‘ಕರೋನಾ’ ‘ ಮರೋನಾ’

0
283

ಈ ಕರೋನಾ ವೈರಸ್ ಅಮೇರಿಕಾ ಮಿತ್ರರಾಷ್ಟ್ರಗಳಲ್ಲಿ ಮಾತ್ರ ಏಕೆ ಕಾಣಿಸಿಕೊಂಡಿದೆ ? ಆ ಕರೋನಾಗೆ ಉಳಿದ ರಾಷ್ಟ್ರಗಳಲ್ಲಿ ಎಂಟ್ರಿ ಕೊಡಲು ದೈರ್ಯ ಇಲ್ಲವೇ ? ಏನೇ ಇರಲಿ, ಈ ಕರೋನಾ ವೈರಸ್ ಕೇವಲ ಅಮೇರಿಕಾದ ಮಿತ್ರ ದೇಶಗಳಲ್ಲಿ ಏಕೇ ತಳ ಹಿಡಿದು ಕುಂತಿದೆ ? ರಷ್ಯಾದ ಮತ್ತು ಅದರ ಮಿತ್ರ ದೇಶಗಳಲ್ಲಿ ಹರಡಲು ಕರೋನಾಗೆ ಹೆದರಿಕೆ ಇದೆಯೇ ? ಅಥ್ವಾ ಅಲ್ಲಿ ಹೋದ್ರೆ ಆ ದೇಶದವರು ಕರೋನಾವನ್ನು ಕಟ್ಟಿ ಹಾಕ್ತಾರಾ ?

ಇನ್ನೊಂದು ಅಂದ್ರೆ, ಚೀನಾದ ಮಿತ್ರ ರಾಷ್ಟ್ರಗಳಲ್ಲಿಯೂ ಹರಡಿಲ್ಲಾ ಅದರ ಪಕ್ಕದ ಪೂರ್ವದಲ್ಲಿ ಜಪಾನ್ ಇದೆ‌. ದಕ್ಷಿಣದಲ್ಲಿ ನೇಪಾಳ, ಬಾಂಗ್ಲಾ, ಬರ್ಮಾ ಹಾಂಕಾಂಗ್, ಸಿಂಗಾಪುರ್, ಬ್ಯಾಂಕಾಕ್ ಹಾಗೇಯೆ ಜಗತ್ತಿನಲ್ಲಿ ಬಹಿರಂಗವಾಗಿ ವೆಶ್ಯಾವಾಟಿಕೆಯ ತವರೂರಾದ ಥ್ಯಾಯಲಾಂಡ್ ಇದೆ ಅಲ್ಲೇಕೆ ಕರೋನಾ ಹೊಗ್ತಾ ಇಲ್ಲಾ. ಕೇವಲ ಅಮೇರಿಕಾದ ಮಿತ್ರ ರಾಷ್ಟ್ರಗಳಲ್ಲಿ ಏಕೆ ಗೂಟ ಹೊಡೆದು ಕೊಂಡು ಕೂತಿದೆ ?

ಸಧ್ಯ ಜಗತ್ತು ಅಮೇರಿಕ, ರಷ್ಯಾ ಹಾಗೂ ಚೀನಾ ಮುಖಂಡತ್ವದಲ್ಲಿ ಹೊಳಾಗಿ ನಿಂತಿವೆ. ಈ ಮೊದಲು ಮೊದಲನೇ ಹಾಗೂ ಎರಡನೇ ಜಾಗತಿಕ ಯುದ್ಧದಲ್ಲಿ ರಷ್ಯಾ ಮತ್ತು ಚೀನಾ ಮೀತ್ರಪಡೆಗಳ ಗುಂಪಿನಲ್ಲಿದ್ದವು. ಆದ್ರೆ, ಈಗ ಅವು ಪ್ರತ್ಯೆಕವಾಗಿವೆ. ಅಮೇರಿಕಾ ಬಂಡವಾಳ ಶಾಹಿಗಳ ಆದಾರವಾದ ಪ್ರಜಾಪ್ರಭುತ್ವ ಪ್ರತಿನಿಧಿಸಿದರೆ ರಷ್ಯಾ ಹಾಗೂ ಚೀನಾ ಕಮ್ಯುನಿಸ್ಟ್ ವಾದಗಳನ್ನು ಪ್ರತಿನಿಧಿಸಿ, ಕ್ರಮವಾಗಿ ಮಾರ್ಕ್ಸವಾದ ಮತ್ತು ಮಾವೋ ವಾದಗಳಲ್ಲಿ ಹೆಡೆ ಎತ್ತಿ ನಿಂತಿವೆ. ಈ ಮೂರು ದೇಶಗಳು ತಮ್ಮ ವಾದಗಳನ್ನೇ ಒಪ್ಪುತ್ತಿರುವ ದೇಶಗಳ ರಕ್ಷಣೆ ಮತ್ತು ಅವುಗಳ ಆರ್ಥಿಕವಾಗಿ ಬೆಂಬಲಕ್ಕೆ ನಿಂತಿವೆ.

ಇನ್ನೂ ರಾಷ್ಟ್ರ ಸಂಘವನ್ನು ರದ್ದು ಪಡಿಸಿ ಆ ಸ್ಥಳದಲ್ಲಿ ಅಮೇರಿಕಾದ ಮುಂದಾಳತ್ವದಲ್ಲಿದ್ದರೂ UNO ಸ್ಥಾಪನೆಯಾದರೂ ಕೂಡಾ ಕೆಲವೊಮ್ಮೆ ಮಾತಾಡಲು ನಾಚಿಕೆಯ ಸ್ವಭಾವ ತೊರುತ್ತಿದೆ. ದಿಕ್ಕಿಲ್ಲದೇ ಇರುವ ದೇಶಗಳ NATO ಮೂಲಕ ಮೇಲೆ ದಾಳಿ ಮಾಡುತ್ತದೆ ಅದು ಎಂದು ನ್ಯೂಕ್ಲಿಯರ್ ದೇಶ ಕೊರಿಯಾದ ವಿರೂದ್ದ ಎಂದು ತುಟಿ ಬಿಚ್ಚಿಲ್ಲಾ. ಇನ್ನೂ WHO ಇದೇನು ಮಾಡಲು ಸಾಧ್ಯ ? ತನಗೆ ಬೇಕಾದ ದೇಶಗಳ ಪ್ರತಿನಿಧಿಗಳನ್ನು ಕರೆಸಿ ನೆಪಮಾತ್ರಕ್ಕೆ ಮೀಟಿಂಗ್ ಮಾಡಿ ಪತ್ರಿಕಾ ಹೇಳಿಕೆಯನ್ನು ಕೊಟ್ಟುಬಿಟ್ಟರು. ಆದ್ರೆ, ಅದರಲ್ಲಿ ಕರೋನಾ ಪೀಡಿತ ದೇಶಗಳಾದ ಚೀನಾ ಭಾರತ ಇಟಲಿ ಪ್ರತಿನಿಧಿಗಳು ಇರಲಿಲ್ಲಾ. ಹಾಗಾದರೆ, ಈ ಮೀಟಿಂಗ Tea ಬಿಸ್ಕಿತ್ ತಿನ್ನಲು ಮಾಡಿದ ಮೀಟೀಂಗೇ ?

ಇನ್ನು ಮಾಧ್ಯಮದ ಮೂಲಕ ಒಂದನೇ ಹಂತ ಎರಡನೇಯ ಹಂತ ಹೇಳಿಸುತ್ತಾ ಭಾರತ ಈಗ ‘Dangerous Zone’ ನಲ್ಲಿದೆ ಎಂಬ ಹಾವಳಿಯನ್ನು ಎಬ್ಬಿಸಿಬಿಟ್ಟಿವೆ ಒಂದೊಮ್ಮೆ ಮಾಧ್ಯಮದವರು ತಾವೇ ಡಾಕ್ಟರ್ ಅನ್ನೊ ತರಹ ಪ್ರಚಾರ ಮಾಡ್ತಾ ಇವೆ. ಅವು ಒಮ್ಮೆಯೂ ಕೇಂದ್ರ ಸರ್ಕಾರದ ವೈಫಲ್ಯ ದ ಕಡೆಗೆ ಬೊಟ್ಟು ಮಾಡುತ್ತಿಲ್ಲಾ ,ಕೇಂದ್ರದ ನಿರ್ಲಕ್ಷ್ಯ ದಿಂದ ಕೊರೊನ ಬಂತಾ ಅಥ್ವಾ ಅದನ್ನು ಒಳಗೆ ಬಿಟ್ಟುಕೊಂಡದ್ದಾ ? ಅನ್ನೊ ಚರ್ಚೆ ಕೂಡಾ ಮಾಡಲಿಲ್ಲಾ ,ಕೆಲವು ಅಡ್ನಾಡಿ ಚರ್ಚೆಕಾರರನ್ನು ಕರೆಸಿ ಕರೋನಾ ಹಾವಳಿ ಎಬ್ಬಿಸುವದರಲ್ಲಿ ಮುನ್ನುಗ್ಗುತ್ತಿವೆ. ಶ್ರೀಮಂತ ಜನರನ್ನು ವಿಮಾನದ ಮೂಲಕ ಕರೆಸಿಕೊಂಡು ದೇಶದ ಬಡವರನ್ನು ರಸ್ತೆಗೆ ಬಿಟ್ಟು ಬಿಟ್ಟು ಬಿಟ್ಟರು. ಸಾವಿರಾರು ಜನ ಗಂಟು ಮೂಟೆ ಕಟ್ಟಿಕೊಂಡು ಕೂಳು ನೀರಿಲ್ಲದೆ ಎಳೆ ಮಕ್ಕಳು ಗರ್ಭಿಣಿ ಮಹಿಳೆಯರನ್ನು ಕರೆದುಕೊಂಡು ನಡೆದುಕೊಂಡು ತಮ್ಮ ತಮ್ಮ ಊರು ಸೇರಲು ಪಡಬಾರದ ಪಾಡು ಪಡುತ್ತಿವೆ, ಮಾರ್ಗ ಮಧ್ಯೆ ಹಸಿವು ಆಯಾಸ ದಿಂದ ಒಂದಿಷ್ಟು ಸಾವುಗಳೂ ಸಂಭವಿಸುತ್ತಿವೆ, ಒಂದೆಡೆ ಜನತಾ Curfew ಇನ್ನೊಂದೆಡೆ ಸಾವಿರಾರು ಜನಗಳನ್ನು ಏಕ ಕಾಲಕ್ಕೆ ನಗರಗಳಿಂದ ಹೊರಹಾಕುವ ಆದೇಶ ಈ ಹುಚ್ಚು ಆದೇಶಗಳು ಇವುಗಳ ಬಗ್ಗೆ ಯಾವೊಂದೂ ಚರ್ಚೆ ಮಾಡದೇ ಬರೀ ಬೆರೊಬ್ಬರ ಮೇಲೆ ಗುಬೇ ಕೂಡಿಸುತ್ತಿವೆ.

ಕೊರೋನಾ ಜಗತ್ತು ಸುತ್ತು ಹಾಕಿತು ಅಂತಾ ಮಾಧ್ಯಮಗಳು ಮಾತಾಡ್ತಾ ಇದ್ದರೆ, ಒಮ್ಮೆಯೂ ರಷ್ಯಾ ಮತ್ತು ಜಪಾನ್ ಶ್ರೀಲಂಕಾ, ದೇಶಗಳು ಇದರ ಬಗ್ಗೆ ಮಾತಾಡಿಲ್ಲಾ. ಮತ್ತು ಇದರ ಬಗ್ಗೆ ತುಟಿ ಬಿಚ್ಚಲಿಲ್ಲಾ. ಅದೇ ರೀತಿ ದೊರೆತ ಅಂಕಿ ಸಂಖ್ಯೆಗಳಲ್ಲಿಯೂ ಅದರ ಪಟ್ಟಿ ಕೂಡಾ ಲಭ್ಯ ಇದೆ. ಆದ್ರೆ ಅಲ್ಲಿ ಸೊಂಕು ಜನ ಗುಣಮುಖವಾಗಿದ್ದು ಕಂಡು ಬರುತ್ತದೆ. ಆದ್ರೆ ನಮ್ಮ ದೊಡ್ಡ ದೇಶದಲ್ಲಿ ಮಾತ್ರ ಸೊಂಕಿತರ ಸಂಖ್ಯೆ ಹೆಚ್ಚಾಗಿ ಸಿಗುತ್ತಲೇ ಇದೆ. ಆದ್ರೆ ಪಾಸಿಟಿವ್ ಸಂಖ್ಯೆ ಮಾತ್ರ ಕೊಡ್ತಾ ಇಲ್ಲಾ. ಹಾಗಾದರೆ ಇಲ್ಲಿ ಪರೀಕ್ಷೆ ಮಾಡೋದು ಹೇಗೆ ಗೊತ್ತಾ ? ಜ್ವರ ಪರೀಕ್ಷೆಯ ಮಾಪನದಿಂದ ಜ್ವರ ಮಾತ್ರ ಪರೀಕ್ಷೆ ಮಾಡ್ತಾರೆ. ಕೇವಲ ಜ್ವರ ಅಂದ್ರೆ ಸೊಂಕಿತ ಎಂದು ತೀರ್ಮಾನಿಸಿ ಕ್ವಾರೈಂಟೈನಗೆ ತಳ್ಳುತ್ತಾರೆ. ಅಷ್ಟೊತ್ತಿಗೆ ಅವನ ಕ್ವಾರೈಂಟೇನ್ ಅವಧಿ ಮುಗಿಯುತ್ತದೆ. ಆದಾದ ಮೇಲೆ Positive ಅಥ್ವಾ Negative ಎಂಬುದರ ಒಪಿನಿಯನ್ ಬರುತ್ತದೆ, ನೆಗೆಟಿವ್ ಇದ್ದ್ರೆ ಸರಿ ಪಾಸಿಟಿವ್ ಇದ್ದರೆ ಆತನ ಗೆಳೆಯರು ಮನೆ ಮಂದಿಗೆಲ್ಲ ಉಚಿತ ಕರೋನಾ ಪ್ರಸಾದ..

ಮುಂದೊಂದು ದಿನ WHO ಒಂದು ತಿರ್ಮಾನ ತಗೋಳ್ಳೊ ವರೆಗೂ ಲಾಕ್ ಡೌನ್ ಹೀಗೆಯೇ ಮುಂದುವರೆಯುತ್ತದೆ. ಆದ್ರೆ, ಆ WHO ಅಮೇರಿಕಾದ ಮಾತು ಕೇಳಿ ಒಂದು ಆದೇಶ ಮಾಡಿಬಿಡುತ್ತದೆ. ಅಲ್ಲಿಯವರೆಗೆ ನಾವು ಡೆಂಜರ್ ಅನ್ನುತ್ತಾ ಒಂದನೇಯ ಹಂತ, ಎರಡನೇಯ ಹಂತ, ಮೂರನೇಯ ಹಂತ, ನಾಲ್ಕನೇಯ ಹಂತ, ಐದನೇಯ ಹಂತ ಅಂತಾ ಹೇಳುತ್ತಲೇ ಹೋಗುತ್ತವೆ. ಅಷ್ಟೊತ್ತಿಗೆ ಅಮೇರಿಕಾದ ಚುನಾವಣೆ ಬರುತ್ತದೆ. ಅಷ್ಟೊತ್ತಿಗೆ ಮಾಧ್ಯಮ ಚುನಾವಣಾ ಹಿಂದೆ ಬಿಳುತ್ತಾರೆ ನಮ್ಮಲ್ಲಿ ರಾಮನ ಹಿಂದೆ ಬೀಳುತ್ತಾರೆ. ಕೊರೋನಾ 19 ಇತಿಹಾಸದ ಪುಟಗಳಲ್ಲಿ ಸೇರಿ ಮಲೇರಿಯಾ, ಪ್ಲೇಗ್, ಏಡ್ಸ್, HN1-N1 ಸಾಲಿಗೆ ಕೊರೋಣಾ ಸೇರುತ್ತದೆ.

ಈ ಕರೋನಾ ವೈರಸ್ ಕೇವಲ ಅಮೇರಿಕಾದ ಮಿತ್ರ ದೇಶಗಳಲ್ಲಿ ಏಕೇ ತಳಹಿಡಿದು ಕೂತಿದೆ ಅನ್ನೊದಕ್ಕೆ ಜಾಗತೀಕ ಇತಿಹಾಸ ಗೊತ್ತಿದ್ದರೆ ಮಾತ್ರ ತಿಳಿಯುತ್ತದೆ. ಇಲ್ಲಿ ನಾನು ಬರೆದದ್ದು ಇದು ವಾಸ್ತವವೋ, ಸುಳ್ಳೊ ಅಥ್ವಾ ಕಪೋಲಕಲ್ಪಿತವೋ ಅನ್ನೊದು ದೂರದೃಷ್ಟಿ ಉಳ್ಳ ದೇಶವಾಸಿಗಳಿಗೆ ಬಿಡಿಸಿ ಹೇಳಬೇಕಿಲ್ಲ..

ಸುರೇಂದ್ರ ಉಗಾರೆ, ನ್ಯಾಯವಾದಿಗಳು

LEAVE A REPLY

Please enter your comment!
Please enter your name here