ಕೊರೋನಾ ಸೋಂಕಿನಿಂದ ಗುಣಮುಖ, ಮೂವರು ಆಸ್ಪತ್ರೆಯಿಂದ ಬಿಡುಗಡೆ

0
228

ಕಲಬುರಗಿ.ಏ.24: ಕೊರೋನಾ ಸೋಂಕಿಗೆ ತುತ್ತಾಗಿ ಇ.ಎಸ್.ಐ.ಸಿ. ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಶಹಾಬಾದ ಪಟ್ಟಣದ ಇಬ್ಬರು ಮತ್ತು ಕಲಬುರಗಿ ನಗರದ ಓರ್ವ ರೋಗಿ ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಗುರುವಾರ ಅಸ್ಪತ್ರೆಯಿಂದ ಬಿಡುಗಡೆಗೊಳಿಸಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ಅವರು ತಿಳಿಸಿದ್ದಾರೆ.

ನವದೆಹಲಿಯ ತಬ್ಲಿಘಿ ಜಮಾ ಅತ್ ಹೋಗಿ ಬಂದಿದ್ದ ಶಹಾಬಾದ ಪಟ್ಟಣದ ಅಪ್ಪರ ಮಡ್ಡಿ ಪ್ರದೇಶದ ವ್ಯಕ್ತಿಯ ಪತ್ನಿ 60 ವಯಸ್ಸಿನ ಮಹಿಳೆ(ರೋಗಿ ಸಂ-124) ಮತ್ತು ಇವರ ಸೊಸೆ 28 ವರ್ಷದ ಯುವತಿ (ರೋಗಿ ಸಂ-174) ಹಾಗೂ ಕಲಬುರಗಿ ನಗರದ ಖಮರ್ ಕಾಲೋನಿಯ 72 ವರ್ಷದ ಮಹಿಳೆ ಸಂಪೂರ್ಣ ಗುಣಮುಖರಾಗಿ ಅಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

ರೋಗಿ ಸಂ. 124 ಏಪ್ರಿಲ್ 2 ರಂದು, ರೋಗಿ ಸಂ-174 ಏಪ್ರಿಲ್ 7 ರಂದು ಹಾಗೂ ರೋಗಿ ಸಂ-178 ಏಪ್ರಿಲ್ 8 ರಂದು ಕೊರೋನಾ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
ಇದರಿಂದ ಕಲಬುರಗಿ ಜಿಲ್ಲೆಯಲ್ಲಿ ಇದೂವರೆಗೆ ಕೊರೋನಾ ಪಾಸಿಟಿವ್ ಪತ್ತೆಯಾದ 36 ರಲ್ಲಿ ಒಟ್ಟು 6 ಜನ ರೋಗಿಗಳು ಕೊರೋನಾ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಉಳಿದಂತೆ 4 ಜನ ನಿಧನ ಹೊಂದಿದ್ದು, 26 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.


 

ambedkar image

LEAVE A REPLY

Please enter your comment!
Please enter your name here