ವಿಜಯಪುರ: A talented athlete ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಪ್ರತಿಭಾವಂತ ಕ್ರಿಡಾಪಟಿಗಳು ಇದ್ದರು ಅವರಿಗೆ ಸೂಕ್ತ ಮಾರ್ಗದರ್ಶನ ಹಾಗು ತರಬೇತಿ ಕೊರತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಅಲ್ಲದೇ ಪಾಲಕರು ಕ್ರೀಡಾಕೂಟಗಳ ಬಗ್ಗೆ ನಿಲುಕಲು ದೋರಣೆಯಿಂದ ಕ್ರೀಡಾ ಕ್ಷೇತ್ರ ಸಾಧನೆ ಮಾಡದೇ ಸೊರಗುತ್ತಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಂಸ್ಥೆಯ ಸಭಾಂಗಣದಲ್ಲಿ ಹಿಮಾಚಲ ರಾಜ್ಯದ ಕುಲುಮಿನಲ್ಲಿ ನಡೆದ ರಾಷ್ಟ್ರೀಯ ಟೆನಿಸ್ ಬಾಲ್ ಚಾಂಪಿಯನ್ ಸೀಪ್ ದಲ್ಲಿ ಭಾಗವಹಿಸಿ ತೃತೀಯ ಸ್ಥಾನ ಪಡೆದ ಕರ್ನಾಟಕ ರಾಜ್ಯ ತಂಡದ ಮಹಿಳಾ ಆಟಗಾರ್ತಿಯರಿಗೆ ಮತ್ತು ಉತ್ತರ ಕರ್ನಾಟಕ ಬಾಲಕರ ತಂಡ ಆಟಗಾರರಿಗೆ ಮತ್ತು ತಂಡದ ತರಬೇತಿಗಾರರಿಗೆ ಅಭಿನಂದನ ಸಮಾರಂಭವನ್ನು ಕರ್ನಾಟಕ ರಾಜ್ಯ ಮತ್ತು ಉತ್ತರ ಕರ್ನಾಟಕ ಟೆನ್ನಿಸ್ ಬಾಲ್ ಕ್ರೀಕೆಟ ಸಂಸ್ಥೆ ವಿಜಯಪುರ ಹಾಗು ಕನ್ನಡ ಸಾಹಿತ್ಯ ಪರಿಷತ್ತು ವಿಜಯಪುರ. ಲಾಯಿನ್ಸ ಕ್ಲಬ್ ಪರಿವಾರ ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಇದನ್ನೂ ಓದಿ: Vijayapura News | ಸಂಗೀತ ವಿದ್ವಾನ್ ದಿ. ಶ್ರೀಮಂತ ಅವಟಿ ಪುಣ್ಯ ಸ್ಮರಣೆ | ಯುವ ಸಂಗೀತ ಪುರಸ್ಕಾರ 2024
A talented athlete ರಾಜ್ಯ ಟೆನ್ನಿಸ್ ಬಾಲ್ ಕ್ರೀಕೆಟ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಾ ಅಶೋಕ ಜಾಧವ ಮಾತನಾಡಿ ಕ್ರೀಡಾಪಟುಗಳು ತರಬೇತಿಯಲ್ಲಿ ತಲ್ಲಿನರಾಗಿ ತಮ್ಮ ಆತ್ಮ ವಿಶ್ವಾಸದಿಂದ ಕೌಶಲ್ಯಗಳನ್ನು ಸೂಕ್ತ ಸಮಯದಲ್ಲಿ ಪ್ರದರ್ಶನ ಮಾಡುವ ಕ್ಷಮತೆ ಹೊಂದಿದರೆ ಯಶಸ್ಸಿ ಕ್ರೀಡಾಪಟುವಾಗಿ ಯಶಸ್ಸಿ ಹೊಂದಲು ಸಾಧ್ಯ. ತಂಡ ಹೊಂದಾಣಿಕೆ ಇದ್ದಲ್ಲಿ ಗೆಲವು ಸಾಧ್ಯ ಎಂದರು.
ಉತ್ತರ ಕರ್ನಾಟಕ ಟೆನ್ನಿಸ್ ಬಾಲ್ ಕ್ರೀಕೆಟ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಗ ರವಿ ಚವ್ವಾಣ ಮಾತನಾಡಿ ಆಟಗಾರರಲ್ಲಿ ಛಲ ಹಾಗು ಹಂಬಲವಿದ್ದರೆ ಗೆಲವು ಖಚಿತ. ಉತ್ತರ ಕರ್ನಾಟಕ ಭಾಗದ ಆಟಗಾರರು ದೈಹಿಕವಾಗಿ ಸದೃಢರು. ಅವರಿಗೆ ಸರಿಯಾದ ತರಬೇತಿ ಶಿಬಿರದ ಅತ್ಯವಶ್ಯಕತೆ ಇದೆ ಎಂದರು.
ಇದನ್ನೂ ಓದಿ: Vijayapura News | ರಾಷ್ಟ್ರಮಾತೆ ವೀರರಾಣಿ ಕಿತ್ತೂರು ರಾಣಿ ಚನ್ನಮಾಜಿಯವರ 249ನೇ ಜಯಂತ್ಯೋತ್ಸವ
ಮಾಜಿ ಸೈನಿಕ ಅಧಿಕಾರಿ ಸಂಕೇತ ನಾಯಕ. ವಿಶ್ರಾಂತ ದೈಹಿಕ ನಿರ್ದೇಶಕಿ ವಿದ್ಯಾ ಕೋಟೆನ್ನವರ. ಹಾಗೂ ಕೆ ಎಸ್ ಸಿ ಎ ಎಮ್ ಎನ್ ಉಟಗಿ ಮಾತನಾಡಿದರು.ಚಲನಚಿತ್ರ ಮಾಲಿಕ ಹಾಗು ವಿತರಕ ಹಮೀದ ಬೀಳಗಿ .ಸಂಸ್ಥೆಯ ಪದಾಧಿಕಾರಿ ಶಶಿಕಲಾ ಇಜೇರಿ. ನ್ಯಾಯವಾದಿ ಜಾಫರ ಅಂಗಡಿ. ವಿಶ್ರಾಂತ ಸಹಕಾರಿ ನೊಂದಣಾಧಿಕಾರಿ ಚಿದಾನಂದ ನಿಂಬಾಳ. ವೇದಿಕೆಯ ಮೇಲಿದ್ದರು.
ಆಟಗಾರರಾದ ರಾಜೇಶ್ವರಿ ಮಾಗಿ ನಾಯಕಿ. ವೈಷ್ಣವಿ ಬೋವಿ.ಪದ್ಮಶ್ರೀ ಖಂಡೆರಾಜು. ಜಿಲ್ಲಾ ಅಗಸಬಾಳ. ಅಕ್ಷತಾ ಜಾಧವ. ಆಶಾ ಮುಂಗೋವಿ. ಸ್ವಾತಿ ನಾಟಿಕಾರ. ಜಿ ಎಲ್ ಮಾರ್ಗರೆಟ್.ಅಪ್ರೋಜ ಹತ್ತರಕಿಹಾಳ. ವಿದ್ಯಾಶ್ರೀ ಪಾಟೀಲ. ಹಂಸಿಕಾ. ರುಕ್ಮೀಣಿ ಅಗಸರ. ಸುಚಿತ್ರಾ ರಾಠೋಡ. ಮಹಿಂತಾಜ ಹುಲಗೂರ. ಗೌರವಿಸಿ ಪ್ರಮಾಣ ಪತ್ರ ನೀಡಲಾಯಿತು.
ಇದನ್ನೂ ಓದಿ: Vijayapura News | ಗ್ರಂಥಗಳು ಜನಸಾಮಾನ್ಯರನ್ನು ತಲುಪಬೇಕು; ಕಾವ್ಯಶ್ರೀ ಎಸ್. ಸಾವಳಸಂಗ
ಇದೇ ಸಂದರ್ಭದಲ್ಲಿ ತರಬೇತುದಾರ ರಾದ ಚಾಂದವಶೀಮ ಮುಖಾದಾಮ್. ಜಗದೀಶ ದೊಡಮನಿ. ಸೋಮಶೇಖರ ರಾಠೋಡ. ಇವರನ್ನು ಗೌರವಿಸಲಾಯಿತು.ಕೃಷ್ಣ. ಪ್ರೋ ಶಿವಕುಮಾರ ಉಕ್ಕಲಿ. ಪ್ರೋ ಲತಾ ಪಾಟೀಲ. ಜಿ ಎಸ್ ಬಳ್ಳೂರ. ಇಂದುಮತಿ ಕನ್ನೂರ. ಅಪ್ಪು ರಾಠೋಡ. ಹಾಗು ಆರ್ ಕೆ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಾಗೇಶ ಡೋಣೂರ ಹಾಗು ಸೋಮಶೇಖರ ರಾಠೋಡ ಪ್ರಾರ್ಥಿಸಿದರು. ಸುರೇಶ ಬಿಜಾಪುರ ನಿರೂಪಿಸಿದರು.ಅಬ್ಬಾಸ ತಡಲಗಿ ವಂದಿಸಿದರು.






