ವಿಜಯಪುರ : ಕಂಟೇನ್ಮೆಂಟ್ ಜೋನ್-ಬಫರ್ ಜೋನ್ ಪ್ರದೇಶದ ಮನೆಮನೆ ಸಮೀಕ್ಷೆಗೆ ಆದೇಶ

0
154

ವಿಜಯಪುರ  ಎ.12: ವಿಜಯಪುರ ನಗರದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣ ಕಂಡುಬಂದ ಹಿನ್ನೆಲೆಯಲ್ಲಿ ಈಗಾಗಲೇ ಘೋಷಿಸಿದ ಕಂಟೇನ್ಮೆಂಟ್ ಜೋನ್-ಬಫರ್ ಜೋನ್ ಪ್ರದೇಶದ ಮನೆಮನೆ ಸಮೀಕ್ಷೆ (ಸರ್ವೇಲನ್ಸ್) ಕಾರ್ಯಕೈಗೊಳ್ಳಲು ತಕ್ಷಣದಿಂದ ಜಾರಿಗೆ ಬರುವಂತೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಆದೇಶ ಹೊರಡಿಸಿದ್ದಾರೆ.
ಈ ಕಾರ್ಯದ ಸಂಪೂರ್ಣ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿ ಶ್ರೀ ಎಂ.ಬಿ ಬಿರಾದಾರ ಅವರಿಗೆ ನೀಡಲಾಗಿದ್ದು, ಪ್ರತಿ 30 ರಿಂದ 50 ಮನೆಗಳಿಗೆ ಒಬ್ಬ ವೈದ್ಯಾಧಿಕಾರಿಯ ಮೇಲ್ವಿಚಾರಣೆಯ ಒಂದು ತಂಡದಲ್ಲಿ ಆಶಾ/ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಎಎನ್‍ಎಮ್ ವರ್ಕರ್ಸ್ ಒಳಗೊಂಡಿರಬೇಕು. ಶಂಕಿತ ಪ್ರಕರಣಗಳು ಕಂಡುಬಂದಲ್ಲಿ ವರದಿ ಮಾಡಬೇಕು. 14 ದಿನದ ಅವಧಿಯಲ್ಲಿ ಎಸ್‍ಎಆರ್‍ಐ ಮತ್ತು ಐಎಲ್‍ಐ ಯಾವುದಾದರೂ ಪ್ರಕರಣಗಳು ವರದಿಯಾದಲ್ಲಿ ಅವುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ ಕ್ರಮಕೈಗೊಳ್ಳಬೇಕು. ನಿರ್ಬಂಧಿತ ಪ್ರದೇಶದಲ್ಲಿ ಐಇಸಿ ಚಟುವಟಿಕೆಗಳನ್ನು ಕೈಗೊಳ್ಳಬೇಕು.
ಜನರಿಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದರ ಬಗ್ಗೆ ಮತ್ತು ಹೋಮ್‍ಕ್ವಾರಂಟೈನ್ ಬಗ್ಗೆ ತಿಳುವಳಿಕೆ ನೀಡಬೇಕು. ಮೇಲ್ವಿಚಾರಣಾ ಕಾರ್ಯದ ವೈದ್ಯಾಧಿಕಾರಿಯು ಪ್ರತಿದಿನದ ಮಾಹಿತಿಯನ್ನು ಸಂಗ್ರಹಿಸಿ ಜಿಲ್ಲಾಧಿಕಾರಿ ಕಚೇರಿಗೆ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರು ಜಿಲ್ಲಾಸ್ಪತ್ರೆ ವಿಜಯಪುರ ಇವರಿಗೆ ವರದಿ ನೀಡಬೇಕು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಮತ್ತು ತಾಲೂಕಾ ಆರೋಗ್ಯ ಕುಟುಂಬ ಕಲ್ಯಾಣ ಅಧಿಕಾರಿಗಳು ಇವರು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ತಂಡವನ್ನು ರಚಿಸಿ ಈ ಕಚೇರಿಗೆ ಸಲ್ಲಿಸಬೇಕು. ಈ ಕಾರ್ಯದಲ್ಲಿ ನಿರ್ಲಕ್ಷ್ಯ ತೋರಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಮೇಲೆ ನಿಯಮಾನುಸಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here