ವಿಜಯಪುರ: ಒಂದುವರೆ ವರ್ಷದ ಮಗು ಸೇರಿ ಐವರು ಕೋವಿಡ್-19 ರೋಗಿಗಳು ಗುಣಮುಖ

0
233

ವಿಜಯಪುರ ಮೇ.01: ಕೋವಿಡ್-19 ದಿಂದ ಗುಣಮುಖರಾದ ಐವರು ರೋಗಿಗಳನ್ನು ಇಂದು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ.
ಒಂದುವರೆ ವರ್ಷದ ಹೆಣ್ಣುಮಗು ರೋಗಿ ಸಂಖ್ಯೆ 310, ವೃದ್ಧರಾದ 65 ವರ್ಷ ವಯೋಮಾನದ ರೋಗಿ ಸಂಖ್ಯೆ 306, 62 ವಯೋಮಾನದ ವೃದ್ಧ ರೋಗಿ ಸಂಖ್ಯೆ 307, 60 ವಯೋಮಾನದ ರೋಗಿ ಸಂಖ್ಯೆ 362 ಹಾಗೂ 36 ವರ್ಷ ವಯೋಮಾನದ ರೋಗಿ ಸಂಖ್ಯೆ 308 ಇಂದು ಬಿಡುಗಡೆಗೊಂಡಿದ್ದು, ಜಿಲ್ಲೆಯಲ್ಲಿ ಈವರೆಗೆ 11 ಕೋವಿಡ್-19 ಪಾಸಿಟಿವ್ ರೋಗಿಗಳು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆ ಹೊಂದಿದ್ದಾರೆ.

ಇಂದು ಮದ್ಯಾಹ್ನ ಜಿಲ್ಲಾಆಸ್ಪತ್ರೆಯಿಂದ ಬಿಡುಗಡೆಗೊಂಡ ರೋಗಿಗಳಿಗೆ ಚಪ್ಪಾಳೆ ತಟ್ಟುವ ಮೂಲಕ, ಡೈಫ್ರೂಟ್ಸ್ ಒದಗಿಸುವ ಮೂಲಕ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ಬಿಡುಗಡೆಗೊಂಡ ರೋಗಿ ಸಂಖ್ಯೆ 308 ಮಾತನಾಡಿ ಕೋವಿಡ್-19 ಗುಣಮುಖ ಪಡಿಸುವಲ್ಲಿ ನೆರವಾಗಿರುವ ರಾಜ್ಯ ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಹಾಗೂ ವೈದ್ಯರಿಗೆ ಆತ್ಮಿಯವಾಗಿ ಅಭಿನಂದನೆ ಸಲ್ಲಿಸಿದರು.

ಅದರಂತೆ ತಮ್ಮ ಅನುಭವ ಹಂಚಿಕೊಂಡ ಅವರು ಕೋವಿಡ್-19 ತಗುಲಿದ ತಕ್ಷಣ ಅತ್ಯಂತ ವಿಚಲಿತ ಮತ್ತು ಆತಂಕದ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಸೇರ್ಪಡೆಗೊಂಡ ಜೊತೆಗೆ ಮಾನಸಿಕವಾಗಿ ಕುಗ್ಗಿ ಹೊಗಿದ್ದರ ಬಗ್ಗೆ ತಿಳಿಸಿ ಇಂದು ಎಲ್ಲ ವೈದ್ಯರ, ಸಿಬ್ಬಂಧಿಗಳ, ರಾಜ್ಯ ಸರ್ಕಾರದ, ಜಿಲ್ಲಾಡಳಿತ, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಅಪಾರ ನೆರವಿನ ಫಲವಾಗಿ ಸಂಪೂರ್ಣ ಗುಣಮುಖ ರಾಗಲು ಸಾಧ್ಯವಾಗಿದ್ದು ಇದಕ್ಕಾಗಿ ಎಲ್ಲರನ್ನು ಅಭಿನಂದಿಸಿದರು.

ಅದರಂತೆ ಸರ್ಕಾರದ ಆಪ್ತಮಿತ್ರ ಆ್ಯಪ್ ಕೂಡಾ ಅವಶ್ಯಕ ಮಾರ್ಗದರ್ಶನ ನೀಡುವಲ್ಲಿ ಸಹಕಾರಿಯಾಗಿದೆ. ಮಾನಸಿಕವಾಗಿ ಸದೃಡಗೊಳಿಸಲು ವೈದ್ಯರು ಅಪಾರವಾಗಿ ನೆರವಾಗಿದ್ದು, ಮನೆ ಸ್ಯಾನಿಟೈಸ್ ಮಾಡಲು ಪಾಲಿಕೆ ಆಯುಕ್ತರು ಮತ್ತು ಸಿಬ್ಬಂದಿಗಳು ನೆರವಾಗಿದಕ್ಕೆ ಅಭಿನಂದನೆ ಸಲ್ಲಿಸಿದರು. ಕೋವಿಡ್-19 ದಿಂದ ಮುಕ್ತರಾಗಲು ಪ್ರತಿಯೊಬ್ಬರೋಗಿ ತಪ್ಪದೇ ಪ್ರಾಮಾಣಿಕವಾಗಿ ಮತ್ತು ವಸ್ತುನಿಷ್ಠವಾಗಿ ತಮ್ಮ ಪ್ರಯಾಣವಿವರ ನೀಡಬೇಕು. ಅತ್ಯುತ್ತಮ ಆರೋಗ್ಯ ಸೇವೆ ಇಲ್ಲಿ ಲಭ್ಯವಾಗಿದ್ದು, ಯಾವುದೇ ಮಾಹಿತಿಯನ್ನು ಮುಚ್ಚಿಡದೇ ವೈದ್ಯರಿಗೆ ಸಹಕರಿಸಿ ಈ ರೋಗದಿಂದ ಮುಕ್ತವಾಗುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಆಸ್ಪತ್ರೆಯ ಸರ್ಜನ್ ಶರಣಪ್ಪ ಕಟ್ಟಿ, ಡಾ.ಲಕ್ಕಣ್ಣವರ, ಡಾ,ಇಂಗಳೆ, ಡಾ, ಎ.ಜೆ ಬಿರಾದಾರ, ಡಾ. ಶೈಲಶ್ರೀ ಎಂ, ಮೇಲ್ವಿಚಾರಕ ಅಜೀತ, ಪಿಎಸ್‍ಐ ಶಿವಕುಮಾರ, ಶಿಸ್ಟರ್‍ಗಳಾದ ಶ್ರೀಮತಿ ಶಾಂತಾ, ಸುಜಾತಾ ಮತ್ತು ಮೋಮೀನ್ ಅವರು ಉಪಸ್ಥಿತರಿದ್ದರು.


 

ambedkar image

LEAVE A REPLY

Please enter your comment!
Please enter your name here