Vijayapura News | ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ದಿ. 20 ರಂದು ಜಿಲ್ಲಾ ಸಮಾವೇಶ

Government Retired Employees Association image
ವಿಜಯಪುರ: Government Retired Employees Association ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಬೆಂಗಳೂರು ಜಿಲ್ಲಾ ಘಟಕ ವಿಜಯಪುರ ವತಿಯಿಂದ  ಜಿಲ್ಲಾ ಸಮಾವೇಶ ರವಿವಾರ ದಿನಾಂಕ 20-10-2024 ರಂದು ಬೆಳಿಗ್ಗೆ  10-30 ಗಂಟೆಗೆ  ಕರ್ನಾಟಕ ಸರ್ಕಾರಿ ನೌಕರರ ಸಭಾ ಭವನದಲ್ಲಿ ಜರುಗಲಿದೆ.
ಇದನ್ನೂ ಓದಿ: Vijayapura News | ಉಚ್ಛ ನ್ಯಾಯಾಲಯಕ್ಕೆ ಸುಳ್ಳು ಅಫಿಡೆವಿಟ್ ಸಲ್ಲಿಸಿದ ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳು – ಜೈಲಿಗಟ್ಟಲು ಅರವಿಂದ ಕುಲಕರ್ಣಿ ಆಗ್ರಹ
ದಿವ್ಯ ಸಾನಿಧ್ಯವನ್ನು ಬುರಣಾಪೂರ ಸಿದ್ದಾರೂಢದ ಮಠದ ಪ.ಪೂ. ಶ್ರೀ ಯೋಗೇಶ್ವರಿ ಮಾತಾಜಿ ವಹಿಸಲಿದ್ದು ಸಾನಿಧ್ಯವನ್ನು ಗೊರನಾಳ ಓಂಕಾರೇಶ್ವರ ಆಶ್ರಮದ ಹಿರೇಮಠ ಪ.ಪೂ. ಡಾ. ವಿರುಪಾಕ್ಷ ದೇವರು ವಹಿಸುವರು. ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಎಲ್. ಭೈರಪ್ಪ ಉದ್ಘಾಟಿಸುವರು.
ಇದನ್ನೂ ಓದಿ: Vijayapura News | ಡಾ. ಅಣ್ಣಾಬಾವು ಸಾಠೆಯವರ ಮೂರ್ತಿ ಪ್ರತಿಷ್ಠಾಪನೆಗೆ ಆಗ್ರಹ
Government Retired Employees Association ಅಧ್ಯಕ್ಷತೆಯನ್ನು ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ರಾಜ್ಯ ಉಪಾಧ್ಯಕ್ಷರು ಹಾಗೂ ವಿಜಯಪುರ ಜಿಲ್ಲಾಧ್ಯಕ್ಷರು ಎಸ್.ಪಿ. ಬಿರಾದಾರ (ಕಡ್ಲೇವಾಡ) ವಹಿಸುವರು. ವಿಶೇಷ ಆಹ್ವಾನಿತರಾಗಿ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಉಪಾಧ್ಯಕ್ಷರು ಜಿ.ಸಿ. ಮಂಜುನಾಥ, ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಪ್ರಧಾನ ಕಾರ್ಯದರ್ಶಿ ರಂಗೇಗೌಡ, ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಖಜಾಂಚಿ ಎಸ್.ಎಂ. ಆನಂದಪ್ಪ ಕರ್ನಾಟಕ ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘ ಉಪಾಧ್ಯಕ್ಷರು  ಶ್ರೀಮತಿ ಎಸ್. ಶಾರದಮ್ಮ,  ಕ.ರಾ.ಸ.ನೌ.ಸಂಘ ಜಿಲ್ಲಾ ಹಾಗೂ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘ  ಅಧ್ಯಕ್ಷರು ಸುರೇಶ ಶೇಡಸ್ಯಾಳ,  ಹಿರಿಯ ನಾಗರಿಕ ಸಂಘ ಅಧ್ಯಕ್ಷರು ಎ.ವೈ. ಬೆಂಡಿಗೇರಿ, ಹಿರಿಯ ನಾಗರಿಕ ಸಂಘ ಬೆಳಗಾವಿ  ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮುದಕವಿ, ವಿ.ಬಿ. ಗೊವಿಂದಪ್ಪ ಸಿಂದಗಿ ತಾಲೂಕಾ ಕಾರ್ಯದರ್ಶಿ ಎಸ್.ಎನ್. ಬಿರಾದಾರ ಭಾಗವಹಿಸಲಿದ್ದಾರೆ ಎಂದು ಪ್ರಧಾನ ಕಾರ್ಯದರ್ಶಿ ಶ್ರೀಮತಿ ರೇಣುಕಾ ಹುಣಸಿಗಿಡದ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share the Post:

ಇತ್ತೀಚಿನ ಸುದ್ದಿಗಳು