Suicide: ವಿಜಯಪುರ ಕಬರಸ್ಥಾನದಲ್ಲಿ ವ್ಯಕ್ತಿ ಆತ್ಮಹತ್ಯೆ

Suicide image

ವಿಜಯಪುರ: ನಗರದ ಜಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರು ಉರುಲು ಬಿಗಿದುಕೊಂಡು ಆತ್ಮಹತ್ಯೆ Suicide ಮಾಡಿಕೊಂಡ ಘಟನೆ ಬೆಳಕಿಗೆ ಬಂದಿದೆ.

ಮೃತರನ್ನು ಅಯಾಜ ತಂದೆ ಮೊಹಮ್ಮದ ಇಸಾಕ್ ಮೊಮಿನ (35) ಎಂದು ಗುರುತಿಸಲಾಗಿದೆ. ಇವರು ಮೂಲತಃ ವಿಜಯಪುರದ ಆಸಾರ ಗಲ್ಲಿಯ ನಿವಾಸಿಯಾಗಿದ್ದು, ಪ್ರಸ್ತುತ ಗೊಡಿಹಾಳ ಕಾಲೋನಿಯಲ್ಲಿ ವಾಸವಾಗಿದ್ದರು. ಖಾಸಗಿ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರು ಎನ್ನಲಾಗಿದೆ.

ಪೊಲೀಸ್ ಮಾಹಿತಿ ಪ್ರಕಾರ, ಮೇ 2, 2026ರ ಸಂಜೆ 5 ಗಂಟೆಯಿಂದ ಮೇ 3ರ ಬೆಳಿಗ್ಗೆ 7.35 ಗಂಟೆಯ ಅವಧಿಯಲ್ಲಿ ವಿಜಯಪುರ ನಗರದ ಕನಕದಾಸ ಬಡಾವಣೆಯಲ್ಲಿರುವ ಚಪ್ಪರಬಂದ ಕಬರಸ್ಥಾನದ ಬೇವಿನ ಮರಕ್ಕೆ ಹಗ್ಗದಿಂದ ಉರುಲು ಹಾಕಿಕೊಂಡು ಆತ್ಮಹತ್ಯೆ Suicide ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಈ ಕುರಿತು ಮೃತರ ಪತ್ನಿ ಸುಮೇರಾ ಅಯಾಜ ಮೊಮಿನ (32) ಅವರು ನೀಡಿದ ದೂರಿನ ಮೇರೆಗೆ ಜಲನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 04/2026 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Share the Post:

ಇತ್ತೀಚಿನ ಸುದ್ದಿಗಳು