Bagalkote News | ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಿಂದ ಶ್ರಮಧಾನ

Shramdhana image

ಬಾಗಲಕೋಟೆ: ಸ್ವಭಾವ ಸ್ವಚ್ಛತಾ, ಸಂಸ್ಕಾರ ಸ್ವಚ್ಛತಾ, ಎಂಬ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮದ ನಿಮಿತ್ಯ ಸ್ವಚ್ಛತಾ ಅಭಿಯಾನವನ್ನು ವಾಣಿಜ್ಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಜಾಗೃತಿ ಜಾಥಾ ಮೂಲಕ ಅರಿವು ಮೂಡಿಸುವುದುರ ಜೊತೆಗೆ ಹಳೆ ಬಾಗಲಕೋಟೆ ಬಸ್ ನಿಲ್ದಾಣದಲ್ಲಿ ಶ್ರಮಧಾನ (Shramdhana) ಗೈದು ಜಾಗೃತಿ ಮೂಡಿಸಿದರು.

ಬಿ.ವಿ.ವಿ.ಸಂಘದ ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಭಾರತ ಸ್ಕೌಟ್ ಅಂಡ್ ಗೈಡ್ ಹಾಗೂ ಭಾರತೀಯ ನೆಹರು ಯುವ ಕೇಂದ್ರ ಮತ್ತು ಗೌರಿ ಗಣೇಶ ಸಂಸ್ಕøತಿಕ ಸಂಘ ಕೆರೂರ ಸಹಯೋಗದಲ್ಲಿ ಸೋಮವಾರ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನಯಕ್ಕೆ ಚಾಲನೆ ನೀಡಿ ಮಾತನಾಡಿದ ಮಹಾವಿದ್ಯಾಲದ ಪ್ರಾಚಾರ್ಯರ ಡಾ. ಜಗನ್ನಾಥ ಚವ್ಹಾಣ ಅವರು ಮಹಾತ್ಮ ಗಾಂಧೀಜಿಯವರು ಹೇಳಿದಂತೆ ಸ್ವಚ್ಛತೆಯು ಉಸಿರಾದರೆ ಜೀವನ ಹಸಿರು ಮನೆಯಾಗುತ್ತದೆ.

ಇದನ್ನೂ ಓದಿ: Bagalkote News | ಸುಸ್ಥಿರ ಕೃಷಿ, ತೋಟಗಾರಿಕೆಗೆ ಜೀವಾಳ : ಕಲೈಸೆಲ್ವಿ

ಅದಕ್ಕಾಗಿ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ, ಮಹಾತ್ಮ ಗಾಂಧೀಜಿಯವರ ಪರಂಪರೆಯನ್ನು ಗೌರವಿಸಲು ಮತ್ತು ಸ್ವಚ್ಛತೆಯನ್ನು ಜೀವನದ ಮಾರ್ಗವನ್ನಾಗಿ ಮಾಡಲು ಶ್ರಮದಾನದ ಮೂಲಕ ಸಮಾಜದ ಸಹಭಾಗಿತ್ವದ ಮೂಲಕ ಸ್ವಚ್ಛತೆಯ ಅರಿವನ್ನು ಮೂಡಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದರು.

(Shramdhana) ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಪ್ರೋ.ಎಸ್.ಐ.ಪತ್ತಾರ ಮಾತನಾಡಿ ಈ ಸ್ವಭಾವ ಸ್ವಚ್ಛತಾ ಸಂಸ್ಕಾರ ಸ್ವಚ್ಛತಾ ಕಾರ್ಯಕ್ರಮ ಸಾಮೂಹಿಕ ಪ್ರಕ್ರಿಯೆ ಚೈತನ್ಯವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿ ಎಂದರು. ನೆಹರು ಯುವ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಸುಷ್ಮಾ ಗೌಳಿ ಮಾತನಾಡಿ ಸ್ವಚ್ಚತೆಗಾಗಿ ಕೇಂದ್ರ ಸರಕಾರದಿಂದ ಸಾಕಷ್ಟು ಯೋಜನೆಗಳು ಈಗಾಗಲೆ ಸಾಕಾರಗೊಂಡು ಯಶಸ್ಸು ಕಂಡಿವೆ, ಈ ಸ್ವಚ್ಚತಾ ಹಿ ಸೇವಾ ಅಭಿಯಾನದಲ್ಲಿ ಇಂದಿನ ಯುವ ಶಕ್ತಿ ಪಾಲ್ಗೋಂಡು ಯಶಸ್ವಿಗೊಳಿಸಿ ಎಂದರು.

ಇದನ್ನೂ ಓದಿ: Bagalkote News | ಅಮೂಲ್ಯಗೆ 16 ಚಿನ್ನದ ಪದಕ | ತೋವಿವಿಯಲ್ಲಿ 13ನೇ ಘಟಿಕೋತ್ಸವ |

ಐ.ಕ್ಯೂ. ಎ. ಸಿ ಸಂಯೋಜಕರಾದ ಶ್ರೀಮತಿ ಜಿ.ಎಂ ನಾವದಗಿ, ಸಿಬ್ಬಂದಿ ಕಾರ್ಯದರ್ಶಿಗಳಾದ ಎಂ ನಂಜುಂಡಸ್ವಾಮಿ, ಎನ್.ಎನ್.ಎಸ್ ಅಧಿಕಾರಿಗಳಾದ ಡಾ. ಎಂ ಎಂ ಹುದ್ದಾರ, ಗೌರಿ ಗಣೇಶ ಸಂಸ್ಕೃತಿಕ ಸಂಘ ಅಧ್ಯಕ್ಷರಾದ ಶ್ರೀಮತಿ ಪವಿತ್ರ ಜಕ್ಕಣ್ಣವರ, ನೆಹರು ಯುವ ಕೇಂದ್ರದ ಪದಾಧಿಕಾರಿಗಳಾದ ಶ್ರೀ ರಾಮರಾವ್ ಬಿರಾದಾರ, ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಶ್ರೀ ಎಂ ಎಚ್ ಚನ್ನಪ್ಪಗೋಳ, ದೈಹಿಕ ನಿರ್ದೇಶಕರಾದ ಡಾ.ಎಸ್ ಎಸ್ ಕೋಟ್ಯಾಳ್, ಡಾ.ಬ.ವೀ.ಖೋತ, ಶ್ರೀಮತಿ ಅಮೃತ ಗದ್ದನಕೇರಿ, ಶ್ರೀಮತಿ ಆಯ್ಕೆ ಮಠದ, ಪಿ.ಎಸ್. ಮಠದ ಅವರು ಸ್ವಚ್ಛತಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ನೆಹರು ಯುವ ಕೇಂದ್ರದವರು ಟೀ ಶರ್ಟ್, ಕ್ಯಾಪ್ ಹಾಗೂ ನೋಟ್ ಪ್ಯಾಡಗಳನ್ನು ವಿತರಿಸಿಲಾಯಿತು. ಬಸವೇಶ್ವರ ವಾಣಿಜ್ಯ ಮಹಾವಿದ್ಯಾಲಯದಿಂದ ಪ್ರಾರಂಭವಾಗ ಜಾಗೃತಿ ಜಾಥಾ ಹಳೆ ಬಸ್ ನಿಲ್ದಾಣದ ವರೆಗೆ ನಡೆದು ಅಲ್ಲಿ ಎಲ್ಲ ವಿದ್ಯಾರ್ಥಿಗಳು ಶ್ರಮಧಾನ ಮೂಲಕ ಸ್ವಚ್ಚತೆಗೊಳಿಸಿ ಜನರಲ್ಲಿ ಜಾಗೃತಿ ಮೂಡಿಸಿದರು.


Share the Post:

ಇತ್ತೀಚಿನ ಸುದ್ದಿಗಳು