ಬಸವ ಮ್ಯಾರಾಥಾನ್ ಓಟಗಾರರಿಗೆ ಸನ್ಮಾನ

BasavaJayanti

ವಿಜಯಪುರ : ಬಸವ ಜಯಂತಿ ಉತ್ಸವ ಸಮಿತಿ ಹಾಗೂ ವಿಜಯಪುರ ಜಿಲ್ಲಾಡಳಿತದಿಂದ ನಗರದ ಕಂದಗಲ್ಲ ಹಣಮಂತರಾಯ ರಂಗಮಂದಿರದಲ್ಲಿ ಏಪ್ರಿಲ್ 19, ಮತ್ತು 20ರಂದು ಎರಡು ದಿನಗಳ ಕಾಲ ಹಮ್ಮಿಕೊಂಡಿರುವ ವಿಶ್ವಗುರು ಬಸವಣ್ಣನವರ 893 ನೇ ಜಯಂತಿ ಉತ್ಸವದ ಅಂಗವಾಗಿ ಬಸವ ಜನ್ಮಸ್ಥಳ ಬಸವನಬಾಗೇವಾಡಿಯಿಂದ ವಿಜಯಪುರ ನಗರದ ಬಸವೇಶ್ವರ ವೃತ್ತಕ್ಕೆ ಆಗಮಿಸಿದ ಬೆಂಗಳೂರಿನ ಬಿ ಬಿ ಪಾಟೀಲ ಹಾಗೂ ಡಾ ಮಹಾಂತೇಶ ಪಾಟೀಲ ನೇತೃತ್ವದ ಬಸವ ಓಟ ಮ್ಯಾರಾಥಾನ್ ಬಳಗದವರನ್ನು ಬಸವ ಜಯಂತಿ ಉತ್ಸವ ಸಮಿತಿ ವತಿಯಿಂದ ಸ್ವಾಗತಿಸಲಾಯಿತು.
ಉತ್ಸವ ಸಮಿತಿಯಿಂದ ಬಸವೇಶ್ವರ ಪ್ರತಿಮೆಗೆ ಮಾಲಾರ್ಪಣೇ ಮಾಡಿ ಗೌರವ ಸಲ್ಲಿಸಲಾಯಿತು. ಇದೆ ಸಂದರ್ಭದಲ್ಲಿ ಸಮಿತಿಯಿಂದ ಬಸವ ಓಟದಲ್ಲಿ ಪಾಲ್ಗೊಂಡ ಎಲ್ಲರಿಗೂ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಎಸ್ ಎಚ್ ನಾಡಗೌಡ, ಘನಶಾಮ ತೋಸ್ನಿವಾಲಾ, ಡಾ ರವಿ ಬಿರಾದಾರ, ಅಡಿವೆಪ್ಪ ಸಾಲಗಲ್ಲ, ಸುರೇಶ ಘೊಣಸಗಿ, ಶಿವಾನಂದ ಸಂಕದ, ಪ್ರಭುಗೌಡ ಪಾಟೀಲ, ಮಹಾದೇವಿ ಗೋಕಾಕ, ಭಾರತಿ ಬುಯ್ಯಾರ, ಸಂಗನಬಸಪ್ಪ ಸಜ್ಜನ, ಬಸಯ್ಯ ಹಿರೇಮಠ, ಗಂಗಾಧರ ಸಂಬಣ್ಣಿ ಡಾ ಜೆ ಎಸ್ ಪಾಟೀಲ ಶಕುಂತಲಾ ಮೋಸಲಗಿ, ಉಮೇಶ ವಂದಾಲ, ವಿಜಯಕುಮಾರ ಘಾಟಗೆ, ಬಸನಗೌಡ ಹರನಾಳ,ವಿದ್ಯಾರಣಿ ತುಂಗಳ, ಭಾರತಿ ಪಾಟೀಲ, ಶಾಂತವೀರ ಥಾಲಬಾವಡಿ, ಜಗದೇವ ಸರ‍್ಯವಂಶಿ, ಲಾಯಪ್ಪ ಇಂಗಳೆ, ಕಲ್ಲು ಶಿವಶರಣ, ಶರಣು ಕಿರಣಗಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share the Post:

ಇತ್ತೀಚಿನ ಸುದ್ದಿಗಳು