ಯಾರು ಹೊಣೆ ?

0
197

Covid 19 Covid 19 ಇದು ತಾನಾಗೇ ಬಂದಿದ್ದಾ ? ಅಲ್ಲ ಕರ್ಕೊಂಡ್ ಬಾಗಿಲಿಗೆ ಬಂದಿದ್ದು, ಬಾಗಿಲು ತೆಗದು ಒಳಗೆ ಬಿಟ್ಕೊಂಡಿದ್ದು .ಯಾರು ಎನೇ ಸಮರ್ಥನೆ ಮಾಡ್ಕೊಂಡ್ರೂ ವಾದ ಮಾಡಿದರೂ ಇದೇ ಸತ್ಯ. ಅಷ್ಟಕ್ಕೂ ಈ ಕರೋನಾ ಎಕಾಏಕಿ ಬಂದಿದ್ದಲ್ಲ ಹೆಚ್ಚೂ ಕಡಿಮೆ ಡಿಸೆಂಬರ್ ನಲ್ಲಿಯೇ ಚೀನಾದಲ್ಲಿ ತನ್ನ ನರ್ತನ ಆರಂಭಿಸಿತ್ತು. ಅದು ಭಾರತವೂ ಸೇರಿದಂತೆ ಜಗತ್ತಿನ ರಾಷ್ಟ್ರಗಳಿಗೆ ಮಾಹಿತಿಯೂ ಇತ್ತು, ಆದರೆ ಎಲ್ಲೋ ಒಂದು ಕಡೆ ಇಡೀ ಜಗತ್ತು ಅದರಿಂದ ನಮಗೇನೂ ತೊಂದರೆ ಇಲ್ಲ ಎನ್ನುವ ರೀತಿಯಲ್ಲಿ ಅಸಡ್ಡೆ ತೋರಿಸಿದವು,(ಬಹುಶಃ ಉದ್ದೇಶ ಪೂರ್ವಕವೂ ಇರಬಹುದು) ಇನ್ನು ಭಾರತವಂತೂ ಕಿಂಚಿತ್ತೂ ಮುಂಜಾಗ್ರತಾ ಕ್ರಮ ಕೈಗೊಳ್ಳಲೇ ಇಲ್ಲ. ದಿನ ಬೆಳಗಾದರೆ ಮಾಧ್ಯಮ ಮತ್ತು ರಾಜಕೀಯ ಪಕ್ಷಗಳಿಗೆ (ಸಗಣಿ, ಗಂಜಲ, etc..) ಅದೊಂದು ಮಸಾಲೆಯುಕ್ತ ಟೈಮ್ ಪಾಸ್ ಅಸ್ತ್ರ ವಾಗಿ ಕಂಡಿತೇ ಹೊರತು ಜನಗಳನ್ನು ಜಾಗೃತಗೊಳಿಸುವ, ಸರ್ಕಾರಗಳನ್ನು ಬಡಿದೆಬ್ಬಿಸುವ ಒಂದು ಸಣ್ಣ ಪ್ರಯತ್ನ ಕೂಡ ಮಾಡಲೇ ಇಲ್ಲ..ಅದರ ಪರಿಣಾಮವೇ ಇವತ್ತೂ ಬಂದ್. ಕರ್ಫ್ಯೂ.144.Sound..ಇವುಗಳಿಂದ ಕೋವಿಡ್ 19 ಸಂಪೂರ್ಣ ನಿಯಂತ್ರಣ ಆಗುತ್ತಾ ? No chance…

ಯಾಕಂದ್ರೆ ಭಾರತದ ಕೋಟ್ಯಾಂತರ ನಿರಕ್ಷರ ಜನ ಬದುಕ್ತ ಇರೋದು ರೇಲ್ವೆ ಸ್ಟೇಷನ್. ಬಸ್ Stand . ದೇವಸ್ಥಾನ ದ ಅಕ್ಕ ಪಕ್ಕ. ಕೊಳಗೇರಿಗಳಲ್ಲಿ.ಅಲ್ಲಿನ ಜನ ಬಹುತೇಕ (ಗುಂಪಾಗಿ) ಪ್ಲಾಸ್ಟಿಕ್.ಪೇಪರ್ ಆಯ್ದು ಬದುಕೋರು. ಭಿಕ್ಷುಕರು. ನಿರ್ಗತಿಕರು, ಅವರ ಅವತ್ತಿನ ಕೆಲಸದಿಂದಲೇ ಅವತ್ತಿನ ತುತ್ತು ಕೂಳು ಸಿಗಬೇಕು ಇಂಥ ಜನಗಳಿಗೆ ಏರಿಯಾಗಳಿಗೆ ಕರೋನಾ ಸೋಂಕು ತಗುಲಿದರೆ ಗತಿ ಏನು ? Just ಕಲ್ಪನೆ ಮಾಡ್ಕೊಳ್ಳಿ…
ಇದನ್ನೆಲ್ಲ ಯೋಚಿಸಬೇಕಾಗಿದ್ದು ಸರ್ಕಾರಗಳು… ಬರೀ ಭಾವನಾತ್ಮಕ ಸಂದೇಶ ಗಳು.ಭಾಷಣಗಳಿಂದ ಯಾವ ರೋಗವೂ ನಿಯಂತ್ರಣವಾಗಲಾರದು ಅದಕ್ಕೆ ವೈಜ್ಞಾನಿಕ ಮತ್ತು ಕ್ಷೀಪ್ರ ಕಾರ್ಯಯೋಜನೆಗಳು ಬೇಕು. ಭಾರತದಂತಹ ಬಡ ರಾಷ್ಟ್ರ ಕ್ಕೆ ( ಮುಂದುವರಿತ್ತಿರುವ.ಪ್ರಗತಿಶೀಲ ಎನಾದ್ರೂ ಕರ್ಕೊಳ್ಳಿ) ಇಂಥ ಮಾರಕ ವೈರಸ್ ಅಪಾಯಕಾರಿ ಎನ್ನುವ ಕಾಳಜಿ ಸರ್ಕಾರಗಳಿಗೆ ಇದ್ದಿದ್ದರೆ ಮೊದಲು ಎಲ್ಲ Airport ಗಳನ್ನು ಸ್ವಾಧೀನಕ್ಕೆ ಪಡೆದು, ಅಂತರಾಷ್ಟ್ರೀಯ ಹಾರಾಟಗಳನ್ನು ಕಡಿಮೆಗೊಳಿಸಿ, Airport ಹತ್ತಿರದಲ್ಲಿರುವ ಕಟ್ಟಡಗಳನ್ನು Hospital ಗಳಾಗಿ ಪರಿವರ್ತಿಸಿ (24×7) ವಿದೇಶದಿಂದ ಬರುವ ಪ್ರತೀ ಪ್ರಯಾಣಿಕರನ್ನು ಕಟ್ಟು ನಿಟ್ಟಾಗಿ ಪರೀಕ್ಷಿಸಿ ಒಳಗೆ ಬಿಟ್ಟುಕೊಂಡಿದ್ದರೆ ? (Ex ಗುಲ್ಬರ್ಗ. ಮಂಗಳೂರು ..) ದೇಶದ ಜನ ಇವತ್ತು ಹೀಗೆ ಆತಂಕದಿಂದ ದಿನ ಕಳೆಯುವ ಪ್ರಮೇಯ ಬರುತ್ತಿತ್ತೆ ?


ಈ ದೇಶದಲ್ಲಿ ಪ್ರತಿಯೊಂದು ವಿಷಯವೂ ಭಾವನಾತ್ಮಕವೇ.even ಒಂದು ಸಾಂಕ್ರಾಮಿಕ ರೋಗ ಕೂಡ ,ಸರೀ ಈ ಕರೋನ ರೋಗ ಒಂದೇ ಭಯಾನಕವೇ ? ಇಲ್ಲ . Covid 19 ನಿಂದ ಮೃತಪಟ್ಟವರ ಸಂಖ್ಯೆ ಎರಡಂಕಿ ದಾಟಿಲ್ಲ ಭಯಪಡಬೇಡಿ.ಭಾರತದಲ್ಲಿ H1N1 ನಿಂದ ಮೃತ ಪಟ್ಟವರ ಸಂಖ್ಯೆ _884, ಮಲೇರಿಯಾದಿಂದ ಮೃತಪಟ್ಟವರ ಸಂಖ್ಯೆ 19500, Dengue ಸೋಂಕಿತರು 20474 ಮೃತಪಟ್ಟವರ ಸಂಖ್ಯೆ 132 , TB ಇಂದ ಮೃತಪಟ್ಟವರ ಸಂಖ್ಯೆ 1.5 ಮಿಲಿಯನ್(2019 ರ ವರೆಗೆ) ಎಲ್ಲದಕಿಂತ ಹೆಚ್ಚಾಗಿ ಹಸಿವಿನಿಂದ ಸಾಯುವವರ ಸಂಖ್ಯೆ ಪ್ರತೀದಿನ ಕನಿಷ್ಠ ಮೂರು ಸಾವಿರ..ಈ ಯಾವ ಸಾವುಗಳಲ್ಲೂ ನಾವು ಭಯ ಪಟ್ಟವರೇ ಅಲ್ಲ ಇವುಗಳ ಬಗ್ಗೆ ಕಾಳಜಿ ಮಾಡಿದವರಲ್ಲ ಯಾಕಂದ್ರೆ ಅವೆಲ್ಲ ನಮಗೆ ಹಳಸಲು. ಈ ಕರೋನಾ ಅನ್ನೋದೂ ಅಷ್ಟೇ ಇನ್ನೊಂದು ವಾರ ಇನ್ನೊಂದಿಷ್ಟು ಹೆಣಗಳು ಬೀಳುವವರೆಗೂ ಅಷ್ಟೇ ಆಮೇಲೆ ಈ ರೋಗ ಕೂಡ ಹಳತಾಗಿ ಹೊಗುತ್ತದೆ. ನಂತರ ಮನೇಲಿರೋ ರೇಷನ್ ಖಾಲಿಯಾಗುತ್ತೆ, ಮಕ್ಕಳಿಗೆ ಹಾಲು ಬಿಸ್ಕೀಟು ಬ್ರೆಡ್ಡು ರೋಗಿಗಳಿಗೆ ಔಷಧಿ ಬೇಕಾಗುತ್ತೆ ಯಾವ ಸರ್ಕಾರ 144 ಯಾವ ಕರ್ಫ್ಯೂಗೂ care ಮಾಡದೆ ಬೀದಿಗೆ ಬರ್ತಿವಿ ಬರಲೇಬೇಕು ಯಾಕಂದ್ರೆ ಎಲ್ಲ ಜೀವಿಗಳಿಗೂ ನಾಳಿನ ಸಾವಿಗಿಂತ ಇವತ್ತಿನ ಹೊಟ್ಟೆ ಹಸಿವು ಮುಖ್ಯ..

ಶ್ರೀ ರವೀಂದ್ರ ಎನ್ ಎಸ್. ಲೇಖಕರು

LEAVE A REPLY

Please enter your comment!
Please enter your name here