ವಿಜಯಪುರ: ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ಹಾಗೂ ವೀರ ಕನ್ನಡಿಗರ ಸೇನೆ ರಾಜ್ಯ ಹಾಗೂ ಬೀದರ ಜಿಲ್ಲಾ ಘಟಕ ವತಿಯಿಂದ ನವೆಂಬರ 29 ರಂದು ಬೀದರ ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರು ಜಿಲ್ಲಾ ರಂಗಮಂದಿರದಲ್ಲಿ 69 ನೇ ಕರ್ನಾಟಕ ರಾಜ್ಯೋತ್ಸವ ಗಡಿ ಕನ್ನಡಿಗರ ಕಾರ್ಯಕ್ರಮದಲ್ಲಿ ಅಂತರಾಷ್ಟೀಯ ಕ್ರೀಡಾ ತರಬೇತಿದಾರ ಶ್ರೀ ಬಸವರಾಜ ನಂ ಬಾಗೇವಾಡಿ ಇವರಿಗೆ ಕರ್ನಾಟಕ ರಾಜ್ಯೋತ್ಸವ ರತ್ನ Karnataka Rajyotsava Ratna ರಾಜ್ಯ ಮಟ್ಟದ ಪ್ರಶಸ್ತಿ ಪ್ರಧಾನ ಮಾಡಲಾಗುವುದು.
ಇದನ್ನೂ ಓದಿ: Vijayapura News | ಮಹಿಳಾ ವಿವಿಯಲ್ಲಿ 18ನೇ ಅಂತರ ಮಹಿಳಾ ಮಹಾವಿದ್ಯಾಲಯಗಳ ಅಥ್ಲೇಟಿಕ್
ಕಳೆದ 30 ವರ್ಷಗಳಿಂದ ಕ್ರೀಡಾಕ್ಷೇತ್ರದಲ್ಲಿ ಸೇವೆಯನ್ನು ಪರಿಗಣಿಸಿ ಇಲ್ಲಿವರೆಗೆ ವಿವಿಧ ಸಂಘ ಸಂಸ್ಥೆಯವರು 3 ಜಿಲ್ಲಾ ಪ್ರಶಸ್ತಿ, 69 ರಾಜ್ಯ ಪ್ರಶಸ್ತಿಗಳು, 33 ರಾಷ್ಟೀಯ ಪ್ರಶಸ್ತಿ, 16 ಅಂತರಾಷ್ಟೀಯ ಪ್ರಶಸ್ತಿಗಳು, 11 ವಿಶೇಷ ಪ್ರಶಸ್ತಿಗಳು ಹಾಗೂ 9 ಗಿನ್ನಿಸ ಪ್ರಶಸ್ತಿ ಇವರ ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗೆ ದೊರಕಿದ್ದು ಈ ವರ್ಷ ನಮ್ಮ ಸಂಸ್ಥೆಯಿಂದ ಕರ್ನಾಟಕ ರಾಜ್ಯೋತ್ಸವ ರತ್ನ Karnataka Rajyotsava Ratna ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಯಂದು ಪತ್ರಿಕಾ ಪ್ರಕಟಣೆಯಲ್ಲಿ ವಿಶ್ವ ಕನ್ನಡಿಗರ ಸಂಸ್ಥೆ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಸುಬ್ಬಣ್ಣ ಕರಕನಳ್ಳಿ ತಿಳಿಸಿದ್ದಾರೆ.






