ಕೊರೋನಾದಿಂದ ಧೈರ್ಯವಾಗಿರಿ : ಡಾ. ಹರ್ಷವರ್ಧನ್

0
111

ಹೊಸದಿಲ್ಲಿ ಮೇ.23: ಕೊರೋನಾ ಮಹಾಮಾರಿ ವಿಶ್ವದಲ್ಲಿ ತನ್ನ ಅಟ್ಟಹಾಸ ಮೇರೆಯುತ್ತಿದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಕೊರೋನಾ ಸೋಂಕು ತಗುಲಿದರು ಗುಣಮುಖರಾಗುವವರ ಪ್ರಮಾಣ ಹೆಚ್ಚಿದೆ. ಸೋಂಕು ತಗುಲಿದರು ಭಯಪಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ದೇಶದ ಜನತೆಗೆ ಧೈರ್ಯ ತುಂಬಿದ್ದಾರೆ.

ಜಗತ್ತಿನಾದ್ಯಂತ ಕೊರೋನಾ ಪ್ರಭಾವ ಇದೆ. ಭಾರತದಲ್ಲೂ ಈ ಸಾಂಕ್ರಾಮಿಕ ರೋಗ ಇದೆ. ದೇಶದ ಜನತೆ ಆತಂಕ ಪಡಬೇಕಾಗಿಲ್ಲ. ಕೇಂದ್ರ ಸರಕಾರ ದೇಶದ ಜನತೆಗೆ ಧೈರ್ಯ ತುಂಬುತ್ತ ಬಂದಿದೆ. ಆದರೆ ಧೈರ್ಯವಾಗಿರಿ ಎಂದ ಮಾತ್ರಕ್ಕೆ ಮೈಮರೆಯಬೇಕು ಎಂದು ಅರ್ಥವಲ್ಲ. ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲ್ಲೇಬೇಕು. ಮನೆಯಿಂದ ಹೊರ ಹೋದರೆ ಕಡ್ಡಾಯವಾಗಿ ಮಾಸ್ಕ ಧರಿಸಿರಿ. ಆಗಾಗ ಕೈತೊಳೆಯುತ್ತಿರಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ. ಇಷ್ಟು ಪಾಲಿಸಿದರೆ ಸೋಂಕು ನಿಯಂತ್ರಿಸುವುದು ಸುಲಭ ಎಂದು ಆರೋಗ್ಯ ಸಚಿವರು ಹೇಳಿದರು.


 

LEAVE A REPLY

Please enter your comment!
Please enter your name here