District-Level Art Competition : ಲಲಿತ ಕಲಾ ಸಂಸ್ಥೆ ವತಿಯಿಂದ

District-Level Art Competition image

ವಿಜಯಪುರ : ಜಿಲ್ಲಾ ಮಟ್ಟದ ಚಿತ್ರಕಲಾ ಸ್ಪರ್ಧೆ (District-Level Art Competition) ಹಾಗೂ ಹಿರಿಯ ಕಲಾವಿದರಿಗೆ ಸನ್ಮಾನ ಸಮಾರಂಭವು ಗುರುವಾರ ಸರಕಾರಿ ಆರ್ಟ್ ಗ್ಯಾಲರಿ ಪ್ರವಾಸೋದ್ಯಮ ಇಲಾಖೆ, ಹಳೆ ಐ.ಬಿ. ಸ್ಟೇಷನ್ ರೋಡ್ ವಿಜಯಪುರದಲ್ಲಿ ಯುವ ಲಲಿತ ಕಲಾ ಸಂಸ್ಥೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಮಹಾನಗರ ಪಾಲಿಕೆಯ ಸದಸ್ಯರಾದ ಪ್ರೇಮಾನಂದ ಬಿರಾದಾರ ಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರಾದ ಪಿ.ಎಸ್. ಕಡೇಮನಿ ಮುಖ್ಯ ಅಥಿತಿಯಾಗಿ ಆಗಮಿಸಿದರು. ಉದ್ಯಮಿದಾರರಾದ ಯಶವಂತ ಗುಗ್ಗರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. (District-Level Art Competition) ಮಕ್ಕಳಿಂದ ಚಿತ್ರಕಲಾ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ಪ್ರಥಮ, ದ್ವೀತಿಯ, ತೃತೀಯ ಮೂರು ಭಾಗಗಳಾಗಿ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ಇದನ್ನೂ ಓದಿ: Inter-District State-Level Junior Sports Meet

ಇದಾದ ನಂತರ ನಾಡಿನ ಹಿರಿಯ ಕಲಾವಿದರಾದ ಪಿ.ಎಸ್. ಕಡೇಮನಿ, ಎಮ್.ಕೆ. ಪತ್ತಾರ, ಎಸ್.ಟಿ. ಕೆಂಭಾವಿ, ವಿದ್ಯಾದರ ಸಾಲಿ, ಬಿ.ಎಸ್. ಪಾಟೀಲ, ವಿ.ವಿ. ಹಿರೇಮಠ ಇವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಯುವ ಲಲಿತ ಕಲಾ ಸಂಸ್ಥೆಯ ಸಂಚಾಲಕರಾದ ಗಿರಿಜಾ ಬಿರಾದಾರ, ಕಾಜು ಶಿಂಗೆ, ಗಣೇಶ ನಾಶಿ, ಸಚೀನ ಚವ್ಹಾಣ, ಲಕ್ಷ್ಮಣ ಸಿಗ್ನಾಪೂರ, ಅಕ್ಷಯ ಪಾವನೆ, ಅಜಯ ಕೋಲಕಾರ, ನಿತೀನ ಕುಮಾರ ಬಬಲೇಶ್ವರ, ರಾಹುಲ ಬಬಲೇಶ್ವರ, ಹಾಜ್ಮಾ ಹುದ್ದಾರ ಇನ್ನಿತರರು ಇದ್ದರು. ಯುವ ಲಲಿತಕಲಾ ಸಂಸ್ಥೆಯ ಅಧ್ಯಕ್ಷರಾದ ವಿಶ್ವನಾಥ ಅಗಸರ ಕಾರ್ಯಕ್ರಮ ನಿರೂಪಿಸುವುದರೊಂದಿಗೆ ವಂದಿಸಿದರು.


Share the Post:

ಇತ್ತೀಚಿನ ಸುದ್ದಿಗಳು