ವಿಜಯಪುರ : ಸುಪ್ರಸಿದ್ಧ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದ ಪವಾಡ ಬಸವೇಶ್ವರ ದೇಗುಲದ ಬೆಳ್ಳಿ ಮೂರ್ತಿ Silver Idol Theft ಕಳವು ಪ್ರಕರಣವನ್ನು ವಿಜಯಪುರ ಪೋಲೀಸರು ಬೇಧಿಸಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಮೂಲದ ಮೂವರು ಖದೀಮರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಗಳನ್ನು ಗುಜರಾತ್ ಮೂಲದ ಸುರೇಶಕುಮಾರ್ ಶಾಂತಿಲಾಲ ಸೋನಿ (51), ಬ್ರಹ್ಮಾರ್ ಟೋಪಿಯಾ ನೇಟ್ (35) ಮತ್ತು ಇಂದ್ರಜೀತ್ ನೇಟ್ (33) ಎಂದು ಗುರುತಿಸಲಾಗಿದೆ. ಈ ಕುರಿತು ವಿವರಣೆ ನೀಡಿದ ಬೆಳಗಾವಿ ಉತ್ತರ ವಲಯದ ಪೊಲೀಸ್ ಮಹಾ ನಿರೀಕ್ಷಕ ಸಂದೀಪ ಪಾಟೀಲ ಅವರು,
ಬಂಧಿತ ಆರೋಪಿಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ಹಾಗೂ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ, ಕಳೆದ ಜುಲೈ ೫ ರಂದು
ತಡರಾತ್ರಿ ಬಸರಕೋಡದ ಪವಾಡ ಬಸವೇಶ್ವರ ದೇಗುಲಕ್ಕೆ ನುಗ್ಗಿದ್ದ ಕಳ್ಳರು, ಸುಮಾರು 51.22 ಲಕ್ಷ ರೂ. ಮೌಲ್ಯದ 32 ಕೆ.ಜಿ ತೂಕದ ಬೆಳ್ಳಿ ಮೂರ್ತಿಯನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದರು. ಈ ಕೃತ್ಯದ ಕುರಿತು ತನಿಖೆ ತೀವ್ರಗೊಳಿಸಿದ್ದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Silver Idol Theft ದೇಗುಲದಿಂದ ಕದ್ದ ಬೆಳ್ಳಿ ಮೂರ್ತಿಯನ್ನು ಆರೋಪಿಗಳು ಕರಗಿಸಿ ಗಟ್ಟಿಗಳಾಗಿ ಪರಿವರ್ತಿಸಿದ್ದರು. ಸದ್ಯ ಬಂಧಿತರಿಂದ 23 ಕೆ.ಜಿ ಕರಗಿಸಿದ ಬೆಳ್ಳಿ ಗಟ್ಟಿ, 4 ಕೆ.ಜಿ ಮೂರ್ತಿಯ ಕತ್ತರಿಸಿದ ತುಂಡುಗಳು, 67 ಸಾವಿರ ರೂಪಾಯಿ ನಗದು ಹಣ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ಸೇರಿದಂತೆ 52.70 ಲಕ್ಷ ರೂ.ಮೌಲ್ಯದ ವಸ್ತು ಜಪ್ತು ಮಾಡಿಕೊಳ್ಳಲಾಗಿದೆ ಎಂದರು.
ಬಂಧಿತರಾಗಿರುವ ಆರೋಪಿಗಳಿಗೆ ವಿಚಾರಣೆಗೊಳಪಡಿಸಿ ದೇವಸ್ಥಾನದ ಕಳ್ಳತನದ ಕೃತ್ಯವನ್ನು ಒಪ್ಪಿಕೊಂಡಿದ್ದು ಅಲ್ಲದೇ ಆರೋಪಿತರು ಈ ಮೊದಲೇ ಜೂನ್ ೨೦ ರಂದು ಬಸರಕೋಡ ಗ್ರಾಮಕ್ಕೆ ಬಂದು ದೇವಸ್ಥಾನಕ್ಕೆ ಭೇಟಿ ನೀಡಿ ಕಳ್ಳತನದ ಯೋಜನೆ ರೂಪಿಸಿ, ಅದಾದ ನಂತರ ಈ ಕೃತ್ಯ ಎಸಗಿದ್ದಾರೆ ಎಂಬುದು ತಿಳಿದು ಬಂದಿದೆ ಎಂದರು.
ಆರೋಪಿತರು ಕಳ್ಳತನ ಮಾಡಿದ ಬಸವೇಶ್ವರ ಮೂರ್ತಿ ಪೈಕಿ ಮೂರ್ತಿಯ ಪ್ರಮುಖ ಭಾಗವನ್ನು 4 ಭಾಗಗಳಾಗಿ ತುಂಡರಿಸಿ, ಇನ್ನುಳಿದ ಭಾಗವನ್ನು ಕರಗಿಸಿ ಗಟ್ಟುಗಳನ್ನಾಗಿ ಮಾಡಿ ಮಾರಾಟ ಮಾಡಿದ ಬಗ್ಗೆ ಹೇಳಿದ್ದು, ಆ ಪ್ರಕಾರ ತನಿಖೆ ಕೈಕೊಂಡು ಆರೋಪಿತರಿಂದ ಈ ಕೆಳಗಿನಂತೆ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸ್ತುತ ಮೂವರು ಆರೋಪಿತರ ದಸ್ತಗೀರ ಪ್ರಕ್ರಿಯೆ ಕೈಕೊಳ್ಳಲಾಗಿದ್ದು, ತನಿಖೆಯಲ್ಲಿ ಇನ್ನೂ ಕೆಲವು ಆರೋಪಿತರು ಕೃತ್ಯದಲ್ಲಿ ಭಾಗಿಯಾದ ಬಗ್ಗೆ ತಿಳಿದು ಬಂದಿದ್ದು ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದರು.
ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಕಾರ್ಯವನ್ನು ಶ್ಲಾಘಿಸಿ, ಅವರಿಗೆ ಪ್ರಶಂಸನಾ ಪತ್ರಗಳನ್ನು ನೀಡಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮೊದಲಾದ ಪೊಲೀಸ್ ಅಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.






