ವಿಜಯಪುರ: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಾ. ಡಿ.ಜಿ. ಸಾಗರ ಬಣದಿಂದ ವಿರೋಧ ಪಕ್ಷದ ನಾಯಕರಾದ ರಾಹುಲ ಗಾಂಧಿ ಮೀಸಲಾತಿ ವಿರೋಧಿ ಎಂಬಂತೆ ಬಿಂಬಿಸುತ್ತಿರುವ ಬಿಜೆಪಿ ಜೆಡಿಎಸ್ ನಡೆಯನ್ನು ಖಂಡಿಸಿ ನಗರದ ಡಾ. ಅಂಬೇಡ್ಕರ ವೃತ್ತದಿಂದ ಬೃಹತ್ ಪ್ರತಿಭಟನೆ.
ಒಂದು ದೇಶ ಚುನಾವಣಿಯ ಜಾರಿಗೆ ನಿರ್ಧರಿಸಿದ ಕೇಂದ್ರ ಸರಕಾರ ತನ್ನ ನಿರ್ಧಾರ ವಾಪಸ್ ಪಡೆಯಬೇಕು ಹಾಗೂ ಶಾಸಕ ಮುನಿರತ್ನ ಜಾತಿನಿಂದನೆ ಜೀವ ಬೆದರಿಕೆ ಮಹೆಳೆ ಮೇಲೆ ಅತ್ಯಾಚಾರ ಎಸಗಿದರೆನ್ನಲಾದ ಇವರನ್ನು ಕಠಿಣ ಶಿಕ್ಷಕೆ ಗುರಿ ಪಡಿಸಬೇಕೆಂದು ಒತ್ತಾಯಿಸಿ ಧರಣಿ ಮುಖಾಂತರ ಅಪರ ಜಿಲ್ಲಾಧಿಕಾರಿಗಳಾದ ಸೋಮನಿಂಗ ಗೆಣ್ಣೂರ ಅವರಿಂದ ಮಾನ್ಯಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಇದನ್ನೂ ಓದಿ: ಅಹಿಂದ ನಾಯಕ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಂಚು ಮಾಡಿ ಮುಗಿಸಲು ಹೊರಟಿರುವ ಕೋಮುವಾದಿ ಬಿಜೆಪಿ
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರಾದ ಸಿದ್ದು ರಾಯನ್ನವರ ಮಾತನಾಡಿ ಒಂದು ದೇಶ ಒಂದು ಚುನಾವಣಿಯ ಇದೊಂದು ಕೇಂದ್ರ ಸರ್ಕಾರದ ಅಜೆಂಡಾದ ಭಾಗ: ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಇದನ್ನು ಅನುಷ್ಟಾನ ಮಾಡುವುದಕ್ಕೆ ಸಾಧ್ಯವೆ ಇಲ್ಲ.
ಆಡಳಿತರೂಡ ಬಿಜೆಪಿಯು ಗುಪ್ತ ಅಜೆಂಡಾವನ್ನು ಒಳಗೊಂಡಿರುವ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪವನ್ನು ಸಂಸತ್ ಒಳಗೆ ಮತ್ತು ಹೊರಗೆ ದೇಶದ ಜನಾಭಿಪ್ರಾಯವೂ ಒಂದು ದೇಶ ಒಂದು ಚುನಾವಣೆಯ ವ್ಯವಸ್ಥೆಗೆ ವಿರುದ್ಧವಾಗಿದೆ. ರಾಹುಲ ಗಾಂಧಿ
ಇದನ್ನೂ ಓದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹ ಜಿಲ್ಲಾ ಬಿಜೆಪಿಯಿಂದ ಬೃಹತ ಪ್ರತಿಭಟನೆ | ಆರ್.ಎಸ್.ಪಾಟೀಲ ಕೂಚಬಾಳ
ಒಂದು ದೇಶ ಚುನಾವಣೆಯ ವ್ಯವಸ್ಥೆಯ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಲೋಕಸಭೆ ಇಲ್ಲವೇ ವಿಧಾನಸಭೆಯಲ್ಲಿ ಅಡಳಿತೋಡ ಪಕ್ಷ ವಿಶ್ವಾಸ ಮತ ಗಳಿಸಲು ಸೋತರೆ ಎದುರಾಗುವ ಬಿಕ್ಕಟ್ಟಿಗೆ ಪ್ರಸ್ತಾಪದಲ್ಲಿ ಪರಿಹಾರವಿಲ್ಲ ಇಂತಹ ಸಂದರ್ಭದಲಿ ಮಧ್ಯಂತರ ಚುನಾವಣೆಯೊಂದೆ ಯೋಗ ಪರಿಹಾರವಾಗಿದೆ.
ಇದರ ಬದಲಿಗೆ ಸದನದಲ್ಲಿ ವಿಶ್ವಾಸ ಮತ ಗಳಿಸಲು ವಿಫಲವಾದ ಅಲ್ಪಸಂಖ್ಯಾತರ ಅಧಿಕಾರದಲ್ಲಿ ಮುಂದರೆಯಲು ಅವಕಾಶ ನೀಡಿದರೆ ಅದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಗದ ದ್ರೋಹವಾಗುತ್ತದೆ. ಇಡೀ ದೇಶದಲ್ಲಿ ಒಂದೇ ಬಾರಿ ಲೋಕಸಭೆ ಮತ್ತು ವಿಧಾನ ಸಭಾ ಚುನಾವಣೆಗಳನ್ನು ನಡೆಸುವ ಶಕ್ತಿ ಸಾಮರ್ಥ್ಯ, ನಮ್ಮ ಈಗ ಇರುವ ಚುನಾವಣೆ ಆಯೋಗಕ್ಕೆ ಇಲ್ಲ.
ಇದನ್ನೂ ಓದಿ: ಕನ್ನಡ ಸಾಹಿತ್ಯ ಪರಿಷತ್ತಿಗೆ ಶತಮಾನದ ಇತಿಹಾಸವಿದೆ: ಹಾಸಿಂಪೀರ ವಾಲಿಕಾರ
ನಮ್ಮ ಚುನಾವಣಾ ವ್ಯವಸ್ಥೆಯನ್ನು ದುಪ್ಪಟ್ಟು ಪ್ರಮಾಣದಲಿ ವಿಸ್ತರಿಸಬೇಕಾಗುತ್ತದೆ. ಇವೆಲ್ಲವೂ ಅವಸರದಿಂದ ಮಾಡುವ ಕೆಲಸ ಅಲ್ಲ. ಹೊಸ ಚುನಾವಣಾ ವ್ಯವಸ್ಥೆ ಜಾರಿಗೆ ಬರಬೇಕಾದರೆ ಮೊದಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಇದರ ಜೊತೆಗೆ ಸಂವಿಧಾನದ ಕೈ ತಿದ್ದುಪಡಿ ತರಬೇಕಾಗುತ್ತದೆ.
ಇವೆಲ್ಲವೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಗೊತ್ತಿದ್ದರೂ ಕೇವಲ ಜನರಲ್ಲಿ ಗೊಂದಲವನ್ನು ಹುಟ್ಟು ಹಾಕಿ ತಮ್ಮ ವೈಪಲ್ಯವನ್ನು ಮುಚ್ಚಿ ಹಾಕಲು ಈ ಕೆಲಸವನ್ನು ಮಾಡಲಾಗಿದೆ. ಘನತೆವೆತ್ತ ರಾಷ್ಟ್ರಪತಿಗಳು ಇದನ್ನೆಲ್ಲವನ್ನು ಗಮನ ಹರಿಸಿ ಕ್ರಮಕೈಗೊಳ್ಳಬೇಕೆಂದರು.
ಡಿಎಸ್ಎಫ್ ವಿಜಯಪುರ ಜಿಲ್ಲಾ ಸಂಚಾಲಕರು ವಾಯ್.ಸಿ. ಮಯೂರ ಮಾತನಾಡಿ ಒಕ್ಕಲಿಗ ಮತ್ತು ದಲಿತ ಸಮುದಾಯಗಳನ್ನು ಅವಹೇಳನ ಮಾಡುವ ರೀತಿಯಲ್ಲಿ ಮತ್ತು ಮಹಿಳೆ ಮೇಲೆ ಅತ್ಯಾಚಾರ ಕೇಸವನ್ನು ಎದುರಿಸುತ್ತಿರುವ ಮುನಿರತ್ನ ಶಾಸಕರು ಈಗ ಜೈಲಿನಲ್ಲಿದ್ದಾರೆ.
ಇದನ್ನೂ ಓದಿ: ರಾಜಕಾಲುವೆ ಅತಿಕ್ರಮಣ ತೆರವಿಗೆ ಸಚಿವ ಡಾ. ಎಂ.ಬಿ. ಪಾಟೀಲನ ಸೂಚನೆ: ಮಳೆ ಹಾನಿ ತಡೆಯಲು ಅಗತ್ಯ ಕ್ರಮ
ಇದನ್ನೆಲ್ಲಾ ತನಿಖೆ ಮಾಡುವದಕ್ಕೆ ವಿಶೇಷ ತನಿಖಾ ತಂಡ ರಚಿಸಿರುವುದು ಸರಕಾರದ ನಿರ್ಧಾರ ಸಮಿತಿಯು ಸ್ವಾಗತಿಸುತ್ತದೆ. ಆದರೆ ಈ (ಎಸ್.ಆಯ್. ಎಸ್.ಆಯ್.ಟಿ)ಯನ್ನು ಕಾಲಬದ್ಧವಾದ ಹಾಕಿಕೊಂಡು ತನಿಖೆ ನಡೆಸಬೇಕು. ಶಾಸಕ ಮುನಿರತ್ನರ ಮೇಲೆ ಒಂದರಮೆಲೊಂದು ಒಂದು ಅಪರಾದ ಮಾಡಿದ ಘಟನೆಗಳ ಹೊರಬರುತ್ತಿದ್ದಾವೆ.
ರಾಮನಗರ ಜಿಲ್ಲೆಯ ವ್ಯಾಪ್ತಿಯ ಕಗ್ಗಲಪೂರ ಪೋಲಿಸ್ ಠಾಣೆಯಲ್ಲಿ ಮಹಿಳೆ ನೀಡಿದ ದೂರಿನ ಮೇಲೆ ಕೇಸು ಇವರ ಸಹಚರರ ಮೇಲೆ ಕೇಸು ದಾಖಲಾಗಿದೆ. ಈ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಶಾಂತ ತೊರವಿ, ಅರುಣ ಗವಾರಿ, ಬಾಬು ಗುಡಮಿ, ಶರಣು ಚಲವಾದಿ, ನೀಲಕಂಠ ಹೊಸಮನಿ, ಜೈಭೀಮ ಕುಚಬಾಳ, ಯಮನು ಬೆರನಳ್ಳಿ, ಶಿವು ಗಂಗೋರ, ಅನಿಲ ಹಚ್ಚಾಳ, ಜೈಭೀಮ ತಳಕೇರಿ, ಸುನೀಲ ನಾಗಠಾಣ, ಜಾನು ಗುಡಿಮನಿ, ಜೈಭೀಮ ನಾಯ್ಕೋಡಿ ಮತ್ತಿತರರು ಉಪಸ್ಥಿತರಿದ್ದರು.






