ದಲಿತ DCM ಮತಕ್ಷೇತ್ರದಲ್ಲಿ ದಲಿತರಿಗಿಲ್ಲ ರಕ್ಷಣೆ

0
297

ಬಾಗಲಕೋಟ ಜಿಲ್ಲೆ ಮುಧೋಳ ತಾಲೂಕಿನ ಕರಣಕುಮಾರ ಮೌರ್ಯ ಎನ್ನುವ ಯುವಕ ಮತ್ತು ಆತನ ಸ್ನೇಹಿತರು ನಿನ್ನೆ ದಿನ ಮುಧೋಳದಿಂದ ಇಂಗಳಗಿ ಮಾರ್ಗವಾಗಿ ವಜ್ರಮಟ್ಟಿ ಗ್ರಾಮಕ್ಕೆ ಕೆಲಸದ ನಿಮಿತ್ಯವಾಗಿ ಹೋಗುವಾಗ ಮಾರ್ಗ ಮಧ್ಯ ಇಂಗಳಗಿ ಗ್ರಾಮದ ಪಾನಮತ್ತರಾದ ಕೆಲ ಯುವಕರು ಕರಣಕುಮಾರ್ ಮತ್ತವರ ಸ್ನೇಹಿತರತ್ತ ವಿನಾಕಾರಣ ಕಲ್ಲು ತೂರಾಟ ಮಾಡಿದ್ದು, ಆಗ ಕಲ್ಲು ತಗುಲಿದ ಕರಣಕುಮಾರ್ ಎಂಬ ಹೆಸರಿನ ಯುವಕ ಆ ಪಾನ ಮತ್ತ ಗುಂಪಿನತ್ತ ತೆರಳಿ ತಮ್ಮತ್ತ ಕಲ್ಲು ಎಸೆಯುತ್ತಿರುವ ಕಾರಣ ಏನು ಎಂದು ಕೇಳಿದಾಗ ನಾವು ಕಲ್ಲಿನಿಂದ ಹೊಡೆಯುವವರೆ, ನೀವು ಅದನ್ನು ಕೇಳಬಾರದು ಎಂದು ಅವಾಜ್ ಹಾಕಿದ್ದು ಅಲ್ಲದೇ ತಿರುಗ ಆತನತ್ತ ಕಲ್ಲು ಹೊಡೆದಿದ್ದಾರೆ ಆಗ ಇಬ್ಬರಿಗೂ ಮಾತಿನ ಚಕಮಕಿ ಜೋರಾಗಿ ಕೈ ಮಿಲಾಯಿಸುವ ಹಂತಕ್ಕೆ ಹೋಗಿದೆ. ಆಗ ಹತ್ತಿರದಲ್ಲಿದ್ದ ಒಂದಿಷ್ಟು ಜನ ದೊಣ್ಣೆ ಕಲ್ಲು ಸಮೇತ ಸುಮಾರು ಹತ್ತರಿಂದ ಹದಿನೈದು ಜನರ ಗುಂಪು ಏಕಾಏಕಿ ಇವರ ಮೇಲೆ ದಾಳಿ ಮಾಡಿ ಎಲ್ಲರನ್ನು ಮನಸೋ ಇಚ್ಚೆ ಥಳಿಸಿದ್ದಾರೆ. ಹಲ್ಲೆಯಲ್ಲಿ ಕರಣಕುಮಾರ ಅವರ ಬಲಗೈ ಮೂಳೆ ಮುರಿದು ಸಧ್ಯೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಧ್ಯ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು ಈ ಘಟನೆಯ ಕುರಿತು ದೂರು ಕೊಟ್ಟರೂ ಪೊಲೀಸರು ಇನ್ನೂ ಪ್ರಕರಣವನ್ನು ದಾಖಲಿಸಿಕೊಂಡು ಆರೋಪಿಗಳನ್ನು ಬಂದಿಸಿರುವುದಿಲ್ಲ.

ಹಲ್ಲೆ ನಡೆಸಿದವರು ತಾವು ಹಿಂದೂಪರ ಸಂಘಟನೆಯವರು ನಿನ್ನ ಬಗ್ಗೆ ನಮಗೆ ಎಲ್ಲ ಮಾಹಿತಿ ಇದೆ ಎಂದು ಹಲ್ಲೆ ಗೊಳಗಾದ ಕರಣ್ ಕುಮಾರ್ ಗೆ ಹೇಳಿದ್ದು ಈ ಘಟನೆಯ ಉದ್ದೇಶ ಪೂರ್ವಕವಾಗಿ ನಡೆಸಲಾಗಿದ್ದೆ ? ಎನ್ನುವ ಅನುಮಾನ ದಟ್ಟವಾಗಿದೆ. ಏಕೆಂದರೆ ಹಲ್ಲೆಗೊಳಗಾದ ಯುವಕ ದಲಿತಪರ ಚಟುವಟಿಕೆಗಳು ಹಾಗೂ ಅಂಬೇಡ್ಕರ್ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಳ್ಳುತ್ತಿದ್ದು ಆತನ ಮೇಲೆ ಹಲ್ಲೆಗೆ ಕಾರಣವಾಯಿತೇ ? ಈ ಕುರಿತು ಸತ್ಯಾ ಸತ್ಯತೆಯು ಪೊಲೀಸ ತನಿಖೆಯಿಂದಷ್ಟೆ ಹೊರ ಬರಬೇಕಿದೆ. ಆ ನಿ ಟ್ಟಿನಲ್ಲಿ ಮುಧೋಳ ಪೋಲೀಸರು ಈ ಕೂಡಲೇ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕಿದೆ.

ಮುಧೋಳ ಮತಕ್ಷೇತ್ರದಲ್ಲಿ ಈ ಹಿಂದೆಯೂ ದಲಿತರ ಮೇಲೆ ಸಾಕಷ್ಟು ದೌರ್ಜನ್ಯಗಳು ನಡೆದಾಗಲೂ ಸಹ ಮುಧೋಳ ಮತಕ್ಷೇತ್ರದವರೇ ಆದ ದಲಿತ ನಾಯಕರು ಉಪ ಮುಖ್ಯ ಮಂತ್ರಿಗಳೂ ಆದ ಗೋವಿಂದ ಕಾರಜೋಳ ಅವರು ಯಾವುದೇ ಪ್ರತಿಕ್ರೀಯೆ ನೀಡದೇ ಮೌನಕ್ಕೆ ಶರಣಾಗಿದ್ದರು.ಈ ಪ್ರಕರಣದಲ್ಲಾದರೂ ಮಾನ್ಯ ಉಪ ಮುಖ್ಯ ಮಂತ್ರಿಗಳು ದಲಿತರಿಗೆ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪೋಲೀಸ್ ಇಲಾಖೆಗೆ ಸೂಚನೆ ನೀಡುವಂತೆ ದಲಿತ ಸಂಘಟನೆಗಳು ಕಾರಜೋಳರನ್ನು ಆಗ್ರಹಿಸಿವೆ. 

LEAVE A REPLY

Please enter your comment!
Please enter your name here