Vijayapura News | ಗ್ರಂಥಗಳು ಜನಸಾಮಾನ್ಯರನ್ನು ತಲುಪಬೇಕು; ಕಾವ್ಯಶ್ರೀ ಎಸ್. ಸಾವಳಸಂಗ

ಗೋಧೂಳಿ ಗಂಧ image

ವಿಜಯಪುರ: ಬಾಲಿಕೆಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಹಾಗೂ ಸಾಹಿತಿ ಡಾ. ಸಿದ್ದು ಸಾವಳಸಂಗ ಅವರು ಸ್ವಂತ ಮನೆಯಲ್ಲಿ ಇಂದು ಕಾರ್ಯಕ್ರಮವನ್ನು ಏರ್ಪಡಿಸಿ, ಸರಳ ಹಾಗೂ ವಿರಳ ಸಮಾರಂಭದ ಮೂಲಕ ತಮ್ಮ ಮೂರನೇ ಕವನ ಸಂಕಲನ “ಗೋಧೂಳಿ ಗಂಧ” ವನ್ನು ಬಿಡುಗಡೆ ಮಾಡಿದರು.

ಇದನ್ನೂ ಓದಿ: Vijayapura News | ಹರಳಯ್ಯ ಸಮಾಜದ ಮಾಹಿತಿ ಸಂಗ್ರಹಣೆ ಕಾರ್ಯಕ್ರಮ

ಗೋಧೂಳಿ ಗಂಧ ಪುಸ್ತಕ ಬಿಡುಗಡೆ ಮಾಡಿ “ಗ್ರಂಥಗಳು ಅಮೂಲ್ಯ ಸಂಪತ್ತು ಇದ್ದಂತೆ. ಸಹೃದಯ ಓದುಗರು ಅವುಗಳನ್ನು ಕೊಂಡು ಓದಿ, ಲೇಖಕರಿಗೆ ಪ್ರೋತ್ಸಾಹಿಸಿ ತನ್ಮೂಲಕ ಕನ್ನಡ ಸಾಹಿತ್ಯವನ್ನು ಬೆಳೆಸಬೇಕು. ಕವಿ ಬರೆದ ಕೃತಿಗಳು ಜನಸಾಮಾನ್ಯರನ್ನು ತಲುಪಿದಾಗ ಕವಿಯ ಬರವಣಿಗೆಯ ಶ್ರಮ ಸಾರ್ಥಕವಾಗುತ್ತದೆ” ಎಂದು ಕಾವ್ಯಶ್ರೀ ಎಸ್.ಸಾವಳಸಂಗ ಹೇಳಿದರು. ಕೃತಿಯ ಲೇಖಕ ಡಾ. ಸಿದ್ದು ಸಾವಳಸಂಗ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮನೆಯ ಸದಸ್ಯರಾದ ಶ್ರೀಮತಿ ಭಾರತಿ ಸಾವಳಸಂಗ, ಡಾ. ಸಿದ್ದು ಸಾವಳಸಂಗ, ಕಾವ್ಯಶ್ರೀ ಎಸ್. ಸಾವಳಸಂಗ ಭೀಮರಾಯ ಸಾವಳಸಂಗ ಹಾಗೂ ಕಾರ್ತಿಕ ತೊರವಿ ಮತ್ತಿತರರು ಭಾಗವಹಿಸಿದ್ದರು.


Share the Post:

ಇತ್ತೀಚಿನ ಸುದ್ದಿಗಳು