Vijayapura News | ಭಾರತದ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನ | ಡಾ. ಆರ್.ಎಸ್. ಕಲ್ಲೂರಮಠ ಅಭಿಮತ

Constitution of India image
ವಿಜಯಪುರ: Constitution of India ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿಜಯಪುರದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್.ಎಸ್. ಕಲ್ಲೂರಮಠ, ಭಾರತದ ಸಂವಿಧಾನ ವಿಶ್ವದ ಶ್ರೇಷ್ಠ ಸಂವಿಧಾನವಾಗಿದ್ದು, ಇದನ್ನು ಭಾರತದ ಸಂವಿಧಾನ ರಚನಾಕಾರರು ಬಹಳ ದೂರದೃಷ್ಟಿ ಇಟ್ಟುಕೊಂಡು ರಚಿಸಿದ ಸಂವಿಧಾನವಾಗಿದ್ದು, ಇದು ದೇಶದ ಎಲ್ಲ ನಾಗರಿಕರ ಕಲ್ಯಾಣವನ್ನು ಮಾಡುವ ಉದ್ದೇಶ ಹೊಂದಿದೆ ಎಂದು ಹೇಳಿದರು.
ಇದನ್ನೂ ಓದಿ: Vijayapura News | 2023ನೇ ಸಾಲಿನ ತೋಂಟದ ಸಿದ್ಧಲಿಂಗಶ್ರೀ ಪ್ರಶಸ್ತಿ | ರಾಜ್ಯದ ಐದು ಜನರಿಗೆ ಪುರಸ್ಕಾರ
Constitution of India ಸದರಿ ಕಾರ್ಯಕ್ರಮದಲ್ಲಿ ‘ಭಾರತದ ಸಂವಿಧಾನಿಕ ಮೌಲ್ಯಗಳು’ ವಿಷಯ ಕುರಿತು ಡಾ. ಚಿದಾನಂದ ಎಸ್. ಆನೂರ ವಿಶೇಷ ಉಪನ್ಯಾಸ ನೀಡಿ, ಭಾರತವು ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುವ ಸಂಸ್ಕøತಿಯನ್ನು ಹೊಂದಿದ್ದು, ಎಲ್ಲ ನಾಗರಿಕರು ಸಂವಿಧಾನದ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ, ಸಹೋದರತೆ, ಜಾತ್ಯಾತೀತತೆ ಮುಂತಾದ ಮೌಲ್ಯಗಳನ್ನು ತಮ್ಮ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಂಡು ರಾಷ್ಟ್ರೀಯ ಹಿತಸಕ್ತಿಗಳ ರಕ್ಷಣೆ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಶ್ರಮಿಸುವುದು ಅವಶ್ಯವಾಗಿದೆ ಎಂದು ತಿಳಿಹೇಳಿದರು.
ಕಾರ್ಯಕ್ರಮದಲ್ಲಿ ಡಾ. ರಾಜಶೇಖರ ಬೆನಕನಹಳ್ಳಿ ಎಲ್ಲ ವಿದ್ಯಾರ್ಥಿನಿಯರು ಹಾಗೂ ಕಾಲೇಜಿನ ಬೋಧಕ-ಬೋಧಕೇತರ ಸಿಬ್ಬಂದಿಯವರಿಗೆ ಸಂವಿಧಾನ ಪೀಠಿಕೆ ಬೋಧಿಸಿದರು. ಸಂವಿಧಾನ ದಿನ ಆಚರಣೆ ನಿಮಿತ್ತ ಕಾಲೇಜಿನಲ್ಲಿ ಹಮ್ಮಿಕೊಂಡ ಪ್ರಬಂಧ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಲಾಯಿತು.
ಇದನ್ನೂ ಓದಿ: Vijayapura News | ಕರ್ನಾಟಕ ರಾಜ್ಯ ಟೆನ್ಸಿಸಬಾಲ್ ಕ್ರಿಕೇಟ್ ತಂಡದ ಆಯ್ಕೆ ಟ್ರಯಲ್ಸ
ಕಾರ್ಯಕ್ರಮದಲ್ಲಿ ಪ್ರೊ. ಪಿ.ಬಿ. ಬಿರಾದಾರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಡಾ. ಭಾರತಿ ಹೊಸಟ್ಟಿ, ಪ್ರೊ. ಎಂ.ಆರ್. ಜೋಶಿ, ಡಾ. ಆನಂದ ಕುಲಕರ್ಣಿ, ಪ್ರೊ. ರಮೇಶ ಬಳ್ಳೊಳ್ಳಿ, ಡಾ. ರಾಘವೇಂದ್ರ ಗುರ್ಜಾಲ, ಡಾ. ಎಂ.ಆರ್. ಕೆಂಭಾವಿ, ಪ್ರೊ. ಲಕ್ಷ್ಮೀ ಮೋರೆ, ಡಾ. ಅನಂತ ಪದ್ಮನಾಭ, ಪ್ರೊ. ಆಸೀಫ ರೋಜಿನದಾರ, ಡಾ. ಶಕೀರಾಬಾನು ಕಿತ್ತೂರ, ಪ್ರೊ. ಮಂಜುನಾಥ ಗಾಣಿಗೇರ, ಪ್ರೊ. ತೌಸಿಫ ಗೊಡೆಸವಾರ, ಡಾ. ರಾಮಣ್ಣ ಕಳ್ಳಿ, ಶಿವಾನಂದ ಸಾಂಗೋಲಿ, ವೀರನಗೌಡ ಪಾಟೀಲ, ನವೀನಗೌಡ ಬಿರಾದಾರ, ಸುಜಾತಾ ಬಿರಾದಾರ ಹಾಗೂ ಕಾಲೇಜಿನ ಇತರ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.


Share the Post:

ಇತ್ತೀಚಿನ ಸುದ್ದಿಗಳು