥಗಿತಗೊಳಿಸಿರುವ ಆದೇಶ ಹಿಂಪಡೆಯಬೇಕು

0
197

ವಿಜಯಪುರ ಜೂ.05: ರಾಜ್ಯ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 2020ರ ಜನವರಿಯಿಂದ 2021ರ ಜೂನ ವರೆಗೆ ತುಟ್ಟಿಭತ್ಯೆ ಹೆಚ್ಚಳ ದರವನ್ನು ಸ್ಥಗಿತಗೊಳಿಸಿರುವ ಆದೇಶ ಹಿಂಪಡೆಯುವುದು, ಗಳಿಕೆ ರಜೆ ನಗದೀಕರಣ ರದ್ದತಿ ಆದೇಶ ಹಿಪಡೆಯುವುದು, ನೌಕರ- ವಿರೋದಿ ಅಂಶಗಳಿರುವ ಸಿ.ಸಿ.ಎ. ತಿದ್ದುಪಡಿ ಪ್ರಸ್ತಾವನೆ ಕೈಬಿಡುವುದು, ಇಲಾಖಾ ಹುದ್ದೆಗಳ ರದ್ದು ಪ್ರಸ್ತಾವನೆ ಕೈ ಬಿಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ಕಪ್ಪು ಬ್ಯಾಡ್ಜ್ ಹಾಕಿಕೊಂಡು ಗುರುವಾರ ಅಖಿಲ ಕರ್ನಾಟಕ ರಾಜ್ಯ ಸಕಾರಿ ನೌಕರರ ಒಕ್ಕೂಟ (ರಿ) ಜಿಲ್ಲಾ ಶಾಖೆ ವಿಜಯಪುರ ವತಿಯಿಂದ ಜಿಲ್ಲಾಧಿಕಾರಿಗಳ ಆಪ್ತ ಸಹಾಯಕ ಪವನ ನಿಂಬಾಳಕರ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಸುರೇಶ ಜೀಬಿ ಮಾತನಾಡಿ, ಹೊರಗುತಿಗೆ / ದಿನಗೂಲಿ / ಗುತ್ತಿಗೆ ನೌಕರರಿಗೆ ನೇಮಕಾತಿಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಿ ನೇಮಕಾತಿ ಮಾಡಿಕೊಳ್ಳಬೇಕು. ಹೊರಗುತ್ತಿಗೆ/ ದಿನಗೂಲಿ/ ಗುತ್ತಿಗೆ ನೌಕರರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು. ಕಾರ್ಮಿಕ ಕಾನೂನುಗಳಿಗೆ ಕಾರ್ಮಿಕ ವಿರೋದಿ ತಿದ್ದುಪಡಿಗಳನ್ನು ಕೈಬಿಡುವುದು. ಕೊರೊನಾ ತಡೆಗಟ್ಟುವಿಕೆಯಲ್ಲಿ ನಿರತರಾಗಿರುವ ನೌಕರರಿಗೆ ಅವಶ್ಯ ವೈಯಕ್ತಿಕ ಸಂರಕ್ಷಣಾ ಉಪಕರಣಗಳನ್ನು ಮತ್ತು ವಿಶೇಷ ಪ್ರೋತ್ಸಾಹಧನವನ್ನು ನೀಡಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಎಸ್.ಜಿ.ಸಂಗಾಪೂರ, ಅಶೋಕ ಇರಕಲ್, ಜಿ.ಬಿ.ಅಂಗಡಿ, ಸಂತೋಷ ಯರಗಲ್, ಆರ್.ಎಸ್. ಬಣಸಗಿ, ಸಂಗ್ರಾಮ ಪಾಟೀಲ, ಬಗಲಿ ಸೇರಿದಂತೆ ಮುಂತಾದವರು ಸರಕಾರ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು ಎಂದು ಜಿಲ್ಲಾಧ್ಯಕ್ಷ ಚಂದ್ರಶೇಖರ ಎಚ್. ಲೇಂಡಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


 

LEAVE A REPLY

Please enter your comment!
Please enter your name here