ವಿಜಯಪುರ: ವಿಶ್ವ ಪ್ರವಾಸೋದ್ಯಮ ದಿನಾಚರಣೆ ಅಂಗವಾಗಿ ಪ್ರತಿಯೊಬ್ಬರು ತಮ್ಮ ಮನೆಯ ಸುತ್ತ ಮುತ್ತಲಿನ ವಾತಾವರಣ ಸ್ವಚ್ಚತೆ ಕಾಪಾಡಿ ನಗರದ ಸೌಂದರ್ಯೀಕರಣಕ್ಕೆ ಆದ್ಯತೆ ನೀಡಬೇಕು ಎಂದು ಮಹಾನಗರಪಾಲಿಕೆ ಉಪ ಮೇಯರ್ ದಿನೇಶ್ ಹಳ್ಳಿ ಹೇಳಿದರು.
ಪ್ರವಾಸೋದ್ಯಮ ಮತ್ತು ಶಾಂತಿ ಎಂಬ ಸಂದೇಶದಡಿಯಲ್ಲಿ ಸೆ.27ರ ನಡೆಯುವ ವಿಶ್ವ ಪ್ರವಾಸೋಧ್ಯಮ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ವಿಜಯಪುರ ಹೊಟೇಲ್ ಅಸೋಸಿಯೇಷನ್, ಸಜ್ಜನ ಪದವಿಪೂರ್ವ ಮಹಾವಿದ್ಯಾಲಯ, ಪೋಟೋಗ್ರಾಪರ್ ಅಸೋಶಿಯೇಷನ್ ಹಾಗೂ ಮ್ಯಾನ್ಯುಮೆಂಟಲ್ ಹೇರಿಟೆಜ್ ಸಿಟಿ ಅವರ ಸಹಯೋಗದಲ್ಲಿ ಗುರುವಾರ ಗೋಳಗುಮ್ಮಟದ ಆವರಣದಲ್ಲಿ ಸ್ವಚ್ಚತಾ ಹೀ ಸೇವಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಇದನ್ನೂ ಓದಿ: ರಾಹುಲ ಗಾಂಧಿ ಮೀಸಲಾತಿ ವಿರೋಧಿ ಎಂಬಂತೆ ಬಿಂಬಿಸುತ್ತಿರುವ ಬಿಜೆಪಿ ಜೆಡಿಎಸ್ ನಡೆಯನ್ನು ಖಂಡಿಸಿ ಬೃಹತ್ ಪ್ರತಿಭಟನೆ
ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕರಾದ ಮಲ್ಲಿಕಾರ್ಜುನ ಭಜಂತ್ರಿ, ಇಗ್ನೋ ಪ್ರಾದೇಶಿಕ ನಿರ್ದೇಶಕರು, ಗೋಳಗುಮ್ಮಟದ ಸಹಾಯಕ ಸಂರಕ್ಷಾಣಾಧಿಕಾರಿ ವಿಜಯಕುಮಾರ, ಪೀಟರ್ ಅಲೆಕ್ಸಾಂಡರ್, ಅಮೀನ್ ಹುಲ್ಲೂರು, ರಮೇಶ ಚವ್ಹಾಣ, ಜಗದೇವಿ ಕೆಂಬಾವಿ, ಬುಡ್ಡಾಸಾಬ್ ಕುಡುಪಲಿ, ಅನಿಲಕುಮಾರ ಬಣಜಿಗೇರ ಸೇರಿದಂತೆ ಪ್ರವಾಸಿ ಮಿತ್ರ, ಎಎಸ್‍ಐ ಸಿಬ್ಬಂದಿಗಳು ಉಪಸ್ಥಿತರಿದ್ದರು.






