ವಿಜಯಪುರ: 12ನೇ ಶತಮಾನದ ಬಸವಾದಿ ಶರಣರು ಭೌತಿಕ, ಅಧ್ಯಾತ್ಮಿಕ, ಸತ್ಯ ತತ್ವಗಳನ್ನು ಸಾಮರಸ್ಯಗೊಳಿಸಿ ಇಹಪರ ಎಂಬ ಅಖಂಡ ಪರಿಪೂರ್ಣ ನಿತ್ಯ ಸತ್ಯ ಬದುಕಿನ ಶಿವಪಥವನ್ನು ಲೋಕಕ್ಕೆ ನೀಡಿದ ಮಹಾಂತರವರು ಅಂತಹ ಸತ್ಯ ಶುದ್ಧ ಕಾಯಕದಿಂದ ನೆಮ್ಮದಿ, ಸಂತೃಪ್ತಿ ಭಾವ ನೀಡುವುದು ಎಂದು ಉಪನ್ಯಾಸಕ ವಿ.ಎನ್. ಕುಂಟೋಜಿ ಶಿವಾನುಭವ ಗೋಷ್ಠಿ ಯಲ್ಲಿ ಹೇಳಿದರು.
ನಗರದ ವೀರಶೈವ ಲಿಂಗಾಯತ ಸಭಾಭವನದಲ್ಲಿ ಏರ್ಪಡಿಸಿದ ಮಾಸಿಕ ಶಿವಾನುಭವ ಗೋಷ್ಠಿಯಲ್ಲಿ ಶಿವಶರಣೆ ಅಯ್ದಕ್ಕಿ ಲಕ್ಕಮ್ಮನವರ ಅನುಭಾವ ಕುರಿತು ಅವರು ಮಾತನಾಡಿದರು.
ಇದನ್ನೂ ಓದಿ: Vijayapura News | ಡೋಣಿ ನದಿ ಹೂಳೆತ್ತುವ ಕಾಮಗಾರಿಗೆ ಅನುದಾನ ಬಿಡುಗಡೆ ಮಾಡಲಿ – ಸಂಸದ ರಮೇಶ ಜಿಗಜಿಣಗಿ
ಶಿವಾನುಭವ ಗೋಷ್ಠಿ ಯಲ್ಲಿ ಶಿವಶರಣೆ ಆಯ್ದಕ್ಕಿ ಲಕ್ಕಮ್ಮ ನಿಸ್ವಾರ್ಥ ಬದುಕನ್ನು ಬಾಳಿ ತತ್ವ ಆದರ್ಶಗಳಿಂದ ನಿಡುದಂತೆ ನಡೆದವರು. ನಿಷ್ಠೆ, ಭಕ್ತಿ, ಶೃದ್ದೆ ಪ್ರಾಮಾಣಿಕತೆಯಿಂದ ಅಕ್ಕಿಯನ್ನು ಆಯ್ದುಕೊಂಡು ತಂದು ದಾಸೋಹ ಪ್ರಸಾದವನ್ನು ಎಲ್ಲ ಭಕ್ತ ಶರಣರಿಗೆ ಉಣಬಡಿಸಿದವಳು. ಅಮರೇಶ್ವರ ಲಿಂಗ ಅಂಕಿತನಾಮ ಇಟ್ಟುಕೊಂಡು ರಚಿಸಿದಂತಹ 25 ವಚನಗಳು ಮಾತ್ರ ದೊರೆತಿವೆ. ಅವೆಲ್ಲವೂ ಸಮಾಜದ ಒಳತಿಗಾಗಿ ಆಚಾರ-ವಿಚಾರದಿಂದ ಕೂಡಿದಂತಹವವು. ಆಯ್ದಕ್ಕಿ ಲಕ್ಕಮ್ಮನವರ ವಚನಗಳು ಶ್ರೇಷ್ಠ ಅಮೃತ ನುಡಿ ಅವುಗಳನ್ನು ಅವರ ಆದರ್ಶಗಳನ್ನು ನಾವು ಜೀವನದಲ್ಲಿ ಅಳವಡಿಸಿಕೊಳ್ಳ ಬೇಕಾಗಿದೆ ಎಂದರು.
ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾಧ್ಯಕ್ಷ ವಿ. ಸಿ. ನಾಗಠಾಣ ಮಾತನಾಡಿ ಶರಣರ ಚಿಂತನೆಗಳನ್ನು ಕೇಳಿ ಭಾಗಿಯಾಗುವುದರ ಮೂಲಕ ಶವಶರಣೆ ಆಯ್ದಕ್ಕಿ ಲಕ್ಕಮ್ಮನವರ ಆಚಾರ ವಿಚಾರ ಅನುಭವ ತತ್ವಗಳನ್ನು ತಮ್ಮ ಜೀವನುದ್ದಕ್ಕೂ ಅಳವಡಿಸಿಕೋಂಡು ಬಸವಣ್ಣನವರ ಪ್ರೀತಿಗೆ ಪಾತ್ರರಾಗಿ ಸತ್ಯ ಶುದ್ದ ಕಾಯ ಮಾಡಿ ಸರಳ ಸುಂದರ ವಚನಗಳನ್ನು ರಚಿಸಿದಂತವರು ನಾವು ಅವುಗಳನ್ನು ತಿಳಿದುಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.
ಇದನ್ನೂ ಓದಿ: Vijayapura News | ಆಂಗ್ಲ ಮಾಧ್ಯಮ ಮೌಲಾನ ಅಜಾದ್ ಶಾಲೆಯನ್ನು ರದ್ದುಪಡಿಸಿದ್ದಕ್ಕಾಗಿ ಕೆ.ಆರ್.ಎಸ್. ಪಕ್ಷದಿಂದ ಹೋರಾಟ
ಸಹದೇವ ನಾಡಗೌಡರ ಮಾತನಾಡಿ ಬಸವ ಧರ್ಮದಲ್ಲಿ ಗುರುವಿಗೆ ಅತ್ಯಂತ ಪೂಜ್ಯನೀಯ ಸ್ಥಾನವಿದೆ ಭಕ್ತರ ಕಣ್ಣಿಗೆ ಕಾಣದ ದೇವರೆಂದರೆ ಗುರು ಭಕ್ತರು ಗುರುವನ್ನೇ ದೇವರೆಂದು ಶೃದ್ಧೆ ಭಕ್ತಿ ಪೂಜ್ಯ ಭಾವದಿಂದ ನಾವು ಲಿಂಗಪೂಜೆಯ ಮುಲಕ ಗುರುವನ್ನು ಕಾಣಬಹುದು ಎಂದರು
ಶರಣೆ ಅಕ್ಕಮಹಾದೇವಿ ಬುರ್ಲಿ ಅಂಕಲಗಿ ದಂಪತಿಗಳು ನೂತನ ಬ್ಯಾಕೋಡ ಶಾರದಾ ಸೋಮಶೇಖರ ಕುಲ್ಲೆ ದೊಡ್ಡಣ್ಣ ಭಜಂತ್ರಿ ಮಲ್ಲಿಕಾರ್ಜುನ ಅಮರಣ್ಣವರ ಮಹಾದೇವ ಹಾಲಳ್ಳಿ ಅಮರೇಶ ಸಾಲಕ್ಕಿ ಪರಶುರಾಮ ಪೋಳ ಶಿವಪುತ್ರ ಪೋಳ ಬಿ. ಟಿ. ಈಶ್ವರಗೊಂಡ ಎಸ್ ವಾಯ್ ಗದಗ ಉಪಸ್ಥಿತರಿದ್ದರು ಸಾಹಿತಿ ಸಂಗಮೇಶ ಬದಾಮಿ ಕಾರ್ಯಕ್ರಮ ನಿರ್ವಹಿಸಿದರು ಎಂ ಜಿ ಯಾದವಾಡ ಸ್ವಾಗತಿಸಿದ್ದರು ವಿಠ್ಠಲ ತೇಲಿ ವಂದಿಸಿದರು.






