Ambedkar Jayanti : ಡಾ.ಬಿ.ಆರ್. ಅಂಬೇಡ್ಕರವರ 134ನೇ ಜಯಂತಿ

Ambedkar Jayanti image

ವಿಜಯಪುರ : ದಿನಾಂಕ 14-04-2025 ರಂದು ವಿಜಯಪುರ ಜಿಲ್ಲಾ ಆಡಳಿತ ವತಿಯಿಂದ Ambedkar Jayanti ಭಾರತ ರತ್ನ ಸಂವಿಧಾನ ಶಿಲ್ಪಿ ವಿಶ್ವ ರತ್ನ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134 ನೇ ಜಯಂತಿ ವಿಜ್ರಂಭಣೆಯಿಂದ ಆಚರಿಸಲಾಗುತ್ತಿದೆ.

ಕಾರ್ಯಕ್ರಮಕ್ಕೆ ಎಲ್ಲಾ ಎಸ್ಸಿ ಎಸ್ಟಿ ನೌಕರರು ಸಮಸ್ವಯ ಸಮಿತಿಯ ಮುಖಂಡರು ಬೆಳಿಗ್ಗೆ. 7.30 ಘಂಟೆಗೆ ಅಂಬೇಡ್ಕರರ ಪುತ್ತಳಿಗೆ ಮಾಲಾರ್ಪಣೆ ಹಾಗೂ ಬುದ್ದ ಪ್ರಾರ್ಥನೆ ಸಲ್ಲಿಸಲಿದ್ದು ನಂತರ ಬೆಳಿಗ್ಗೆ 8-30 ಘಂಟೆಗೆ ಜಲ ನಗರದಲ್ಲಿರುವ ಬುದ್ದ ವಿಹಾರ ದಿಂದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭವ್ಯ ಮೆರವಣಿಗೆ ಜರುಗಲಿದೆ.

ಇದನ್ನೂ ಓದಿ: ವಿಜಯಪುರ : ಇಂಗ್ಲೀಷ್ ಭಾಷೆ ಕುರಿತು ಹೆದರಿಕೆ, ಅಳುಕು ಬೇಡ – ಪ್ರಾಂಶುಪಾಲ ಡಾ. ಎಸ್.ಎಲ್. ಪಾಟೀಲ ಅಭಿಮತ

Ambedkar Jayanti ಬೆಳಿಗ್ಗೆ 10.30 ಘಂಟೆಗೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಭವನದಲ್ಲಿ ಕಾರ್ಯಕ್ರಮ ಮಾಡಲಾಗುತ್ತದೆ. ಎಲ್ಲ ನೌಕರರು ಸರಿಯಾದ ಸಮಯಕ್ಕೆ ಉಪಸ್ಥಿತರಿರುವಂತೆ ಜಿಲ್ಲಾ ಅಧ್ಯಕ್ಷರಾದ ಬಿ.ಎಚ್ ನಾಡಗಿರಿ, ಜಿಲ್ಲಾ ಗೌರವಾಧ್ಯಕ್ಷರಾದ ಬಸವಂತ ಗುಣದಾಳ, ಕೋಶಾಧ್ಯಕ್ಷರಾದ ಮಹೇಶ್ ಹೊನಕಟ್ಟಿ, ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಹೊಸಮನಿ ಹಿರಿಯ ಉಪಾಧ್ಯಕ್ಷರಾದ ರವಿ ಯಲ್ಲಡಗಿ, ಮುದ್ದಣ್ಣ ಬೀಮನಗರ, ವಿಜಯಕುಮಾರ್ ಮುದ್ದೇಬಿಹಾಳ ಮುಂತಾದವರು ಪತ್ರಿಕಾ ಪ್ರಕಟಣೆ ವಿನಂತಿಸಿದ್ದಾರೆ.


Share the Post:

ಇತ್ತೀಚಿನ ಸುದ್ದಿಗಳು