ವಿಜಯಪುರ : ಫ.ಗು ಹಳಕಟ್ಟಿಯವರ ಮುದ್ರಣಾಲಯದಲ್ಲಿ ಮುದ್ರಣಯಂತ್ರದ ಮೊಳೆ ಜೋಡುವ ಕೆಲಸ ಮಾಡುತ್ತಿದ್ದ ಭೀಮರಾವ ಕುಲಕರ್ಣಿಯವರು ಹಳಕಟ್ಟಿಯವರ ಒಡನಾಟದಿಂದ ಹದಿನೇಳು ಲೇಖನವನ್ನು ಬರೆದರು ಎಂದು ವ್ಹಿ ಡಿ ಐಹೊಳ್ಳಿ ಹೇಳಿದರು.
ನಗರದ ಪಿಡಿಜೆ ಹೈಸ್ಕೂಲ್ ಸಭಾಭವನದಲ್ಲಿ ದಿ. ಶ್ರೀ ಭೀಮರಾವ ಶ್ರೀ. ಕುಲಕರ್ಣಿ ಸ್ಮರಣಾರ್ಥ , ‘ಅಖಿಲ ಭಾರತೀಯ ಸಾಹಿತ್ಯ ಪರಿಷದ್(ರಿ) ವಿಜಯಪುರ ಜಿಲ್ಲಾ ಸಮಿತಿ’ ಆಯೋಜನೆಯ ವಚನ ಪಿತಾಮಹ ಡಾ. ಫ.ಗು ಹಳಕಟ್ಟಿಯವರ ಜೀವನ ದರ್ಶನದ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ ಅವರು ಭೀಮರಾವ ಕುಲಕರ್ಣಿ ಅವರು ಫ.ಗು ಹಳಕಟ್ಟಿಯವರ ನಿಕಟ ಒಡನಾಡಿಗಳು. ಫ.ಗು ಹಳಕಟ್ಟಿಯವರಿಗೆ ಭೀಮರಾವ ಕುಲಕರ್ಣಿ ಅವರ ಮೇಲೆ ಬಹಳಷ್ಟು ನಂಬಿಕೆಯಿತ್ತು. ಒಮ್ಮೆ ಬೇರೊಬ್ಬ ಕೆಲಸಗಾರ ಬೇಕಂತಲೇ ಭೀಮರಾವ ಬಗ್ಗೆ ಹಳಕಟ್ಟಿಯವರಲ್ಲಿ ದೂರು ಹೇಳಿದಾಗ ಹಳಕಟ್ಟಿಯವರು ಅದನ್ನು ನಂಬಲಿಲ್ಲ. ಭೀಮರಾವ ಕುಲಕರ್ಣಿ ಅವರು ಅಷ್ಟೇ ಸ್ವಾಮಿ ನಿಷ್ಠರಾಗಿದ್ದರು ಎಂದು ತಿಳಿಸಿದರು.
ಭಾರತಮಾತೆ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮೂಲಕ ಕಾರ್ಯಕ್ರಮ ಪ್ರಾರಂಭಿಸಲಾಯಿತು. ವಿವೇಕ ಕುಲಕರ್ಣಿ ಅಧ್ಯಕ್ಷತೆ ವಹಿಸಿದ್ದರು. ನಿರೂಪಣೆ – ವಿದ್ಯಾವತಿ ಬೆಣ್ಣೂರ , ಸ್ವಾಗತ – ಶ್ರೀ ಶಿವಾನಂದ ಮುಳವಾಡ , ಪ್ರಾಸ್ತಾವಿಕ – ಶ್ರೀರಂಗ ಕುಲಕರ್ಣಿ , ವಂದನಾರ್ಪಣೆ – ಶ್ರೀಮತಿ ಮಹಾನಂದಾ ಪಾಟೀಲ ನಿರ್ವಹಣೆ ಮಾಡಿದರು. ಇದೇ ಸಂದರ್ಭದಲ್ಲಿ ಇತ್ತಿಚೆಗೆ ಅಗಲಿದ ನಾಡೋಜ ಎಸ್ ಆರ್ ರಾಮಸ್ವಾಮಿ ಅವರಿಗೆ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು..
ಜಿ. ಆರ್ ಕುಲಕರ್ಣಿ , ಗಂಗಾಧರ ಸಾಲಕ್ಕಿ , ಸುಕಾಂತ ಕುಲಕರ್ಣಿ , ಕಲ್ಯಾಣರಾವ ದೇಶಪಾಂಡೆ , ಬಿ ಜೆ ಪುರಾಣಿಕ , ಬಳವಂತ ಕುಲಕರ್ಣಿ , ಶ್ರೀರಂಗ ಪುರಾಣಿಕ , ಸೌಮ್ಯಾ ಕುಲಕರ್ಣಿ , ಸುಭಾಷ ಜಂಬೂರೆ, ಶ್ರೀಮತಿ ವಾಣಿ ಮುಳಸಾವಳಗಿ, ಶ್ರೀಮತಿ ವಿಜಯಲಕ್ಷ್ಮೀ ದಿವಾಣಜಿ, ಡಾ. ಮುಕ್ತಾ ಬನ್ನೂರ ಸೇರಿದಂತೆ ಅನೇಕರು ಉಪಸ್ಥಿತರಾಗಿದ್ದರು.





