ವಿಜಯಪುರ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬ TPJP Satyagraha ಪದಾಧಿಕಾರಿಗಳು ವಿಜಯಪುರ ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದ ಮುಂದೆ ಹಮ್ಮಿಕೊಂಡ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಬುಧವಾರ 11ನೇ ದಿನಕ್ಕೆ ಕಾಲಿಟ್ಟಿದೆ.
ಈ ಸಂದರ್ಭದಲ್ಲಿ ದಮಯಂತಿ ಕುಲಕರ್ಣಿ ಮಾತನಾಡಿ, ಬಡವರು ಕೂಲಿ ಮಾಡಿ ತುಂಬಿದ ದುಡ್ಡನ್ನು ಕಂಪನಿ ಮೋಸ ಮಾಡಿ ವಂಚಿಸಿದ್ದಾರೆ. ಹಾಗೂ ಬಡವರ ಹಣವನ್ನು ಲಪಟಾಯಿಸಿದ್ದಾರೆ. ಈಗಾಗಲೇ 10 ವರ್ಷಗಳು ಗತಿಸಿದರು ಯಾವುದೇ ಸರ್ಕಾರ ಗಮನ ಹರಿಸುತ್ತಿಲ್ಲ. ಆದರಿಂದ ಕೂಡಲೇ ಸರ್ಕಾರ ಮಧ್ಯೆ ಪ್ರವೇಶಿಸಿ ಬಡವರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿದರು.
TPJP Satyagraha
ಸಂಘಟನೆಯ ರಾಜ್ಯಾಧ್ಯಕ್ಷರಾದ ಅಪ್ಪಾಸಾಹೇಬ ಬುಗಡೆ ಮಾತನಾಡಿ, ಅದೇನೆ ಇದ್ದರೂ ನಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿ ಕುಳಿತು ಇಂದಿಗೆ 11 ದಿನಗತಿಸಿದರೂ ಯಾವೊಬ್ಬ ಜನಪ್ರತಿನಿಧಿಗಳು ಧರಣಿ ನಿರತ ಸ್ಥಳಕ್ಕೆ ಆಗಮಿಸದಿರುವುದು ಅವರ ಜಾಣ ಕುರುಡುತನ ಎತ್ತಿ ತೋರಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ : ಕೇಂದ್ರ ಸರಕಾರದ ವಿರುದ್ಧ ಆಕ್ರೋಶ
ಈ ಸಂದಂರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶಿವಶರಣ ಬಿ. ಸಿನ್ನೂರ, ಕಾರ್ಯದರ್ಶಿ ರಾಜಶೇಖರ ಕೆ.ದೊಡಮನಿ, ತಾಲೂಕಾ ಮುಖಂಡರಾದ ಲಕ್ಷ್ಮೀ ಪಾಟೀಲ, ಲಾಲಸಾಬ ವಾಲಿಕಾರ, ಆರ್.ಪಿ.ಮಹೀಂದ್ರಕರ, ಬಾಬು ಪಟೇಲ ಬಿರಾದಾರ, ಗೌಡಪ್ಪಗೌಡ ಕಂಠಿ, ಮಹಾದೇವಿ ತೋಟದ, ಅನ್ನಪೂರ್ಣ ಬಳಗಾನೂರ, ಶಿವಲೀಲಾ ಬಾಗೇವಾಡಿ, ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ವಿಜಯಪುರ Vijayapura ಎಂದಾಕ್ಷಣ ನಮಗೆ ಮೊದಲು ನೆನಪಿಗೆ ಬರುವುದು ಐತಿಹಾಸಿಕ ತಾಣ ಗೋಲಗುಮಟ್ಟ. ಜಿಲ್ಲೆಯು ರಾಜಕೀಯವಾಗಿ Politics, ಸಮಾಜಿಕವಾಗಿ Social, ಬಹಳಷ್ಟು ಬೆಳೆದಿದೆ. ಅಲ್ಲದೇ ಶಿಕ್ಷಣ Education, ಆರೋಗ್ಯ Health ಕ್ಷೇತ್ರದಲ್ಲೂ ಸಾಕಷ್ಟು ಹೆಸರು ಮಾಡಿದೆ. ಕರ್ನಾಟಕ ರಾಜ್ಯಾದ್ಯಂತ ಶಿಕ್ಷಣದಲ್ಲೂ ಜಿಲ್ಲೆಗೆ ಕೀರ್ತಿ ಬಂದಿದೆ.
ಪ್ರಾದೇಶಿಕ ಮತ್ತು ರಾಷ್ಟ್ರೀಯ ಚುನಾವಣೆಗಳಲ್ಲಿ ಎಲ್ಲರ ಕಣ್ಣು ಜಿಲ್ಲೆಯ ಮೇಲೆ ಇರುವಂತೆ ಇಲ್ಲಿ ಚುನಾವಣೆಗಳು ನಡೆಯುತ್ತವೆ. ಆದರೂ ಸ್ಥಳೀಯ ಆಡಳಿತದಲ್ಲಿ ಗುಣಮಟ್ಟ ಕಾಪಾಡಿಕೊಂಡು ಕೆಲಸ ಮಾಡುವ ಜನರು ಜಿಲ್ಲೆಯಲ್ಲಿದ್ದಾರೆ. ಗ್ರಾಮೀಣ ಮತ್ತು ನಗರ ಜನಸಂಖ್ಯೆಯ ಅಗತ್ಯತೆಗಳನ್ನು ಪೂರೈಸುವಲ್ಲಿ ಜಿಲ್ಲೆ ಮುಂಚೂಣಿಯಲ್ಲಿದೆ.
ಶಿಕ್ಷಣದಲ್ಲಿ Education ವಿಜಯಪುರವು ಸಾಕ್ಷರತೆಯ ಪ್ರಮಾಣವನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ವಿವಿಧ ಶಾಲೆಗಳು ಮತ್ತು ಕಾಲೇಜುಗಳೊಂದಿಗೆ ದಾಪುಗಾಲು ಹಾಕಿದೆ. ಆದಾಗ್ಯೂ, ಸವಾಲುಗಳು ಉಳಿದಿವೆ, ವಿಶೇಷವಾಗಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಇಲ್ಲಿನ ಸರಕಾರಿ/ಸರಕಾರೇತರ ಶಿಕ್ಷಣ ಸಂಸ್ಥೆಗಳು ಹಗಲಿರುಳು ಶ್ರಮಿಸುತ್ತಿವೆ.
ಗ್ರಾಮೀಣ ಭಾಗದಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಲು ಹಲವಾರು ಸಂಘ/ಸಂಸ್ಥೆಗಳು ತಮ್ಮ ಕಾಯಕದಲ್ಲಿ ತೊಡಗಿಕೊಂಡಿವೆ. ಶೈಕ್ಷಣಿಕ ಮೂಲಸೌಕರ್ಯ ಮತ್ತು ಶಿಕ್ಷಕರ ತರಬೇತಿಯನ್ನು ಹೆಚ್ಚಿಸಲು ಪ್ರಯತ್ನಗಳು ನಡೆಯುತ್ತಿವೆ.
ಆರೋಗ್ಯದ ದೃಷ್ಟಿಯಿಂದ Health, ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳು ಮತ್ತು ಖಾಸಗಿ ಚಿಕಿತ್ಸಾಲಯಗಳು ಸೇರಿದಂತೆ ಹಲವಾರು ಆರೋಗ್ಯ ಸೌಲಭ್ಯಗಳಿವೆ. ಅದಾಗ್ಯೂ ಮೂಲಭೂತ ಆರೋಗ್ಯ ಸೇವೆಗಳು ಲಭ್ಯವಿದ್ದರೂ, ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸುವ ಅವಶ್ಯಕತೆಯಿದೆ.
ಸಾಮಾಜಿಕವಾಗಿ Social, ವಿಜಯಪುರವು ತನ್ನ ಸಾಂಸ್ಕೃತಿಕ ವೈವಿಧ್ಯತೆ ಮತ್ತು ಕೃಷಿ ಆರ್ಥಿಕತೆಯಿಂದ ನಿರೂಪಿಸಲ್ಪಟ್ಟಿದೆ. ಜಿಲ್ಲೆಯು ಬಡತನ ಮತ್ತು ಸೀಮಿತ ಆರ್ಥಿಕ ಅವಕಾಶಗಳಂತಹ ಸವಾಲುಗಳನ್ನು ಎದುರಿಸುತ್ತಿದೆ, ಇದು ಸಾಮಾಜಿಕ ಅಭಿವೃದ್ಧಿಯ ಮೇಲೆ ಪರಿಣಾಮ ಬೀರುತ್ತದೆ.
ವಿವಿಧ ಸರ್ಕಾರಿ ಯೋಜನೆಗಳು ಮತ್ತು ಎನ್ಜಿಒಗಳು ಜೀವನ ಮಟ್ಟವನ್ನು ಸುಧಾರಿಸಲು ಕೆಲಸ ಮಾಡುತ್ತವೆ, ಸಬಲೀಕರಣ ಮತ್ತು ಸಮುದಾಯ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತವೆ. ಹೀಗಾಗಿ ಜಿಲ್ಲೆಯ ಬೆಳವಣಿಗೆಯಲ್ಲಿ ಹಲವರ ಸಾಧನೆ, ನಿಸ್ವಾರ್ಥ ಸೇವಾ ಮನೋಭಾವದಿಂದ ಜಿಲ್ಲೆ ಅಭಿವೃದ್ಧಿಯತ್ತ ಸಾಗುತ್ತಿದೆ.





