ಜಿಲ್ಲಾಧಿಕಾರಿಗಳ ಒತ್ತಾಸೆ ಮರಳು ಶಿಲ್ಪ ರಚನೆಗೆ ಸ್ಪೂರ್ತಿ

0
231

ಹುಬ್ಬಳ್ಳಿ .ಏ.24: ಕೋವಿಡ್-19 ತುರ್ತು ಸಂದರ್ಭದಲ್ಲಿ ವೈದ್ಯರು, ನರ್ಸ್, ಪೊಲೀಸರು, ಆಶಾ, ಅಂಗನಾವಡಿ ಕಾರ್ಯತೆಯರು, ಸ್ವಯಂಸೇವಕರು ಹಾಗೂ ಮಾಧ್ಯಮದವರು ಹಗಳಿರುಳು ಕೆಲಸ ನಿರ್ವಹಿಸುತ್ತಿದ್ದಾರೆ.

ದೇಶ ಅಘೋಷಿತ ಯುದ್ದದಲ್ಲಿ ‌ತೊಡಗಿದೆ. ತಮ್ಮ ಜೀವ ಪಣಕಿಟ್ಟು ದುಡಿಯುತ್ತಿರುವ ಲಕ್ಷಾಂತರ ಜನರಿಗೆ‌ ಗೌರವ ಸಲ್ಲಿಸುವ ಹಾಗೂ ಆತ್ಮವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಕಿಮ್ಸ್ ಆವರಣದಲ್ಲಿ ಮರಳು ಶಿಲ್ಪ ರಚಿಸಲಾಗಿದೆ. ಧಾರವಾಡ ಜಿಲ್ಲಾಧಿಕಾರಿ ದೀಪಾ ಚೋಳನ್ ಅವರ‌ ಕಲ್ಪನೆ ಹಾಗೂ ಆಶಯಗಳಿಗೆ ಕಲಾವಿದ ಮಂಜುನಾಥ ಹಿರೇಮಠ ಸಕಾರ ರೂಪ ನೀಡಿದ್ದಾರೆ.

ಆರೋಗ್ಯವೇ ಭಾಗ್ಯ, ಸದಾಕಾಲ ಜನರ ಸೇವೆಯಲ್ಲಿರುವ, ಕೊರೋನಾ ವೈರಸ್ ಸೋಂಕಿನ ಪ್ರದೇಶದಲ್ಲೇ ಕೆಲಸ ನಿರ್ವಹಿಸುವ ಎಲ್ಲರೂ ತಮ್ಮ ಆರೋಗ್ಯದ ಕಾಳಜಿ ವಹಿಸಬೇಕು. ತುರ್ತು ಸಂದರ್ಭದಲ್ಲಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಇಲಾಖೆಗಳ ಅಧಿಕಾರಿ ಹಾಗೂ‌ ಸಿಬ್ಬಂದಿಗಳು ಸಾರ್ಸ್ ಕೋ ವಿ-2 ವೈರಸ್ ಹರಡುವ ತೀವ್ರತೆ ಅರಿತು ಎಲ್ಲಾ ರೀತಿಯ ಸಾಮಾಜಿಕ ಅಂತರದೊಂದಿಗೆ ಕರ್ತವ್ಯ ನಿರ್ವಹಿಸಬೇಕು. ಕೆಲಸದ ಒತ್ತಡದಲ್ಲಿ ಸಾಮಾಜಿಕ ಅಂತರ ಕಡೆ್ಗಗಣಿಸಬಾರದು ಎಂದು ಅವರು ಹೇಳಿದ್ದಾರೆ.

ಹತ್ತು ಅಡಿ ಚದುರ ವಿಸ್ತೀರ್ಣ ಹಾಗೂ ನೆಲದಿಂದ ಓರೆಯಾಗಿ ಆರು ಅಡಿ ಎತ್ತರ ಇರುವ ಕಲಾಕೃತಿಯನ್ನು ಮರಳು ಹಾಗೂ ನೈಸರ್ಗಿಕ ಬಣ್ಣಗಳಿಂದ ರಚಿಸಲಾಗಿದೆ. ಕಲಾವಿದ ಮಂಜುನಾಥ ಹಿರೇಮಠ ನಾಲ್ಕು ತಾಸುಗಳ ಶ್ರಮವಹಿಸಿ ಮರಳು ಶಿಲ್ಪಕ್ಕೆ ಅಂತಿಮ ರೂಪ ನೀಡಿದ್ದಾರೆ. ವಿಶ್ವವನ್ನು ಆವರಿಸಿರುವ ಕೊರೋನಾವನ್ನು ಮಾಸ್ಕ್ ಧರಿಸಿದ ಪೊಲೀಸ್, ವೈದ್ಯ, ನರ್ಸ್ ಹಾಗೂ ಪೌರಕಾರ್ಮಿಕರು ಭಾರತದೊಳಗೆ ತನ್ನ ಕಬಂದ ಬಾಹು ಚಾಚದಂತೆ ತಡೆಹಿಡಿದ್ದಾರೆ. ಜನರಿಗೆ ಕರೋನಾ ತಿಳಿವಳಿ ನೀಡುತ್ತಿರುವ ಮಾಧ್ಯಮಗಳ ಸೂಚಕವಾಗಿ ಟಿ.ವಿ.ಮೈಕ್ ಹಾಗಾ ಲೇಖನಿಯ ಚಿತ್ರವನ್ನು ಬಿಡಿಸಲಾಗಿದೆ. ಕೊರೋನಾ ಸೈನಿಕರನ್ನು ಗೌರವಿಸೋಣ ಎಂಬ ಉಕ್ತಿ ಅಡಿಯಲ್ಲಿದೆ.


 

ambedkar image

LEAVE A REPLY

Please enter your comment!
Please enter your name here