Vijayapura News | ದಾಸ ಸಾಹಿತ್ಯದ ಕೊಡುಗೆ ಅಪಾರ – ಸೋಮೇಶ್ವರ ಮಹಾಸ್ವಾಮೀಜಿ

ದಾಸ ಸಾಹಿತ್ಯ image

ವಿಜಯಪುರ: 14-15 ನೇ ಶತಮಾನದಲ್ಲಿ ಕನ್ನಡ ಸಾಹಿತ್ಯದಲ್ಲಿ ದಾಸ ಸಾಹಿತ್ಯ ತನ್ನ ಪರಾಕಾಷ್ಠೆಯನ್ನು ಮೆರೆಯುವ ಮೂಲಕ ಸಮಾಜದ ಅನಿಷ್ಟ ಪದ್ಧತಿಗಳನ್ನು ಕಿತ್ತೊಗೆದ ಶ್ರೇಷ್ಠ ಸಾಹಿತ್ಯವಾಗಿದೆ. ಕನ್ನಡಕ್ಕೆ ದಾಸ ಸಾಹಿತ್ಯದ ಕೊಡುಗೆ ಅಪಾರ ಎಂದು ಮಕಣಾಪುರ ಗುರುಪೀಠದ ಪ.ಪೂ ಸೋಮೇಶ್ವರ ಮಹಾಸ್ವಾಮಿಗಳು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಜರುಗಿದ ಪ್ರೋ. ಬಿ.ಬಿ.ನಾಡಗೌಡ ದತ್ತಿ, ದತ್ತಿ ದಾನಿಗಳು ಶ್ರೀ ನಾಡಗೌಡ ಮನೆತನ ವಿಜಯಪುರ. ವಿಷಯ: ಕನ್ನಡ ಸಾಹಿತ್ಯಕ್ಕೆ ದಾಸ ಸಾಹಿತ್ಯದ ಕೊಡುಗೆ. ದಿ.ಸಂಗಪ್ಪ ಮ. ಕಮದಾಳ ದತ್ತಿ .ದತ್ತಿ ದಾನಿಗಳು: ಶಶಿಕಲಾ ಹುಡೇದ, ವಿಜಯಪುರ. ವಿಷಯ: ಕನಕದಾಸರ ಸಾಹಿತ್ಯದ ಪ್ರಚಾರ ಕುರಿತು. ಗೋಷ್ಠಿಯನ್ನು ಹಿರಿಯ, ಪೂರ್ವಜರ ಭಾವಚಿತ್ರಗಳಿಗೆ ಪುಷ್ಪ ಸಮರ್ಪಣೆ ಮಾಡುವ ಮೂಲಕ ಉದ್ಘಾಟಿಸಿ ಆಶೀರ್ವಚನ ನೀಡಿದ ಪರಮಪೂಜ್ಯರು ದಾಸವರೇಣ್ಯರು ಸಮಾಜಕ್ಕೆ ಬಹುದೊಡ್ಡ ಕೊಡುಗೆ ನೀಡಿ ಹೋಗಿದ್ದಾರೆ ಎಂದರು.

ಇದನ್ನೂ ಓದಿ: Vijayapura News | ದಿ ಪ್ರೆಸಿಡೆನ್ಸಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ದೀಪದಾನ ಸಮಾರಂಭ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ನ್ಯಾಯವಾದಿಗಳಾದ ಕೆ.ಎಫ್.ಅಂಕಲಗಿಯವರು ಮಾತನಾಡುತ್ತಾ, ವಿಜಯಪುರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಇಂದು ಕಲೆ, ಸಾಹಿತ್ಯ ಸಂಗೀತ ಹಾಗೂ ಸಾಂಸ್ಕøತಿಕ ಲೋಕವನ್ನು ಶ್ರೀಮಂತಗೊಳಿಸುವ ಕಾರ್ಯವನ್ನು ಅತ್ಯಂತ ಕ್ರಿಯಾಶೀಲವಾಗಿ ಮಾಡುತ್ತಿರುವುದು ನಮಗೆಲ್ಲ ಅಭಿಮಾನದ ಸಂಗತಿ ಎಂದರು.

“ಕನ್ನಡ ಸಾಹಿತ್ಯಕ್ಕೆ ದಾಸ ಸಾಹಿತ್ಯದ ಕೊಡುಗೆ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ವಿಜಯಪುರ ತಾಲೂಕಾ ಕ.ಸಾ.ಪ ಅಧ್ಯಕ್ಷರಾದ ಡಾ ಆನಂದ ಕುಲಕರ್ಣಿಯವರು ಮಾತನಾಡುತ್ತಾ, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಇವೆರಡು ಕನ್ನಡ ಸಾಹಿತ್ಯದ ಎರಡು ಕಣ್ಣುಗಳಿದ್ದಂತೆ ಎನ್ನುತ್ತಾ, ಹರಿದಾಸರು ಕರ್ನಾಟಕ ಸಂಗೀತಕ್ಕೆ ಶ್ರೀಮಂತ ಕೊಡುಗೆ ನೀಡುವ ಮೂಲಕ ಕರ್ನಾಟಕದ ಧಾರ್ಮಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದ ಕೀರ್ತಿ ದಾಸರಿಗೆ ಸಲ್ಲುತ್ತದೆ ಎಂದರು.

ಇದನ್ನೂ ಓದಿ: Vijayapura News | ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ಸ್ನಾತಕೋತ್ತರ ಪ್ರವೇಶಾತಿ ಆರಂಭ | ಅರ್ಜಿ ಆಹ್ವಾನ

“ಸಂತ ಕನಕದಾಸರ ಸಾಹಿತ್ಯದ ಪ್ರಚಾರ ಕುರಿತು” ಉಪನ್ಯಾಸ ನೀಡಿದ ಖ್ಯಾತ ತತ್ವಪದ ಗಾಯಕರೂ, ಶಿಕ್ಷಕರಾದ ಮಹೆತಾಬ ಕಾಗವಾಡ ಮಾತನಾಡುತ್ತಾ, “ತನು ನಿನ್ನದು ಈ ಮನ ನಿನ್ನದು” ಎಂಬ ಕನಕದಾಸರ ಕೀರ್ತನೆಯ ಸಾಲುಗಳನ್ನು ಸುಶ್ರಾವ್ಯವಾಗಿ ಹಾಡುತ್ತಾ, ಹುಟ್ಟಿಸಿದ ದೇವರು ಹುಲ್ಲು ಮೇಯಿಸುವನೇ ಎಂದು ಕೇಳುತ್ತಾ, ತಲ್ಲಣಿಸದಿರು ಕಂಡೆ ತಾಳು ಮನವೇ ಎಂಬ ಕೀರ್ತನೆಯ ಸಂದೇಶವನ್ನು ಸರಳವಾಗಿ ವಿವರಿಸುತ್ತಾ, ಕನಕದಾಸರ ಸಾಹಿತ್ಯಕ ಕೃತಿಗಳಾದ ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯ ಚರಿತೆ, ಮೋಹನ ತರಂಗಿಣಿ ಎಂಬ ಕೃತಿಗಳನ್ನು ರಚಿಸುವ ಮೂಲಕ ಅವರೊಬ್ಬ ಶ್ರೇಷ್ಠ ಕವಿಗಳೂ ಸಹ ಆಗಿದ್ದರೆಂದು ತಿಳಿಸುತ್ತಾ ಅವರ ಸಾಹಿತ್ಯವನ್ನು ಪರಿಚಯಿಸಿಕೊಟ್ಟರು.

ವೇದಿಕೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ದಾಕ್ಷಾಯಿಣಿ ಹುಡೇದ ಮಾತನಾಡಿ ಸಂತ ಕನಕದಾಸರು ಕ್ರಾಂತಿಕಾರಿ ಕೀರ್ತನಕಾರರಾಗಿ ಅತ್ಯಂತ ಗಟ್ಟಿಯಾದ ಸಾಹಿತ್ಯ ರಚಿಸಿ ನಮ್ಮೆಲ್ಲರಿಗೂ ಚಿಂತನೆಯಲ್ಲಿ ತೊಡಗಿಸುವಲ್ಲಿ ಕಾರಣೀಕರ್ತರಾಗಿ ಹೋಗಿದ್ದಾರೆ ಎಂದರು.

ಇದನ್ನೂ ಓದಿ: Vijayapura News | ರೈತರ ವಿವಿಧ ಬೇಡಿಕೆ | ಭಾರತೀಯ ಕಿಸಾನ್ ಸಂಘ ಹೋರಾಟ

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಶಿವಯೋಗಿ ನಾಡಗೌಡ, ಸುವರ್ಣ ಸಂಗಪ್ಪ ಕಮದಾಳ, ಶ್ರೀಕಾಂತ ನಾಡಗೌಡ, ವಿಜಯಲಕ್ಷ್ಮಿ ಹುಡೇದ ಉಪಸ್ಥಿತರಿದ್ದರು. ಶಿಲ್ಪಾ ಭಸ್ಮೆ ನಿರೂಪಿಸಿದರು. ಮಹಮ್ಮದ್ ಗೌಸ ಹವಾಲ್ದಾರ ಸ್ವಾಗತಿಸಿ ಗೌರವಿಸಿದರು. ಗೌರವ ಕಾರ್ಯದರ್ಶಿ ಡಾ. ಮಾಧವ ಗುಡಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಗೌರವ ಕಾರ್ಯದರ್ಶಿ ಸುರೇಶ ಜತ್ತಿ ವಂದಿಸಿದರು.

ಕಸಾಪ ಅಧ್ಯಕ್ಷ ಹಾಸಿಂಪೀರ ವಾಲಿಕಾರ ಪದಾಧಿಕಾರಿಗಳಾದ ರಾಜೇಸಾಬ ಶಿವನಗುತ್ತಿ, ಜಯಶ್ರೀ ಹಿರೇಮಠ, ವಿಜಯಲಕ್ಷ್ಮಿ ಹಳಕಟ್ಟಿ., ಅಬ್ದುಲರಜಾಕ ಮುಲ್ಲಾ, ಆಶಾ ಬಿರಾದಾರ, ಬಿ ಎಮ್ ಆಜೂರ, ಎಸ್ ಎಲ್ ಇಂಗಳೇಶ್ವರ, ಗಂಗಮ್ಮ ರಡ್ಡಿ, ಶಿವಾಜಿ ಮೊರೆ, ಸಿದ್ರಾಮಪ್ಪ ಜಂಗಮಶೆಟ್ಟಿ, ಅರ್ನಜು ಶಿರೂರ, ಅನಸೂಯ ದೊಡಮನಿ, ಪ್ರಮೋದಕುಮಾರ ಮಠಪತಿ, ಎಮ್ ಎನ್ ಪಠಾಣ, ಎ ಎ ಕೆಂಬಾವಿ, ಸಿ ಎಸ್ ಕಣಕಾಲಮಠ, ಎಮ್ ಎಚ್ ಬೀಳಗಿ, ಲಕ್ಷ್ಮಿ ಬಿರಾದಾರ, ಭಾಗಿರಥಿ ಸಿಂಧೆ, ವಿ ಎಮ್ ಕೋಪ್ಪದ, ಶೈಲಜಾ ನಾಡಗೌಡ, ಎ ಜಿ ಸಿತಾಳೆ, ಮುಂತಾದವರು ಉಪಸ್ಥಿತರಿದ್ದರು.


Share the Post:

ಇತ್ತೀಚಿನ ಸುದ್ದಿಗಳು