Art of Giving ಕಾರ್ಯಕ್ರಮದಲ್ಲಿ ಸೇವೆಯ ಸಂದೇಶ: ಶಾಸಕ ವಿಠ್ಠಲ ಕಟಕಧೊಂಡ

Art of Giving event Vijayapura

ವಿಜಯಪುರ: Art of Giving ಕಾರ್ಯಕ್ರಮದ ಮೂಲಕ ನಮ್ಮ ಕೈಲಾದಷ್ಟು ಸಹಾಯವನ್ನು ಇತರರಿಗೆ ಮಾಡುವ ಸಂಕಲ್ಪ ಮಾಡಬೇಕು ಎಂದು ನಾಗಠಾಣ ಮತಕ್ಷೇತ್ರದ ಶಾಸಕ ವಿಠ್ಠಲ ಕಟಕಧೊಂಡ ಹೇಳಿದರು.

ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ನಲ್ಲಿ Art of Giving ಫೌಂಡೇಶನ್ ಸಹಯೋಗದೊಂದಿಗೆ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಕನ್ನಡ ಭವನದಲ್ಲಿ ಗಣ್ಯರು, ಅಧಿಕಾರಿಗಳು, ಶಿಕ್ಷಣ ತಜ್ಞರು ಹಾಗೂ ವಿದ್ಯಾರ್ಥಿಗಳ ಸಮ್ಮುಖದಲ್ಲಿ ಕಾರ್ಯಕ್ರಮ ಉದ್ಘಾಟಿಸಲಾಯಿತು.

ದೇಶಾದ್ಯಂತ 800ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ನಡೆಯುತ್ತಿರುವ ರಾಷ್ಟ್ರವ್ಯಾಪಿ ಕಾರ್ಯಕ್ರಮದ ಭಾಗವಾಗಿ ಈ ಆಚರಣೆ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವಿಠ್ಠಲ ಕಟಕಧೊಂಡ, ಮಾನವೀಯತೆಗೆ ಸೇವೆ ಸಲ್ಲಿಸುವುದು ವಿಶ್ವದ ಶ್ರೇಷ್ಠ ಭಕ್ತಿ ರೂಪವಾಗಿದೆ ಎಂದು ಹೇಳಿದರು. ಮೂಲಕ ಮಾನವೀಯತೆ ಮತ್ತು ನಿಸ್ವಾರ್ಥ ಸೇವೆಯ ಧ್ಯೇಯವನ್ನು ಜಗತ್ತಿನಾದ್ಯಂತ ಹರಡಿದ ಡಾ. ಅಚ್ಯುತ ಸಮಂತ ಅವರನ್ನು ಶ್ಲಾಘಿಸಿದರು.

2026ರ “Shine to Share” ಥೀಮ್ ಕುರಿತು ಮಾತನಾಡಿದ ಕರ್ನಾಟಕ ರಾಜ್ಯ ಯುವ ಸಂಚಾಲಕಿ ಶಿಫಾ ಜಮಾದಾರ್, ತೆಗೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿ ಹೆಚ್ಚು ಸಂತೋಷವಿದೆ ಎಂದು ಹೇಳಿದರು. ಹಣ ಅಥವಾ ವಸ್ತುಗಳಷ್ಟೇ ಅಲ್ಲದೆ ಪ್ರೀತಿ, ಕಾಳಜಿ ಮತ್ತು ಸಂತೋಷವನ್ನು ಹಂಚಿಕೊಳ್ಳುವುದೇ ನಿಜವಾದ Art of Giving ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರೊ. ವಿಜಯ ಬಿ. ಕೋರಿಶೆಟ್ಟಿ, ವಿದ್ಯಾರ್ಥಿಗಳು ದಯೆ, ಕೃತಜ್ಞತೆ ಮತ್ತು ನಿಸ್ವಾರ್ಥತೆಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಆಟಗಾರರಿಗೆ ವಾಲಿಬಾಲ್ ಕಿಟ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಶಂಕರಗೌಡ ಎಸ್. ಸೋಮನಾಳ, ಇಶಿತಾ ಗುಪ್ತಾ, ಡಾ. ಜಾವೀದ ಜಮಾದಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share the Post:

ಇತ್ತೀಚಿನ ಸುದ್ದಿಗಳು